ಮಾರ್ಚ್ 27, 2020 ಶುಕ್ರವಾರ [ನೇರಳೆ]
--------------------
-----------------
ಮೊದಲ
ವಾಚನ: ಸುಜ್ಞಾನಗ್ರಂಥ 2:1, 12-22
ಕೀರ್ತನೆ
34:17-18, 19-20, 21, 23 ಶ್ಲೋಕ.18
ಸನಿಹದಲ್ಲಿಹನು
ಪ್ರಭು ಭಗ್ನ ಹೃದಯಿಗಳಿಗೆ
ಶುಭಸಂದೇಶ:
ಯೊವಾನ್ನ 7.1-2, 10, 25-30
------------------
ಮೊದಲ ವಾಚನ: ಸುಜ್ಞಾನಗ್ರಂಥ
2:1, 12-22
1
: ದೇವರಿಲ್ಲದವರು ಅಪವಾದಮಾಡಿ- ಕೊಂಡರು ಈ ಪರಿ: “ನಮ್ಮ ಬದುಕು ಅಲ್ಪಕಾಲಿಕ ಹಾಗು ದುಃಖಕರ ಮರಣಕ್ಕೆ
ಮದ್ದಿಲ್ಲ, ಸತ್ತವರಿಂದ ಹಿಂದಿರುಗಿದವರಿಲ್ಲ;
12
: ನೀತಿವಂತನಿಗಾಗಿ ಹೊಂಚುಹಾಕೋಣ ಬಲೆಯೊಡ್ಡಿ ಅವನು ನಮಗೊಂದು ಪೀಡೆ, ನಮ್ಮ ನಡತೆಗೆ ಅಡ್ಡಿ ಆರೋಪಿಸುತ್ತಾನೆ,
ಧರ್ಮಕ್ಕೆ ವಿರುದ್ಧ ಪಾಪಕಟ್ಟಿಕೊಂಡೆವೆಂದು ದೂಷಿಸುತ್ತಾನೆ, ಸಂಪ್ರದಾಯದ ವಿರುದ್ಧ ಪಾಪ ಮಾಡಿದೆವೆಂದು.
13
: ಹೇಳಿಕೊಳ್ಳುತ್ತಾನೆ ತಾನೇ ದೇವರನು ಬಲ್ಲವನೆಂದು ಕರೆದುಕೊಳ್ಳುತ್ತಾನೆ ತನ್ನನ್ನು ತಾನೇ ದೇವರ ಮಗನೆಂದು.
14
: ನಮ್ಮ ಆಲೋಚನೆಗಳನ್ನು ಆಕ್ಷೇಪಿಸುವ ವ್ಯಕ್ತಿ ಅವನು ಅವನನ್ನು ನೋಡಿದ್ದೇ ನಮ್ಮ ಉತ್ಸಾಹ ಕುಂದಿಹೋಗುವುದು.
15
: ಏಕೆಂದರೆ ಅವನು ಇತರರಂತೆ ಅಲ್ಲ ಅವನ ಮಾರ್ಗವೋ ನಮಗೆ ವಿಚಿತ್ರ.
16
: ಅವನ ಎಣಿಕೆಯಲ್ಲಿ ನಾವೆಲ್ಲರು ನಕಲಿ ನಾಣ್ಯದಂತೆ ನಮ್ಮಿಂದ ದೂರವಾಗುತ್ತಾನೆ ಹೇಸಿಕೆಯನ್ನು ಕಂಡಂತೆ.
ನೀತಿವಂತರ ಮರಣ ಸಂತೋಷಕರವೆನ್ನುತ್ತಾನೆ ದೇವರೇ ತನ್ನ ತಂದೆಯೆಂದು ಕೊಚ್ಚಿಕೊಳ್ಳುತ್ತಾನೆ.
17
: ಅವನ ಮಾತುಗಳೇ ಸತ್ಯವೇನೋ ನೋಡೋಣ ಅವನ ಜೀವಾಂತ್ಯದ ಗತಿ ಏನೆಂದು ಪರೀಕ್ಷಿಸೋಣ.
18
: ನೀತಿವಂತ ದೇವಕುಮಾರನಾಗಿದ್ದರೆ ದೇವರು ಅವನಿಗೆ ನೆರವಾಗಬೇಕು ಶತ್ರುಗಳ ಕೈಯಿಂದ ಅವನನ್ನು ತಪ್ಪಿಸಿ
ಕಾಪಾಡಬೇಕು.
19
: ಅಂಥವನನ್ನು ಹಿಂಸಿಸಿ, ಪೀಡಿಸಿ, ಪರೀಕ್ಷಿಸೋಣ ಅವನಲ್ಲಿ ಸೌಜನ್ಯ ಎಷ್ಟಿದೆಯೆಂದು ತಿಳಿಯೋಣ ಅನ್ಯಾಯದೆದುರು
ತಾಳ್ಮೆಯೆಷ್ಟಿದೆಯೆಂದು ಶೋಧಿಸೋಣ;
20
: ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ ‘ದೇವರು ರಕ್ಷಿಸುತ್ತಾನೆ’ ಎಂದಾಗಿತ್ತಲ್ಲವೇ ಅವನ
ವಾದ?”
21
: ಈ ಪರಿ ಆಲೋಚಿಸಿ ವಂಚಿತರಾದರು ದುರುಳರು ಅವರ ದುಷ್ಟತನವೇ ಅವರನ್ನು ಕುರುಡರನ್ನಾಗಿಸಿತು.
22
: ದೇವರ ನಿಗೂಢ ಯೋಜನೆಯನ್ನು ಅವರು ಅರಿಯಲಿಲ್ಲ ಪವಿತ್ರ ಜೀವನಕ್ಕೆ ದೊರಕುವ ಫಲವನ್ನು ಹಾರೈಸಲಿಲ್ಲ
ನಿರ್ದೋಷಿಗಳಿಗೆ ಸಂಭಾವನೆಯಿದೆಯೆಂದು ನಂಬಲಿಲ್ಲ.
ಕೀರ್ತನೆ
34:17-18, 19-20, 21, 23 ಶ್ಲೋಕ.18
ಸನಿಹದಲ್ಲಿಹನು ಪ್ರಭು
ಭಗ್ನ ಹೃದಯಿಗಳಿಗೆ
17
: ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ / ನೆರವೀವನವರ ಕಷ್ಟನಿವಾರಣೆಗೆ //
18
: ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ / ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ //
19
: ಸಜ್ಜನನಿಗೊದಗುವ ಸಂಕಟಗಳು ವಿಪರೀತ / ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ //
20
: ಕಾಪಾಡುವನು ಅವನೆಲಬುಗಳೆಲ್ಲವನ್ನೂ / ಮುರಿಯಬಿಡನು ಪ್ರಭು ಅವುಗಳ ಲ್ಲೊಂದನ್ನೂ //
21
: ದುರ್ಜನರೆಲ್ಲರೂ ತುತ್ತಾಗುವರು ತಮ್ಮ ಕೇಡಿಗೆ / ಸಜ್ಜನರ ಶತ್ರುಗಳು ಗುರಿಯಾಗುವರು ದಂಡನೆಗೆ
//
22
: ತನ್ನ ದಾಸರನು ಉದ್ಧಾರಮಾಡದಿರನು ಪ್ರಭು / ತನ್ನ ಶರಣರೊಳೊಬ್ಬರನು ದಂಡಿಸನಾ ವಿಭು //
ಶುಭಸಂದೇಶ: ಯೊವಾನ್ನ
7.1-2, 10, 25-30
1
: ಇದಾದ ಬಳಿಕ ಯೇಸುಸ್ವಾಮಿ ಗಲಿಲೇಯದಲ್ಲಿ ಸಂಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದ್ದುದರಿಂದ
ಜುದೇಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ.
2
: ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಹತ್ತಿರವಾಗುತ್ತಿತ್ತು. ಯೇಸುವಿನ ಸೋದರರು,
10
: ಯೇಸುಸ್ವಾಮಿಯ ಸೋದರರು ಹಬ್ಬಕ್ಕೆ ಹೋದರು. ಯೇಸುವೂ ಅಲ್ಲಿಗೆ ಹೋದರು. ಬಹಿರಂಗವಾಗಿ ಅಲ್ಲ, ಗುಟ್ಟಾಗಿ.
25
: ಜೆರುಸಲೇಮಿನ ಕೆಲವು ಮಂದಿ ಇದನ್ನು ಕೇಳಿ, “ಅವರು ಕೊಲ್ಲಬೇಕೆಂದು ಹವಣಿಸುತ್ತಾ ಇರುವುದು ಈತನನ್ನೇ
ಅಲ್ಲವೆ?
26
: ಇಗೋ, ಈತ ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೂ ಈತನಿಗೆ ವಿರುದ್ಧವಾಗಿ ಅವರಾರೂ ಮಾತೆತ್ತುತ್ತಿಲ್ಲ!
ಈತನೇ ಲೋಕೋದ್ಧಾರಕನೆಂದು ಆ ಮುಖಂಡರಿಗೆ ಹೊಳೆದಿರಬಹುದೆ?
27
: ಲೋಕೋದ್ಧಾರಕನು ಕಾಣಿಸಿಕೊಳ್ಳುವಾಗ ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ
ಈತನು ಎಲ್ಲಿಂದ ಬಂದವನೆಂದು ನಮ್ಮೆಲ್ಲರಿಗೂ ತಿಳಿದಿದೆಯಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
28
: ಆದುದರಿಂದ ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸುಸ್ವಾಮಿ ಆಗ ಗಟ್ಟಿಯಾಗಿ ಇಂತೆಂದರು: “ನಾನು ಯಾರೆಂದು,
ಎಲ್ಲಿಂದ ಬಂದವನೆಂದು ನೀವು ಬಲ್ಲಿರೋ? ನಾನು ನನ್ನಷ್ಟಕ್ಕೇ ಬಂದವನಲ್ಲ; ನನ್ನನ್ನು ಕಳುಹಿಸಿದಾತನು
ಸತ್ಯಸ್ವರೂಪಿ. ಆತನನ್ನು ನೀವು ಅರಿತಿಲ್ಲ.
29
: ನಾನಾದರೋ ಆತನನ್ನು ಅರಿತಿದ್ದೇನೆ. ಏಕೆಂದರೆ, ನಾನು ಬಂದುದು ಆತನಿಂದಲೇ. ಆತನೇ ನನ್ನನ್ನು ಕಳುಹಿಸಿದ್ದು,”
30
: ಇದನ್ನು ಕೇಳಿದ ಯೆಹೂದ್ಯರು ಯೇಸುವನ್ನು ಹಿಡಿದು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆ
ಇನ್ನೂ ಬಾರದೆ ಇದ್ದ ಕಾರಣ ಯಾರೂ ಅವರ ಮೇಲೆ ಕೈಹಾಕಲಿಲ್ಲ.
-------------------
ಸಾವಿರಾರು ಜನರ ಮುಂದೆ
ಧೈರ್ಯವಾಗಿ ಮಾತಾಡಿದ ಯೇಸು ಇಂದು ರಹಸ್ಯವಾಗಿ ಜೆರುಸಲೇಮಿಗೆ ಹೋಗಿದ್ಯಾಕೆ? ಬಂಧಿಯಾಗುತ್ತೆನೆಂಬ ಭಯದಿಂದಲೆ?
ಖಂಡಿತವಾಗಿಯೂ ಅಲ್ಲ. ಆ ಭಯ ಇದ್ದಿದ್ದರೆ ಜೆರುಸಲೇಮಿಗೆ ಹೋದ ತಕ್ಷಣ ಬಹಿರಂಗವಾಗಿ ಅವರು ಮಾತಾಡುತ್ತಿರಲಿಲ್ಲ.
ಇಲ್ಲಿ ಯೇಸುವಿನ ವಿವೇಕವನ್ನು ಮತ್ತು ದೂರದೃಷ್ಟಿಯನ್ನು ಪ್ರಶಂಸಿಸಬೇಕು. ಒಂದು ಪಕ್ಷ ಬಹಿರಂಗವಾಗಿ
ಅವರು ಹೊರಟ್ಟಿದಿದ್ದರೆ ಅವರು ಜೆರುಸಲೇಮ್ ತಲುಪುವ ಮುನ್ನ ಅವರನ್ನು ಬಂಧಿಸಬಹುದಿತ್ತು. ಜೆರುಸಲೇಮ್
ದೇವಾಲಯದಲ್ಲಿ ಎರಡು ಅಂಶಗಳನ್ನು ಯೇಸು ಪ್ರಕಟಪಡಿಸುತ್ತಾರೆ
1) ತಾನೇ ಬರಬೇಕಿದ `ರಕ್ಷಕ’ ಅಭಿಷಿಕ್ತರಾದ ಲೋಕೋದ್ಧಾರಕನೆಂದು
2) ತಾನು ಮಾತ್ರ ದೇವರನ್ನು ಸಂಪೂರ್ಣವಾಗಿ ಅರಿತ್ತಿದ್ದೆನೆಂದು, ಕಾರಣ ತಾನು ಬಂದದ್ದು ದೇವರಿಂದ ಎಂಬ ಸತ್ಯ ಪ್ರಕಟಿಸುತ್ತಾರೆ. ಯೇಸುವಿನಿಂದ ವಿವೇಕವನ್ನು, ಧೈರ್ಯವನ್ನು ಕಲಿತು ಬದುಕಬೇಕಿದೆ.
1) ತಾನೇ ಬರಬೇಕಿದ `ರಕ್ಷಕ’ ಅಭಿಷಿಕ್ತರಾದ ಲೋಕೋದ್ಧಾರಕನೆಂದು
2) ತಾನು ಮಾತ್ರ ದೇವರನ್ನು ಸಂಪೂರ್ಣವಾಗಿ ಅರಿತ್ತಿದ್ದೆನೆಂದು, ಕಾರಣ ತಾನು ಬಂದದ್ದು ದೇವರಿಂದ ಎಂಬ ಸತ್ಯ ಪ್ರಕಟಿಸುತ್ತಾರೆ. ಯೇಸುವಿನಿಂದ ವಿವೇಕವನ್ನು, ಧೈರ್ಯವನ್ನು ಕಲಿತು ಬದುಕಬೇಕಿದೆ.
----------------------
ಯೆಹೂದ್ಯರು ಯೇಸುವನ್ನು ಕೊಲ್ಲಲು ಹವಣಿಸುತ್ತಿದ್ದರು. ಯೇಸು ತನ್ನ
ಸಾವು ಹತ್ತಿರವಾಗುತ್ತಿದ್ದುದರಿಂದ ಅವರನ್ನು ಕೊಲ್ಲಲುಸಂಚು ಮಾಡುತ್ತಿರುವವರ ವರ್ತನೆಯನ್ನು ಅತೀ
ಸೂಕ್ಷ್ಮವಾಗಿ ಗಮನಿಸಿ ಅವರ ಪ್ರತಿಯೊಂದು ಮಾತನ್ನು ಅವಲೋಕನಮಾಡುತ್ತಿದ್ದರೇ ಹೊರತು ಅವರ
ಕುತಂತ್ರಗಳಿಗೆ ಹೆದರಿ ತಮ್ಮ ತಂದೆಯ ಚಿತ್ತವನ್ನು ಮರೆಯಲಿಲ್ಲ. ಯೇಸುವು ಸತ್ಯಸ್ವರೂಪಿಯಾದ ತಂದೆ
ದೇವರ ಬಗ್ಗೆ ಮಾತನಾಡಲು, ಸತ್ಯವನ್ನು ಎತ್ತಿ ಹಿಡಿದು ಸತ್ಯಕ್ಕಾಗಿ ತನ್ನ ಪ್ರಾಣವನ್ನು ಕೊಡಲು ಸಹ ಸಿದ್ದರಿದ್ದರು.
ಸತ್ಯವನ್ನು ಅಂಗೀಕರಿಸುವುದು ಕಷ್ಟಸಾಧ್ಯ. ಈ ಸತ್ಯ ನಮ್ಮ ಬಾಳಲ್ಲಿ
ನೋವನ್ನುಂಟು ಮಾಡುತ್ತದೆ. ಸತ್ಯಕ್ಕಾಗಿನಿಲ್ಲುವವರು ಒಬ್ಬಂಟಿಗರಾಗಿ ನಿಂತು ಸುಳ್ಳನ್ನು
ನಿರಾಕರಿಸಬೇಕಾಗುತ್ತದೆ. ಯೇಸು ಸತ್ಯಕ್ಕಾಗಿ ನಿಂತರು. ಇಂದಿನ ಮೊದಲನೆಯ ವಾಚನದಲ್ಲಿ ನಾವು
ನೋಡುವಂತೆ ನೀತಿವಂತರನ್ನು ಎಡವಿ ಬೀಳಿಸಲು ದುಷ್ಟರು ಅವಕಾಶ ಹುಡುಕುತ್ತಾರೆ. ಏಕೆಂದರೆ
ನೀತಿವಂತರು ನುಡಿಯುವ ಸತ್ಯ ದುಷ್ಟರಿಗೆ ಸಹಿಸಲಾಗುವುದಿಲ್ಲ. ಸತ್ಯವನ್ನು ನುಡಿಯಲು ಕಷ್ಟ. ಆದರೆ
ಸತ್ಯವನ್ನು ನುಡಿದ ಪ್ರಭುವಿನ ಶಕ್ತಿ ಹಾಗೂ ಪ್ರೇರಣೆಯ ಸಹಾಯದಿಂದ ಸತ್ಯವನ್ನು ನುಡಿಯಲು ಸಾಧ್ಯ
ಎಂಬ ಸತ್ಯದ ಜೀವನವು ನಮ್ಮದಾಗಲಿ ಎಂದು ಪ್ರಾರ್ಥಿಸೋಣ.
------------------
© 'ದನಿ' ಮಾಧ್ಯಮ ಮನೆ

No comments:
Post a Comment