ಮಾರ್ಚ್ 4, 2020 ಬುಧವಾರ [ನೇರಳೆ]
ಸಂತ ಕಾಸಿಮಿರ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೋನ 3.1-10
ಕೀರ್ತನೆ 51:1-2, 10-11, 16-17. ಶ್ಲೋಕ.17
ನೊಂದ ಬೆಂದ ಮನವನಾತ ಒಲ್ಲೆಯೆನ್ನನು
ಶುಭಸಂದೇಶ: ಲೂಕ 11.29-32
ಕೀರ್ತನೆ 51:1-2, 10-11, 16-17. ಶ್ಲೋಕ.17
ನೊಂದ ಬೆಂದ ಮನವನಾತ ಒಲ್ಲೆಯೆನ್ನನು
1 : ಕೃಪಾಳು, ದೇವಾ, ಕರುಣಿಸೆನ್ನನು / ಕರುಣಾನಿಧಿ, ಅಳಿಸೆನ್ನ ದೋಷವನು //
2 : ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು / ದೋಷಪರಿಹರಿಸಿ ಶುದ್ಧಗೊಳಿಸೆನ್ನನು //
10 : ಶುದ್ಧ ಹೃದಯವನು ದೇವಾ, ನಿರ್ಮಿಸು / ಅಂತರಂಗವನು ಚೇತನಗೊಳಿಸು //
11 : ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ / ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ //
16 : ಬಲಿಯರ್ಪಣೆಯಲಿ ನಿನಗೊಲವಿಲ್ಲ | ದಹನ ಬಲಿಯಿತ್ತರು ನಿನಗೆ ಬೇಕಿಲ್ಲ ||
17 : ಮುರಿದ ಮನವೇ ದೇವನೊಲಿವ ಯಜ್ಞವು / ನೊಂದು ಬೆಂದ ಮನವನಾತ ಒಲ್ಲೆಯೆನನು //
-----------------------
ಶುಭಸಂದೇಶ: ಲೂಕ 11.29-32
ಚಿಂತನೆ
ಸಂತ ಕಾಸಿಮಿರ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೋನ 3.1-10
ಕೀರ್ತನೆ 51:1-2, 10-11, 16-17. ಶ್ಲೋಕ.17
ನೊಂದ ಬೆಂದ ಮನವನಾತ ಒಲ್ಲೆಯೆನ್ನನು
ಶುಭಸಂದೇಶ: ಲೂಕ 11.29-32
---------------------------------
ಮೊದಲ ವಾಚನ: ಯೋನ 3.1-10
1 : ಯೋನನಿಗೆ ಆ ಸ್ವಾಮಿಯ ವಾಣಿ ಪುನಃ ಕೇಳಿಸಿತು:
2 : “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು,” ಎಂದಿತು.
3 : ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು.
4 : ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, “ಜನರೇ ಕೇಳಿ: ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು,” ಎಂದನು.
5 : ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ – ಎಲ್ಲರೂ ಮನಃಪರಿವರ್ತನೆಯ ಚಿಹ್ನೆಯಾಗಿ ಗೋಣಿತಟ್ಟನ್ನು ಉಟ್ಟುಕೊಂಡರು.
6 : ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು.
7 : ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: “ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು.
8 : ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು.
9 : ಹೀಗೆ ಮಾಡಿದ್ದೇ ಆದರೆ, ದೇವರು ಒಂದುವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು.”
10 : ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು.
----------------------------ಕೀರ್ತನೆ 51:1-2, 10-11, 16-17. ಶ್ಲೋಕ.17
ನೊಂದ ಬೆಂದ ಮನವನಾತ ಒಲ್ಲೆಯೆನ್ನನು
1 : ಕೃಪಾಳು, ದೇವಾ, ಕರುಣಿಸೆನ್ನನು / ಕರುಣಾನಿಧಿ, ಅಳಿಸೆನ್ನ ದೋಷವನು //
2 : ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು / ದೋಷಪರಿಹರಿಸಿ ಶುದ್ಧಗೊಳಿಸೆನ್ನನು //
10 : ಶುದ್ಧ ಹೃದಯವನು ದೇವಾ, ನಿರ್ಮಿಸು / ಅಂತರಂಗವನು ಚೇತನಗೊಳಿಸು //
11 : ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ / ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ //
16 : ಬಲಿಯರ್ಪಣೆಯಲಿ ನಿನಗೊಲವಿಲ್ಲ | ದಹನ ಬಲಿಯಿತ್ತರು ನಿನಗೆ ಬೇಕಿಲ್ಲ ||
17 : ಮುರಿದ ಮನವೇ ದೇವನೊಲಿವ ಯಜ್ಞವು / ನೊಂದು ಬೆಂದ ಮನವನಾತ ಒಲ್ಲೆಯೆನನು //
-----------------------
ಶುಭಸಂದೇಶ: ಲೂಕ 11.29-32
29 : ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು.
30 : ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು.
31 : “ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
32 : ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
-------------------------------------
ಇಂದಿನ ಮೊದಲನೆಯ ವಾಚನ ಮತ್ತು ಶುಭಸಂದೇಶದಲ್ಲಿ ಅಸ್ಸೀರಿಯದ ಯೋನನ ಬಗ್ಗೆ ಆಲಿಸುತ್ತೇವೆ. ಹಿಬ್ರೂ ಭಾಷೆಯಲ್ಲಿ ಯೋನ ಎಂದರೆ ಪಾರಿವಾಳ ಎಂದರ್ಥ. ದೇವರು ಯೋನನನ್ನು ನಿನೆವೆಗೆ ಹೋಗಿ ಪ್ರವಾದಿಸಲು ಆಜ್ಞಾಪಿಸುತ್ತಾರೆ. ನಿನೆವೆ ನಗರವು ಅಸ್ಸೀರಿಯದ ರಾಜಧಾನಿ. ಕಿ. ಪೂ 722ರಲ್ಲಿ ಅಸ್ಸೀರಿಯದವರು ಇಸ್ರಾಯೇಲರ ಮೇಲೆ ದಂಡೆತ್ತಿ ಬಂದು ಅವರನ್ನು ನಾಶಪಡಿಸುತ್ತಾರೆ. ಹಾಗಾಗಿ ಇಸ್ರೆಯೇಲರು ಅಸ್ಸೀರಿಯದವರನ್ನು ದ್ವೇಷಿಸುತ್ತಿದ್ದರು. ಆದರೆ ದೇವರು ಎಲ್ಲರನ್ನು ಪ್ರೀತಿಸುತ್ತಾರೆ. ಅನ್ಯದೇವರನ್ನು ಪೂಜಿಸುತ್ತಿದ್ದ ನಿನೆವೆ ಜನರು ಯೋನನ ಪ್ರವಾದನೆ ಆಲಿಸಿ ಮನಪರಿವರ್ತನೆಯಾದರು. ಆದರೆ 400 ವರ್ಷಗಳಿಂದ ರಕ್ಷಕನ ಬರುವಿಕೆಗಾಗಿ ಎದುರುನೋಡುತ್ತಿದ್ದ ಇಸ್ರಾಯೇಲರು ರಕ್ಷಕನು ಬಂದಾಗ ತಿರಿಸ್ಕರಿಸಿದರು. ಆತನನ್ನು ಸ್ವೀಕರಿಸದೆ, ಆತನಲ್ಲಿ ವಿಶ್ವಾಸಿಸಲು ಅದ್ಭುತಕಾರ್ಯಗಳನ್ನು ಅಪೇಕ್ಷಿಸುತ್ತಾರೆ. ನಮ್ಮ ವಿಶ್ವಾಸ ಅದ್ಭುತಕಾರ್ಯಗಳ ಮೇಲೆ ಅವಲಂಬಿತವಾಗಿರಬಾರದು.
----------------------------
ಸುಮಾರು ಮೂರು ವರ್ಷ ಧಾರವಾಡದ ಜೈಲಿಗೆ ಭೇಟಿಕೊಟ್ಟಾಗ ಕಾರಾಗೃಹದಲ್ಲಿರುವ ವ್ಯಕ್ತಿಗಳು ನನ್ನೊಡನೆ ಹಂಚಿಕೊಂಡಿದ್ದು ಇಷ್ಟೇ. "ಆಗಿರುವ ಕೆಟ್ಟದ್ದನ್ನೆಲ್ಲ ಮರೆತು ಒಳ್ಳೆಯ ಮನುಷ್ಯರಾಗಬೇಕು. ಈ ಅನುಭವ ಎಲ್ಲವನ್ನು ನಮಗೆ ಕಲಿಸಿದೆ". ಇಂತಹ ಮನಪರಿವರ್ತನೆ ಹೊಂದಿದ ಅನೇಕರು ನಮ್ಮ ಸಮಾಜದಲ್ಲಿ ಸಿಗುತ್ತಾರೆ. ಪೆನ್ಸಿಲ್ಲನ್ನು ಪದೇ ಪದೇ ಚೂಪಾಗಿಸಿದರೆ ಮಾತ್ರ ಉಪಯೋಗಿಸಲು ಯೋಗ್ಯ. ಅದೇ ರೀತಿ ನಮ್ಮ ಹಳೆಯ ಜೀವನವನ್ನು ಆಗಾಗ ಅವಲೋಕಿಸಿ ನೋಡಿ ಕೆಟ್ಟದನ್ನು ತ್ಯಜಿಸಿ ಹೊಸ ಮಾರ್ಗದಲ್ಲಿ ಮುನ್ನಡೆಯಬೇಕು. ಆಗಲೇ ಜೀವನಕ್ಕೆ ಅರ್ಥ ಬರುವುದು. ಪ್ರವಾದಿ ಯೋನನ ಸಂದೇಶವನ್ನು ಕೇಳಿ, ರಾಜನಿಂದ ಹಿಡಿದು ಎಲ್ಲಾ ಪ್ರಜೆಗಳು ತಾವು ಮಾಡಿದಂತಹ ಎಲ್ಲಾ ಪಾಪಗಳನ್ನು ನೆನೆಸಿ ಮನಪರಿವರ್ತನೆ ಹೊಂದುತ್ತಾರೆ. ಶುಭಸಂದೇಶದಲ್ಲಿ ಯಹೂದ್ಯರು ಆ ಪರಿವರ್ತನೆಗೆ ತಡೆಗೋಡೆಯನ್ನು ತಾವೇ ಹಾಕಿಕೋಳ್ಳುತ್ತಾರೆ. ತಮ್ಮ ಹಳೆಯ ಸ್ವಭಾವದಲ್ಲಿ ಕೊಳೆಯಲು ಸಮ್ಮತಿಸುತ್ತಾರೆ. ನಿನೆವೆ ಜನರು ನಮ್ಮೆಲ್ಲರಿಗೂ ಮಾದರಿಯಾಗಿರಲಿ.
---------------------------
ಸಂತ ಕಸಿಮೀರ್

ಇವರು ಪೋಲ್ಯಾಂಡ್ ದೇಶದ ರಾಜ ಮೂರನೇ ಕಸಿಮೀರ್ ಮತ್ತು ತಾಯಿ ಆಸ್ಟ್ರಿಯಾದ ಎಲಿಜಬೇತ್ ನವರ 14 ಮಕ್ಕಳಲ್ಲಿ ಮೂರನೇ ಮಗ. ಇವರು 1458ರಲ್ಲಿ ಪೋಲ್ಯಾಂಡ್ ದೇಶದ ಕ್ರಕೊಮಿಯಲ್ಲಿ ಜನಿಸಿದರು. ಇವರು ತಮ್ಮ ಚಿಕ್ಕವಯಸ್ಸಿನಿಂದಲೇ ದೈವ ಭಕ್ತಿಯ, ಮುಗ್ದತೆಯನ್ನು ರೂಡಿಸಿಕೊಂಡು ಬಂದರು. ಪೋಲ್ಯಾಂಡ್ ದೇಶದ ರಾಜನಾಗಿ ಅವರ ತಂದೆ ಕಟ್ಟಿದ ಸಾಮ್ರಾಜ್ಯವನ್ನು ವಿಸ್ತರಿಸಿ ಆಳುವ ಶಕ್ತಿಯುತ ರಾಜನಾಗಲು ಆಸೆ ಪಟ್ಟರು.
ಆದರೆ ಅತಿ ಚಿಕ್ಕವಯಸ್ಸಿನಲ್ಲೇ ಇವರ ಜೀವನ ದೇವರಿಗೆ ಮೀಸಲಾಗಿದ್ದು, ಇಹಲೋಕದ ಆಸೆ-ಆಕಾಂಕ್ಷೆಗಳಲ್ಲ, ಎಂಬ ನಿರ್ಧಾರ ಮನವರಿಕೆಯಾಗಿತ್ತು. ಇವರನ್ನು ಸುತ್ತುವರಿದ ಆಸ್ತಿ-ಅಂತಸ್ತು, ಸುಖ-ಸಂಪತ್ತಿನ ಜೀವನ, ಇವರಲ್ಲಿದ್ದ ನಿಷ್ಠಾವಂತಿಕೆಯನ್ನು ಮರೆಯುವಂತೆ ಶೋಧಿಸುತ್ತಿತ್ತು. ಸರಳ ಬಟ್ಟೆಗಳನ್ನು ಧರಿಸಿ, ರಾಜತನದ ಬಟ್ಟೆಬರೆಗಳನ್ನೆಲ್ಲ ತ್ಯಜಿಸಿದರು. ದೇವರ ಕೆಲಸ-ಕಾರ್ಯಗಳಲ್ಲಿ ಆಸಕ್ತಿವುಳ್ಳವನ್ನಾಗಿ, ಹಲವು ರಾತ್ರಿ-ಹಗಲುಗಳನ್ನು ಪ್ರಾರ್ಥನೆಯಲ್ಲೇ ಕಳೆಯುತ್ತಿದ್ದರು. ಸುಖದ ಸುಪ್ಪತ್ತಿಗೆಯ ಮೇಲೆ ಮಲಗದೆ, ನೆಲದ ಮೇಲೆ ಮಲಗುವ ಸರಳತೆಯಿಂದ ತಮ್ಮನ್ನೇ ದಂಡಿಸಿಕೊಳ್ಳುತ್ತಿದ್ದರು.
ತಂದೆ ಬಯಸಿದಂತೆ ಇವರು ಯುದ್ಧ ಮಾಡುವ ರಾಜನಂತೆ ಅಥವಾ ಉತ್ತಾರಾಧಿಕಾರಿಯಾಗುವ ಯಾವ ಲಕ್ಷಣಗಳನ್ನೂ ತೋರಲಿಲ್ಲ. ಇವರು ಮನಸ್ಸು ಸದಾ ದೇವರ, ವಿಶ್ವಾಸದ ಕಡೆಗಿತ್ತು. ಮುಖ್ಯವಾಗಿ ಅತಿ ಭಕ್ತಿಯಿಂದ ಬಲಿಪೂಜೆಯಲ್ಲಿ ಭಾಗವಹಿಸುವ, ಬಡ-ಬಗ್ಗರಿಗೆ ದಾನಮಾಡುವ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದರು.
ತನ್ನ 23ನೇ ವಯಸ್ಸಿನಲ್ಲೇ 1484ರಲ್ಲಿ ಶ್ವಾಸಕೋಶದ ಕಾಯಿಲೆಯಿಂದ ಮರಣ ಹೊಂದಿದರು. ಇವರ ಸಮಾಧಿಯನ್ನು ಸ್ಪರ್ಶಿಸಿ ಪ್ರಾರ್ಥಿಸಿದ ಎಲ್ಲರ ಜೀವನದಲ್ಲಿ ಅದ್ಭುತಗಳು ನಡೆಯಲಾರಂಭಿಸಿತ್ತು. ಅಂತೆಯೇ 1522ರಲ್ಲಿ ಜಗದ್ಗುರು 10ನೇ ಲಿಯೋ, ಇವರನ್ನು ಸಂತ ಪಟ್ಟಕ್ಕೇರಿಸಿದರು. 120 ವರ್ಷಗಳ ನಂತರ, ಇವರ ಸಮಾಧಿ ತೆಗೆದು ನೋಡಿದಾಗ ಅವರ ಪ್ರಾರ್ಥಿವ ಶರೀರ ಹಾಳಾಗದೆ ಅದೇ ರೀತಿ ಇತ್ತು, ಇಂದಿಗೂ ಇವರನ್ನು ಪೋಲ್ಯಾಂಡ್ ದೇಶದ ಪಾಲಕ ಸಂತರೆಂದು ಗೌರವಿಸುತ್ತಾರೆ.

------------------------------
© 'ದನಿ' ಮಾಧ್ಯಮ ಮನೆ

No comments:
Post a Comment