13 ಫೆಬ್ರವರಿ 2020
ಸಾಧಾರಣ ಕಾಲದ ಐದನೆಯ ಗುರುವಾರ
1ನೇ ವಾಚನ - 1 ಅರಸುಗಳು 11:4-13
ಕೀರ್ತನೆ - 106:3-4, 35-36, 37,40
ಶುಭಸಂದೇಶ - ಮಾರ್ಕ 7:24-30
-----------------------------
1ನೇ ವಾಚನ - 1 ಅರಸುಗಳು 11:4-13
4 : ಅವನು ವೃದ್ಧನಾದಾಗ ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣ ಅವನು ತನ್ನ ದೇವರಾದ ಸರ್ವೇಶ್ವರನಲ್ಲಿಟ್ಟಿದ್ದ ಯಥಾರ್ಥ ಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ.
5 : ಸಿದೋನ್ಯರ ಅಷ್ಟೋರೆತ್ ದೇವತೆಯನ್ನೂ ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹವನ್ನೂ ಆರಾಧಿಸತೊಡಗಿದನು.
6 : ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು; ಅವನ ತಂದೆ ದಾವೀದನು ಪೂರ್ಣ ಮನಸ್ಸಿನಿಂದ ಸರ್ವೇಶ್ವರನನ್ನು ಸೇವೆಮಾಡಿದಂತೆ ಅವನು ಸೇವೆಮಾಡಲಿಲ್ಲ.
6 : ಅವನು ಜೆರುಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾ ಸ್ಥಳಗಳನ್ನು ಏರ್ಪಡಿಸಿದನು.
7 : ಅವನು ಜೆರುಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾ ಸ್ಥಳಗಳನ್ನು ಏರ್ಪಡಿಸಿದನು.
8 : ಈ ಪ್ರಕಾರ ಅನ್ಯ ಜನಾಂಗಗಳಿಂದ ಬಂದ ತನ್ನ ಹೆಂಡತಿಯರು ತಮ್ಮ ದೇವತೆಗಳಿಗೆ ಧೂಪಾರತಿ ಎತ್ತುವುದಕ್ಕೂ ಬಲಿ ಅರ್ಪಿಸುವುದಕ್ಕೂ ಅನುಕೂಲ ಮಾಡಿಕೊಟ್ಟನು.
9 : ಸೊಲೊಮೋನನಿಗೆ ಇಸ್ರಯೇಲ್ ದೇವರಾದ ಸರ್ವೇಶ್ವರ ಎರಡು ಸಾರಿ ಕಾಣಿಸಿಕೊಂಡು,
10 : ಅನ್ಯದೇವತೆಗಳನ್ನು ಪೂಜಿಸಲೇಬಾರದೆಂದು ಆಜ್ಞಾಪಿಸಿದ್ದರೂ ಅವನು ಅವರ ಆಜ್ಞೆಗಳನ್ನು ಮೀರಿದನು.
11 : ಆದ್ದರಿಂದ ಸರ್ವೇಶ್ವರ ಅವನ ಮೇಲೆ ಕೋಪಗೊಂಡು, “ನೀನು ಹೀಗೆ ಮಾಡಿ ನನ್ನ ನಿಬಂಧನೆಗಳನ್ನು ವಿೂರಿದ್ದರಿಂದ ನಿನ್ನ ರಾಜ್ಯವನ್ನು ಕಿತ್ತುಕೊಂಡು ನಿನ್ನ ದಾಸನಿಗೆ ಕೊಡುವೆನು.
12 : ಆದರೂ ನಾನು ನಿನ್ನ ತಂದೆ ದಾವೀದನನ್ನು ಸ್ಮರಿಸಿ, ನಿನ್ನ ಕಾಲದಲ್ಲಿ ಇದನ್ನು ಮಾಡುವುದಿಲ್ಲ. ನಿನ್ನ ಮಗನ ಕೈಯಿಂದ ಅದನ್ನು ಕಿತ್ತುಕೊಳ್ಳುವೆನು.
13 : ಆದರೆ ಇಡೀ ಸಾಮ್ರಾಜ್ಯವನ್ನು ಕಿತ್ತುಕೊಳ್ಳುವುದಿಲ್ಲ; ನನ್ನ ದಾಸ ದಾವೀದನ ನಿಮಿತ್ತ ಹಾಗು ನಾನು ಆರಿಸಿಕೊಂಡ ಜೆರುಸಲೇಮ್ ಪಟ್ಟಣದ ನಿಮಿತ್ತ ನಿನ್ನ ಮಗನಿಗೆ ಒಂದು ಕುಲವನ್ನು ಉಳಿಸುವೆನು,” ಎಂದು ಸರ್ವೇಶ್ವರ ಹೇಳಿದರು.
-------------------
ಕೀರ್ತನೆ - 106:3-4, 35-36, 37,40
35 : ಅನ್ಯಜನರೊಡನವರು ಕಲೆತು ಬೆರೆತುಹೋದರು / ಅವರ ದುರಾಚಾರಗಳನ್ನೂ ಕಲಿತುಕೊಂಡರು //
36 : ಪೂಜೆಮಾಡಿದರು ಆ ಜನರ ವಿಗ್ರಹಗಳಿಗೆ / ಉರುಲಾದವು ಆ ವಿಗ್ರಹಗಳೆ ಅವರಿಗೆ //
37 : ತಮ್ಮ ಪುತ್ರ ಪುತ್ರಿಯರನೇ ಅರ್ಪಿಸಿದರು / ದೆವ್ವಭೂತಗಳಿಗೆ ಅವರನು ಬಲಿಕೊಟ್ಟರು /
38 : ಸುರಿಸಿದರು ತಮ್ಮ ಮಕ್ಕಳ ನಿರ್ದೋಷ ರಕ್ತವನು / ಬಲಿಕೊಟ್ಟರು ಕಾನಾನ್ಯರ ವಿಗ್ರಹಗಳಿಗೆ ಅವರನು / ಹೊಲೆಮಾಡಿದರಿಂಥ ಕೊಲೆಗಳಿಂದ ದೇಶವನು //
39 : ಅಶುದ್ಧರಾದರವರು ತಮ್ಮ ದುಷ್ಕøತ್ಯಗಳಿಂದ / ದೇವದ್ರೋಹಿಗಳಾದರು ದುರಾಚಾರ ಗಳಿಂದ //
40 : ಕೆರಳಿತು ಕೋಪ ಆ ಜನರ ಮೇಲೆ ಪ್ರಭುವಿಗೆ / ತನ್ನವರಾ ನಡತೆ ಅಸಹ್ಯವಾಯಿತು ಆತನಿಗೆ //
--------------------
ಶುಭಸಂದೇಶ - ಮಾರ್ಕ 7:24-30
24 : ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪಟ್ಟಣಗಳ ಸಮೀಪವಿದ್ದ ಪ್ರದೇಶಕ್ಕೆ ಹೋಗಿ ಒಂದು ಮನೆಯಲ್ಲಿ ಇಳಿದುಕೊಂಡರು. ತಾವು ಜನರ ಕಣ್ಣಿಗೆ ಬೀಳಬಾರದೆಂಬುದು ಅವರ ಇಚ್ಛೆಯಾಗಿದ್ದರೂ ಅದು ಸಾಧ್ಯವಾಗಲಿಲ್ಲ.
25 : ಹೊರನಾಡಾದ ಸಿರಿಯ ದೇಶದ ಫೆನಿಷ್ಯ ಪ್ರಾಂತ್ಯಕ್ಕೆ ಸೇರಿದ ಗ್ರೀಕ್ ಮಹಿಳೆ ಒಬ್ಬಳು ಅವರ ವಿಷಯವನ್ನು ಕೇಳಿ, ಒಡನೆ ಅಲ್ಲಿಗೆ ಬಂದು ಅವರ ಪಾದಕ್ಕೆರಗಿದಳು.
26 : ಆಕೆಯ ಚಿಕ್ಕಮಗಳಿಗೆ ದೆವ್ವ ಹಿಡಿದಿತ್ತು. ತನ್ನ ಮಗಳಿಂದ ಪಿಶಾಚಿಯನ್ನು ಹೊರಗಟ್ಟಬೇಕೆಂದು ಆಕೆ ಯೇಸುವನ್ನು ಬೇಡಿಕೊಂಡಳು.
27 : ಆದರೆ ಯೇಸು ಆಕೆಗೆ, “ಮೊದಲು ಮಕ್ಕಳು ತಿಂದು ತೃಪ್ತಿಪಡೆಯಲಿ, ಮಕ್ಕಳ ಆಹಾರವನ್ನು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು.
28 : ಅದಕ್ಕೆ ಆಕೆ, “ಅದು ನಿಜ ಸ್ವಾವಿೂ; ಆದರೂ ಮಕ್ಕಳು ತಿಂದುಬಿಟ್ಟ ಚೂರುಪಾರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನುತ್ತವಲ್ಲವೆ?” ಎಂದಳು.
29 : ಆಕೆಯ ಮಾತುಗಳನ್ನು ಕೇಳಿ ಯೇಸು, “ಚೆನ್ನಾಗಿ ಹೇಳಿದೆ, ನಿಶ್ಚಿಂತೆಯಿಂದ ಮನೆಗೆ ಹಿಂದಿರುಗು. ದೆವ್ವ ನಿನ್ನ ಮಗಳನ್ನು ಬಿಟ್ಟುತೊಲಗಿದೆ,” ಎಂದರು.
30 : ಆಕೆ ಮನೆಗೆ ಹೋದಾಗ, ಮಗಳು ಹಾಸಿಗೆಯ ಮೇಲೆ ಸುಖವಾಗಿ ಮಲಗಿರುವುದನ್ನು ಕಂಡಳು. ದೆವ್ವ ಅವಳನ್ನು ಬಿಟ್ಟು ಹೋಗಿತ್ತು. ಕಿವುಡರು ಕೇಳಲಿ, ಮೂಕರು ಮಾತನಾಡಲಿ !
--------------------------
ಚಿಂತನೆ

ಬೆತ್ಲೆಹೇಮ್ ಮತ್ತು ಕಲ್ವಾರಿಗೆ ಒಂದು ಮಹತ್ವದ ಸಂಬಂಧವಿದೆ. ಕ್ರಿಸ್ತ ಬೆತ್ಲೆಹೇಮಲ್ಲಿ ಜನಿಸಿ ಮಾನವಕುಲಕ್ಕೆ ಪ್ರೀತಿಯ ಸಂದೇಶವನ್ನು ತಂದರು. ಕಲ್ವಾರಿಯಲ್ಲಿ ಶಿಲುಬೆಯ ಮೇಲೆ ತಮ್ಮ ಪ್ರಾಣವನ್ನು ಅರ್ಪಿಸಿ, ಮೂರನೆಯದಿನ ಪುನರುತ್ಥಾನರಾಗಿ ಪ್ರೀತಿಯನ್ನು ಕಾರ್ಯರೂಪದಲ್ಲಿ ತೋರ್ಪಡಿಸಿದರು. ಮಾನವರನ್ನು ಅವರ ಪಾಪದಿಂದ ರಕ್ಷಿಸಲು ದೇವಪುತ್ರ ಮನುಷ್ಯರೂಪ ತಾಳಬೇಕಾಯಿತು, ಕಷ್ಟಸಂಕಷ್ಟಗಳನ್ನು ಅನುಭವಿಸಬೇಕಾಯಿತು. ಶಿಲುಬೆ ಅವರ ಪಾಲಿನ ಕೊಡುಗೆಯಾಯಿತು. ದೇವಪುತ್ರ ನಮಗಾಗಿ ನೋವು, ಕಷ್ಟ, ಮರಣವನ್ನು ಅಪ್ಪಿದರೆ ನಾವು ಅವರ ಹಿಂಬಾಲಕರೂ ಸಹ ಅಂತಹದ್ದೇ ದಾರಿಯಲ್ಲಿ ನಡೆಯಬೇಕಾಗಿದೆ ಎಂದು ಇಂದಿನ ಶುಭ ಸಂದೇಶ ನಮಗೆ ಕಿವಿಮಾತು ಹೇಳುತ್ತದೆ. ‘ನನ್ನ ನಿಮಿತ್ತ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸುಗಳ ಮುಂದೆ ಎಳೆದೊಯ್ಯುವರು’ ಎಂಬ ಯೇಸುವಿನ ಮಾತುಗಳು ನಮಗೆ ಯೇಸುವಿನ ನಾಮದಲ್ಲಿ ನಾವು ಜೀವಿಸುವಾಗ ಹತ್ತುಹಲವು ಶಕ್ತಿಗಳು ನಮ್ಮ ವಿರುದ್ಧವಾಗಿರುತ್ತವೆ ಎಂಬುದನ್ನು ನೆನಪಿಸುತ್ತದೆ.
ಹೆದರುವ ಅವಶ್ಯಕತೆಯಿಲ್ಲ. ಯಾಕೆಂದರೆ ದೇವರ ಆತ್ಮ ನಮ್ಮಲ್ಲಿರುತ್ತಾರೆ ಮತ್ತು ನಮ್ಮ ಪರವಾಗಿ ಮಾತನಾಡುತ್ತಾರೆ. ಕೊನೆಯವರೆಗೂ ಸೈರಣೆಯಿಂದಿದ್ದರೆ ಮಾತ್ರ ಜೀವೋದ್ಧಾರವನ್ನು ಪಡೆಯಬಹುದು.
ನಾವು ಪ್ರಪಂಚದ ದೃಷ್ಟಿಯಲ್ಲಿ ಸೋತಿದ್ದರೂ, ಇಲ್ಲದವರಾಗಿದ್ದರೂ ದೇವರ ದೃಷ್ಟಿಯಲ್ಲಿ ಗೆದ್ದಿದ್ದೇವೆ ಹಾಗೂ ಎಲ್ಲವನ್ನೂ ಪಡೆದವರಾಗಿದ್ದೇವೆ. ಸಂತ ಪೌಲನ ಈ ಮಾತುಗಳು ಶುಭಸಂದೇಶದ ಕ್ರಿಸ್ತನ ಮಾತಗಳನ್ನು ದೃಢಪಡಿಸುತ್ತವೆ. ಕ್ರಿಸ್ತ, ಜೀವನದ ಜೀವನಾಡಿ ಎಂದು ನಮಗೆ ತಿಳಿಯಪಡಿಸುತ್ತದೆ. ಕ್ರಿಸ್ತನೇ ನನ್ನ ಜೀವನಾಡಿ ಎಂದು ಪೌಲನ ಹಾಗೆ ಹೇಳುವ, ಜೀವಿಸುವ ಕೃಪೆ ನಮಗೆ ಸಿಗಲಿ. ಆಮೆನ್.
----------------------
ತಪ್ಪುಗ್ರಹಿಕೆ
ಟೈರ್ ಮತ್ತು ಸಿದೋನ್ ಪಟ್ಟಣಗಳು ಯೆಹೂದ್ಯ ಪ್ರದೇಶಗಳಾಗಿರಲಿಲ್ಲ. ಹಾಗಾಗಿ ಅಲ್ಲಿ ಅನ್ಯ ಧರ್ಮದ ಜನರು ವಾಸಿಸುತ್ತಿದ್ದರು. ಫೆನಿಷ್ಯದ ಮಹಿಳೆ ಯೇಸುವಿನ ಆಗಮನ ತಿಳಿದೊಡನೆ ಅಲ್ಲಿ ಬಂದು ಯೇಸುವಿನ ಪಾದಕ್ಕೆರಗಿ ತನ್ನ ಮಗಳಿಂದ ದೆವ್ವ ಹೊರಗಟ್ಟಲು ಬೇಡಿದಳು. ಈ ಮಹಿಳೆ ಯೇಸುವಿನ ಅದ್ಬುತ ಶಕ್ತಿ ತಿಳಿದು ಬಂದಿರಬೇಕು. ಯೇಸು ಆಕೆಯ ವಿಶ್ವಾಸ ಪರೀಕ್ಷಿಸುವ ಸಲುವಾಗಿ ಆಕೆಯೊಂದಿಗೆ ಕಠೋರವಾಗಿ ಮಾತನಾಡುತ್ತಾರೆ. ಆಕೆಯ ವಿಶ್ವಾಸದ ಆಳವನ್ನು ಅರಿತು ಆಕೆಯ ಮಗಳನ್ನು ಗುಣಪಡಿಸುತ್ತಾರೆ. ಯೆಹೂದ್ಯರಲ್ಲಿ ಒಂದು ತಪ್ಪುಗ್ರಹಿಕೆ ಇತ್ತು. ತಾವು ಮಾತ್ರ ದೇವರ ಮಕ್ಕಳು ಹಾಗೂ ಸ್ವರ್ಗ ಸಾಮ್ರಾಜ್ಯಕ್ಕೆ ಬಾಧ್ಯಸ್ಥರೆಂದು; ಯೇಸುಸ್ವಾಮಿ ಈ ಅದ್ಬುತದ ಮೂಲಕ ಎಲ್ಲರೂ ದೇವರ ಮಕ್ಕಳು ಹಾಗೂ ಸ್ವರ್ಗ ಸಾಮ್ರಾಜ್ಯ ಯೆಹೂದ್ಯರ ವೈಯಕ್ತಿಕ ಆಸ್ತಿಯಲ್ಲ ಎಂಬುದನ್ನು ಪ್ರಕಟಿಸುತ್ತಾರೆ.
-------------------
ಚಿತ್ರ: ಗೂಗಲ್ ಕೃಪೆ

No comments:
Post a Comment