Saturday, 28 March 2020

ಪ್ರಭುವಿನ ಪುನರುತ್ಥಾನ ಮಹೋತ್ಸವ

ಏಪ್ರಿಲ್ 12, 2020 ಭಾನುವಾರ                                          [ಬಿಳಿ]
ಪ್ರಭುವಿನ ಪುನರುತ್ಥಾನ ಮಹೋತ್ಸವ
ಮೊದಲ ವಾಚನಪ್ರೇಷಿತರ ಕಾರ್ಯಕಲಾಪಗಳು 10.34, 37-43.
ಕೀರ್ತನೆ 118:1-2, 16-17, 22-23 ಶ್ಲೋಕ.24
ಪ್ರಭುವೇ ನಿಯೋಜಿಸಿದ ದಿನವಿದು,
ಹರ್ಷಿಸಿ ಆನಂದಿಸೋಣ ಇಂದು
ಎರಡನೇ ವಾಚನಕೊಲೊಸ್ಸೆ 3.1-4 [ಅಥವಾ 1 ಕೊರಿಂಥಿಯರಿಗೆ 5.6-8
ಶುಭಸಂದೇಶಯೊವಾನ್ನ 20.1-9
ಸಂಜೆಯ ಪೂಜೆಶುಭಸಂದೇಶಲೂಕ 24.13-35


ಮೊದಲ ವಾಚನಪ್ರೇಷಿತರ ಕಾರ್ಯಕಲಾಪಗಳು 10:34, 37-43.
34 : ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ ವಿಷಯ ನನಗೆ ಈಗ ಮನದಟ್ಟಾಗಿದೆ.
37 : ಇತ್ತೀಚೆಗೆ ಜುದೇಯ ನಾಡಿನಾದ್ಯಂತ ನಡೆದ ಘಟನೆಗಳು ನಿಮಗೆ ತಿಳಿದೇ ಇರಬೇಕು.
38 : ಇವು ನಜರೇತಿನ ಯೇಸುವಿಗೆ ಸಂಬಂಧಪಟ್ಟ ವಿಷಯಗಳುಸ್ನಾನದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಯೊವಾನ್ನನು ಬೋಧಿಸಿದ ನಂತರಯೇಸು ತಮ್ಮ ಸೇವಾವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರಂಭಿಸಿದರುಅವರು ಪವಿತ್ರಾತ್ಮರಿಂದಲೂ ದೈವಶಕ್ತಿಯಿಂದಲೂ ಅಭಿಷಿಕ್ತರಾಗಿದ್ದರುದೇವರು ತಮ್ಮೊಡನೆ ಇದ್ದುದರಿಂದ ಅವರು ಎಲ್ಲೆಡೆಯಲ್ಲೂ ಒಳಿತನ್ನು ಮಾಡುತ್ತಾಪಿಶಾಚಿಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸಂಚರಿಸಿದರು.
39 : ಅವರು ಯೆಹೂದ್ಯರ ಹಳ್ಳಿ ಪಳ್ಳಿಗಳಲ್ಲೂ ಜೆರುಸಲೇಮಿನಲ್ಲೂ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳುಯೆಹೂದ್ಯರು  ಯೇಸುವನ್ನು ಶಿಲುಬೆ ಮರಕ್ಕೆ ನೇತುಹಾಕಿ ಕೊಂದರು.
40 : ಆದರೆ ದೇವರು ಅವರನ್ನು ಮೂರನೆಯ ದಿನ ಪುನರುತ್ಥಾನಗೊಳಿಸಿ ಪ್ರತ್ಯಕ್ಷರಾಗುವಂತೆ ಮಾಡಿದರು.
41 : ಅವರು ಕಾಣಿಸಿಕೊಂಡದ್ದು ಎಲ್ಲಾ ಜನರಿಗೆ ಅಲ್ಲದೇವರಿಂದ ಸಾಕ್ಷಿಗಳಾಗಿ ಆಯ್ಕೆಯಾಗಿದ್ದ ನಮಗೆಅವರು ಪುನರುತ್ಥಾನ ಹೊಂದಿದ ನಂತರ ಅವರೊಡನೆಯೇ ಊಟ ಮಾಡಿದವರು ನಾವು.
42 : ಮಾನವರಿಗೆ ಶುಭಸಂದೇಶವನ್ನು ಬೋಧಿಸುವಂತೆಯೂ ಜೀವಂತರಿಗೂ ಹಾಗೂ ಮೃತರಿಗೂ ದೇವರೇ ಅವರನ್ನು ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದಾರೆಂದು ರುಜುವಾತುಪಡಿಸುವಂತೆಯೂ ನಮಗೆ ಆಜ್ಞಾಪಿಸಿದ್ದಾರೆ.
43 : ಎಲ್ಲಾ ಪ್ರವಾದಿಗಳು ಅವರನ್ನು ಕುರಿತೇ ಸಾಕ್ಷಿ ನೀಡಿದ್ದಾರೆಅವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನೂ ಅವರ ನಾಮದ ಶಕ್ತಿಯಿಂದ ಪಾಪಕ್ಷಮೆಯನ್ನು ಪಡೆಯುವನೆಂದು ಪ್ರವಾದನೆಮಾಡಿದ್ದಾರೆ.”

ಕೀರ್ತನೆ 118:1-2, 16-17, 22-23 ಶ್ಲೋಕ.24
1 : ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ / ಆತ ಒಳ್ಳೆಯವಆತನ ಪ್ರೀತಿ ಶಾಶ್ವತ //
2 : ಸಾರಲಿ ಇಸ್ರಯೇಲಿನ ಜನತೆ / ‘ಆತನ ಪ್ರೀತಿ ಶಾಶ್ವತ’ ಎಂದೆ //
16 : ವಿಜಯಸಾಧನ ಪ್ರಭುವಿನಾ ಬಲಗೈಯಿಂದ / ಪರಾಕ್ರಮಪ್ರದರ್ಶನವೂ ಅದರಿಂದ” //
17 : ಸಾಯೆನುಜೀವದಿಂದಿರುವೆನು ನಾನು / ಪ್ರಭುವಿನ ಕಾರ್ಯಗಳನು ಸಾರುವೆನು //
22 : ಮನೆಕಟ್ಟುವವರು ಮೂಲೆಗೆಸೆದ ಕಲ್ಲು / ಆಯಿತು ನೋಡುಮುಖ್ಯವಾದ ಮೂಲೆಗಲ್ಲು //
23 : ಪ್ರಭುವಿನಿಂದಲೆ ಆದ  ಕಾರ್ಯ / ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! //

ಎರಡನೇ ವಾಚನಕೊಲೊಸ್ಸೆ 3.1-4 [ಅಥವಾ 1 ಕೊರಿಂಥಿಯರಿಗೆ 5.6-8
1 : ನೀವು ಯೇಸುಕ್ರಿಸ್ತರೊಂದಿಗೆ ಪುನರುತ್ಥಾನ ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನಕೊಡಿ. ಕ್ರಿಸ್ತಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ.
2 : ನೀವು ಕ್ರಿಸ್ತಯೇಸುವಿನೊಂದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ.
3 : ನಿಮ್ಮ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿ.


4 : ಕ್ರಿಸ್ತಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವೂ ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊಂದಿಗೆ ಪ್ರತ್ಯಕ್ಷರಾಗುವಿರಿ.


ಶುಭಸಂದೇಶಯೊವಾನ್ನ 20:1-9
1: ಅಂದು ಭಾನುವಾರಮುಂಜಾನೆಇನ್ನೂ ಕತ್ತಲಾಗಿತ್ತುಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದಳುಸಮಾಧಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿಂದ ತೆಗೆದುಹಾಕಿರುವುದನ್ನು ಕಂಡಳು.
2: ಆಗ ಆಕೆ ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿ ಬಂದು, “ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,” ಎಂದು ಹೇಳಿದಳು.
3: ಇದನ್ನು ಕೇಳಿ ಪೇತ್ರನೂ ಇನ್ನೊಬ್ಬ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು.
4: ಇಬ್ಬರೂ ಓಡಿದರು ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಸಮಾಧಿಯನ್ನು ಮೊದಲು ತಲುಪಿದನು.
5 : ಅವನು ಬಗ್ಗಿ ನೋಡಿದಾಗ ಅಲ್ಲಿ ನಾರುಬಟ್ಟೆಗಳು ಬಿದ್ದಿರುವುದು ಕಾಣಿಸಿತುಆದರೆ ಅವನು ಒಳಗೆ ನುಗ್ಗಲಿಲ್ಲ.
6: ಅವನ ಹಿಂದೆಯೇ ಸಿಮೋನ ಪೇತ್ರನು ಬಂದು ನೆಟ್ಟಗೆ ಸಮಾಧಿಯೊಳಗೆ ನುಗ್ಗಿದನುಅಲ್ಲಿ ನಾರುಮಡಿಗಳು ಬಿದ್ದಿರುವುದನ್ನು ಕಂಡನು.
7: ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ ನಾರುಮಡಿಗಳೊಡನೆ ಇರದೆಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು.
8: ಸಮಾಧಿಯನ್ನು ಮೊದಲು ತಲುಪಿದ್ದ ಇನ್ನೊಬ್ಬ ಶಿಷ್ಯನೂ ಆಮೇಲೆ ಒಳಗೆ ನುಗ್ಗಿ ನೋಡಿದನುನೋಡಿ ನಂಬಿದನು.
9: ಯೇಸು ಸತ್ತ ಮೇಲೆ ಮರಳಿ ಜೀವಂತರಾಗಿ ಎದ್ದುಬರಬೇಕುಎಂಬ ಪವಿತ್ರಗ್ರಂಥದ ವಾಕ್ಯ ಅವರಿಗೆ ಅದುವರೆಗೆ ಅರ್ಥವಾಗಿರಲಿಲ್ಲ.    
---------------------------------    
ಚಿಂತನೆ 
ಕ್ರಿಸ್ತರಲ್ಲಿ ನನ್ನ ಪ್ರೀತಿಯ ಸಹೋದರ ಸಹೋದರಿಯರೇ,
ಎಲ್ಲರಿಗೂ ಪುನರುತ್ಥಾನರಾದ ಪ್ರಭುಕ್ರಿಸ್ತರ ಹಬ್ಬದ ಶುಭಾಶಯಗಳು ಮತ್ತು ಪ್ರಭುವಿನ ಆಶೀರ್ವಾದಗಳು 

1. ಪ್ರಭುಕ್ರಿಸ್ತರ ಪುನರುತ್ಥಾನ ನಮ್ಮ ವಿಶ್ವಾಸಕ್ಕೆ ಅಸ್ತಿವಾರ

ಪ್ರಭುಕ್ರಿಸ್ತರ ಪುನರುತ್ಥಾನ ಕ್ರೈಸ್ತ ಜೀವನದ ಬುನಾದಿ. ನಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಗಳಿಗೆ ಜೀವಸೆಲೆ. ಸಂತ ಪೌಲರು ಕೊರಿಂಥಿಯರಿಗೆ ಬರೆದ ಮೊದಲನೆಯ ಪತ್ರದಲ್ಲಿ ಅಧ್ಯಾಯ15, ವಚನ14ರಲ್ಲಿ ಹೀಗೆ ಹೇಳುತ್ತಾರೆ, “ಕ್ರಿಸ್ತಯೇಸು ಪುನರುತ್ಥಾನರಾಗಲಿಲ್ಲ ಎಂದರೆ ನಮ್ಮ ಬೋಧನೆ ಬರಿದು; ನಿಮ್ಮ ವಿಶ್ವಾಸವೂ ಬರಿದು” ಎಂದು ಹೇಳುತ್ತಾರೆ. ಇದು ಅವರ ಉಢಾಪೆಯ ಮಾತಲ್ಲ ಬದಲಾಗಿ ಅವರ ಆಧ್ಯಾತ್ಮಿಕ ಅನುಭವದ ನಿವೇದನೆ. ಸಂತ ಪೌಲರ ಜೀವನ ಮತ್ತು ಮನಪರಿವರ್ತನೆಯ ಮೇಲೆ ಸ್ವಲ್ಪ ಗಮನ ಹರಿಸಿದರೆ ಅವರಾಡುವ ಪ್ರತಿಯೊಂದು ಮಾತಿಗೂ ಹಾಗೂ ನಿವೇದಿಸುವ ದೃಢವಿಶ್ವಾಸಕ್ಕೂ ಕ್ರಿಸ್ತನ ಪುನರುತ್ಥಾನದ ಕಿಡಿ ಇದೆ ಎಂಬುದು ಅಕ್ಷರಸ ಸತ್ಯ. ಸ್ನೇಹಿತರೆ, ಪ್ರತಿವರ್ಷ ಕ್ರಿಸ್ತರ ಪುನರುತ್ಥಾನದ ಹಬ್ಬವನ್ನು ಆಚರಿಸುವ ಗಳಿಗೆ ಬಂದಾಗ ನನ್ನನ್ನು ಸಂತ ತೋಮಾಸನಂತೆ ಹಲವು ಪ್ರಶ್ನೆಗಳು ಕಾಡುತ್ತಿದ್ದವು. ಪ್ರಭುಕ್ರಿಸ್ತರ ಪುನರುತ್ಥಾನವನ್ನು ಖಚಿತ ಪಡಿಸುವ ಸಾಕ್ಷಿ ಪುರಾವೆಗಳು ಯಾವುವು? ಮತ್ತು ಅವುಗಳನ್ನು ನಿರ್ಧರಿಸುವ ಅಂಶಗಳು ಯಾವುವು? ಇದಕ್ಕೆಲ್ಲಾ ಸ್ಪಷ್ಟವಾದ ಮತ್ತು ನಿಖರವಾದ ಉತ್ತರ ದೊರಕಿದ್ದು ನನ್ನ ದೈವಶಾಸ್ತ್ರೀಯ ಅಧ್ಯಯನದ ಸಮಯದಲ್ಲಿ ಮತ್ತು ಭಕ್ತವಿಶ್ವಾಸಿಗಳೊಂದಿಗಿನ ಸಂದರ್ಶನದಲ್ಲಿ. ಪ್ರಭುಕ್ರಿಸ್ತರ ಪುನರುತ್ಥಾನಕ್ಕೆ ಇರುವ ಸಾಕ್ಷಿ ಪುರಾವೆಗಳು ಮತ್ತು ನಮ್ಮ ವಿಶ್ವಾಸವನ್ನು ದೃಢಪಡಿಸುವ ಸತ್ಯಾಂಶಗಳೆಂದರೆ, ಬರಿದಾಗಿದ್ದ ಸಮಾಧಿ, ಕ್ರಿಸ್ತನ ಜೀವನವನ್ನು ಪಾಡು, ಮರಣ ಮತ್ತು ಪುನರುತ್ಥಾನವನ್ನು ನಿರೂಪಿಸುವ ಐತಿಹಾಸಿಕ ಪವಿತ್ರಗ್ರಂಥ, ಪ್ರಭುಯೇಸುಕ್ರಿಸ್ತರು ಆರಿಸಿದ ಹನ್ನೆರಡು ಶಿಷ್ಯರ ಜೀವನ ಮತ್ತು ಮರಣದ ವೃತ್ತಾಂತ, ಸಂತರ ಮತ್ತು ರಕ್ತಸಾಕ್ಷಿಗಳ ಬದ್ಧತೆ, ಎದೆಗಾರಿಕೆ ಮತ್ತು ತ್ಯಾಗಮಯ ಜೀವನ, ಎರಡು ಸಾವಿರ ವರ್ಷಗಳ ಇತಿಹಾಸದೊಂದಿಗೆ ನಡೆದು ಬಂದಿರುವ ಮತ್ತು ಇಂದಿಗೂ ಜೀವಂತವಾಗಿರುವ ಕ್ರೈಸ್ತ ಸಂಪ್ರದಾಯ ಮತ್ತು ಪರಂಪರೆ. ಹಲವು ಸಂತರ ಮತ್ತು ರಕ್ತಸಾಕ್ಷಿಗಳ ಜೀವಂತ ವಾಕ್ಯಗಳನ್ನು ಗಮನಿಸಿದರೆ ಪುನರುತ್ಥಾನದ ಅನುಭವವನ್ನು ನಾವು ಗ್ರಹಿಸಬಹುದು.
ಪ್ರಸಿದ್ಧ ಲ್ಯಾಟಿನ್ ದೈವಶಾಸ್ತ್ರಜ್ಞ ಟರ್ಟೂಲಿಯನ್ ಹೀಗೆ ಹೇಳುತ್ತಾರೆ, “ರಕ್ತಸಾಕ್ಷಿಗಳ ಪ್ರತಿಯೊಂದು ಹನಿ ರಕ್ತವೇ ಕ್ರೈಸ್ತಧರ್ಮಸಭೆಯ ಆರಂಭಕ್ಕೆ ಕಾರಣವಾಯಿತು”
ಅಂತಿಯೋಕ್ಯಾದ ಸಂತ ಇಗ್ನಾಸಿಯಸ್ ಅವರನ್ನು ಸಿಂಹಕ್ಕೆ ಆಹಾರವನ್ನಾಗಿಸಿದಾಗ ಅವರು ಬಾಯಿಂದ ಬಂದ ಮಾತು, “ನಾನು ಕ್ರಿಸ್ತನ ಗೋಧಿಕಾಳು, ನನ್ನ ದೇಹ ಸಿಂಹದ ಬಾಯಿಯಲ್ಲಿ ನುಣ್ಣಗಾಗಿ, ಕ್ರಿಸ್ತನಿಗೆ ಶುದ್ಧ ರೊಟ್ಟಿಯಾಗುವೆ”
ಈ ರೀತಿ ಅನೇಕಾನೇಕ ಸಂತರು ಮತ್ತು ರಕ್ತಸಾಕ್ಷಿಗಳು ಕ್ರಿಸ್ತನಿಗಾಗಿ ತಮ್ಮ ಬದುಕನ್ನು ಸಹ ಲೆಕ್ಕಿಸದೆ ಕ್ರಿಸ್ತರ ಸಂದೇಶಕ್ಕೆ ಸಾಕ್ಷಿಗಳಾಗಿರುವುದರಲ್ಲಿ ಯಾವ ಸಂಶಯವು ಇಲ್ಲ.
2. ಪ್ರಭುಕ್ರಿಸ್ತರು ವಚನವಿತ್ತ ಯಥೇಚ್ಛವಾದ ಜೀವವೇ ಪುನರುತ್ಥಾನ 
ಯೊವಾನ್ನ 10, 10 “ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು”. ಪ್ರಭುಕ್ರಿಸ್ತರು ನೀಡಿದ ಯಥೇಚ್ಛವಾದ ಜೀವ ಎರಡು ಸಾವಿರ ವರ್ಷಗಳ ನಂತರವೂ ಇನ್ನೂ ಜೀವಂತವಾಗಿದೆ. ನಾವೆಲ್ಲರೂ ಈ ಜೀವಂತ ಸತ್ಯಕ್ಕೆ ಸಾಕ್ಷಿಗಳು. ಪ್ರಭುಕ್ರಿಸ್ತರು ನಮ್ಮಲ್ಲಿ ಇಂದಿಗೂ ಜೀವಿಸುತ್ತಿದ್ದಾರೆ. ಪ್ರಭುಕ್ರಿಸ್ತರ ಪುನರುತ್ಥಾನದ ನಂತರ ಆದಿಕ್ರೈಸ್ತರು ಮಾಡುತ್ತಿದ್ದ ಘೋಷಣೆ ಹೀಗಿತ್ತು; “ನಾವು ಪುನರುತ್ಥಾನದ ಭಕ್ತವಿಶ್ವಾಸಿಗಳು ಮತ್ತು ನಮ್ಮ ಅಲ್ಲೆಲೂಯ ಗೀತೆ”. ನಾವು ಪಾಸ್ಕ ಕಾಲದಲ್ಲಿ ಮಾತ್ರ ಪುನರುತ್ಥಾನದ ಕ್ರೈಸ್ತರಲ್ಲ. ಸದಾಕಾಲ ನಾವು ಕ್ರಿಸ್ತನ ಮಹಿಮೆಯನ್ನು ಬೆಳಗುವ ಕ್ರಿಸ್ತಪ್ರತಿನಿಧಿಗಳು ಮತ್ತು ಕ್ರಿಸ್ತನರಾಯಭಾರಿಗಳು.
3. ಪ್ರಭುಕ್ರಿಸ್ತರ ಪುನರುತ್ಥಾನದ ಮೂಲಕ ನಮ್ಮೆಲ್ಲರ ಪುನರುತ್ಥಾನಕ್ಕೆ ಖಚಿತತೆ ಲಭಿಸಿದೆ.
ಯೊವಾನ್ನನ ಶುಭಸಂದೇಶ ಅಧ್ಯಾಯ11 ವಚನ25-26ರಲ್ಲಿ ಪ್ರಭುಕ್ರಿಸ್ತರು ಮಾರ್ತಾಳಿಗೆ ಹೀಗೆ ಹೇಳುತ್ತಾರೆ “ಪುನರುತ್ಥಾನವು ಜೀವವು ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತಿಯಾ? 
ಇಂದು ಪ್ರಭುಕ್ರಿಸ್ತರ ಅನುಯಾಯಿಗಳಾದ ನಮಗೆ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಸ್ನೇಹಿತರೆ, ಈ ವಿಶ್ವಾಸ ನಮ್ಮನ್ನು ಮರಣದ ಅಂಧಕಾರದಿಂದ ನಿತ್ಯಜ್ಯೋತಿಯೆಡೆಗೆ ಕರೆದೊಯ್ಯುತ್ತದೆ. ಆದರೆ ನಾವು ಮಾಡಬೇಕಾದ ಆದ್ಯ ಕೆಲಸವೆಂದರೆ ಕ್ರಿಸ್ತರಲ್ಲಿ ಮತ್ತು ಅವರ ದೈವೀಕ ಶಕ್ತಿಯಲ್ಲಿ ನಂಬಿಕೆಯನ್ನಿರಿಸುವುದು. ಕಷ್ಟದಲ್ಲೂ, ದುಃಖದಲ್ಲೂ, ನೋವಿನಲ್ಲೂ, ನಲಿವಿನಲ್ಲೂ, ಇಕ್ಕಟ್ಟು ಬಿಕ್ಕಟ್ಟಿನಲ್ಲೂ, ನಿರಾಶೆ ನೀರವತೆಯಲ್ಲೂ ನಾವು ಪ್ರಭುವಿನಲ್ಲಿ ವಿಶ್ವಾಸವನ್ನು ಇರಿಸುವುದು ಪುನರುತ್ಥಾನ ಕ್ರೈಸ್ತರಾದ ನಮ್ಮ ಕರ್ತವ್ಯ. ಈ ಸಂದರ್ಭದಲ್ಲಿ ಪುನರುತ್ಥಾನರಾದ ಪ್ರಭುಕ್ರಿಸ್ತರು ನಮಗೆ 
4. ಪ್ರಭುವಿನ ಪುನರುತ್ಥಾನ ಭರವಸೆಯ ಸಂಕೇತ
ಇತ್ತೀಚಿನ ದಿನಗಳಲ್ಲಿ ಅಗೋಚರವಾದ ಸೂಕ್ಷ್ಮ ವೈರಾಣುವಿನ ಪ್ರಭಾವದಿಂದ ಇಡೀ ಜಗತ್ತು ಅಚಲವಾಗಿರುವುದು ನಮಗೆಲ್ಲಾ ತಿಳಿದ ವಿಷಯವಾಗಿದೆ. ಈ ಸೂಕ್ಷ್ಮ ವೈರಾಣುವಿನಿಂದ ಅನೇಕ ದುಷ್ಪರಿಣಾಮಗಳು ಸಂಭವಿಸಿದೆ. ಇದರಿಂದ ಒಂದು ಕಡೆ ಸುಖದಿಂದಿರುವವರು ಸಾವಿರಾರು ಜನರಾದರೆ ಇನ್ನೊಂದು ಕಡೆ ವಸತಿಯಿಲ್ಲದೆ, ಒಂದು ತುತ್ತು ಅನ್ನವಿಲ್ಲದೆ, ಸರಿಯಾದ ನಿದ್ರೆಯಿಲ್ಲದೆ ಅಸಹಾಯಕರಾಗಿರುವ ಲಕ್ಷಕ್ಕೂ ಮೀರಿದ ಜನ. ಇವರ ಜೀವನ ದಿಕ್ಕುದೆಸೆಯಿಲ್ಲದಾಗಿದೆ. ಕೊರೋನ ವೈರಾಣುವಿನ ಪ್ರಭಾವ ಕೇವಲ ಮನುಷ್ಯನ ದಿನನಿತ್ಯ ಚಟುವಟಿಕೆಗಳ ಮೇಲೆ ಮಾತ್ರವಲ್ಲ, ಅವರ ಮೂಲಭೂತ ನಂಬಿಕೆ, ವಿಶ್ವಾಸಗಳ ಅಡಿಪಾಯವನ್ನು ಕದಡಿದೆ. ನಾವು ನಂಬುವ, ವಿಶ್ವಾಸಿಸುವ, ಆರಾಧಿಸುವ, ಪೂಜಿಸುವ ದೇವರು ಇಂತಹ ಸಂದಿಗ್ಧ ಪರಿಸರದಲ್ಲಿ ಎಲ್ಲಿದ್ದಾರೆ? ದೇವರು ಏಕೆ ನಮ್ಮನ್ನು ಇಂತಹ ಅನಿಷ್ಟ ಪಿಡುಗಿನಿಂದ ರಕ್ಷಿಸುತ್ತಿಲ್ಲ? ಎಂಬ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ಇದು ಮಾನವ ನಿರ್ಮಿತವೇ ಅಥವಾ ನೈಸರ್ಗಿಕ ದುರಂತವೇ? ಯಾವುದಾದರಾಗಲಿ ಮಾನವ ಮಾಡುವ ತಪ್ಪುಗಳಿಗೆ ದೇವರನ್ನೇಕೆ ದೂಷಿಸಬೇಕು? ದೇವರು ನಮಗೆ ಸ್ವಾತಂತ್ರ್ಯವನ್ನು, ಬುದ್ಧಿ, ವಿವೇಕವನ್ನು ನೀಡಿದ್ದಾರೆ. ನಾವದನ್ನು ದುರ್ಬಳಕೆ ಮಾಡಿಕೊಂಡಲ್ಲಿ ಅದು ನಮ್ಮ ತಪ್ಪು. ಮಾಡಿದುಣ್ಣೋ ಮಹರಾಯ ಎಂಬ ಗಾದೆಮಾತಿದೆ. ಕ್ರೈಸ್ತರಾದ ನಾವು ನಿರ್ಗತಿಕರಿಗೆ, ಅಸಹಾಯಕರಿಗೆ, ಬಡತನದಿಂದ ಬಳಲುತ್ತಿರುವವರಿಗೆ ಆಸರೆಯಾಗಬೇಕು. ಜೀವ ಇರದ ಜನತೆಯಲ್ಲಿ ಜೀವವನ್ನು ನೀಡುವ ಕಾಯಕವನ್ನು ಮಾಡಬೇಕಾದದ್ದು ನಮ್ಮ ಕರ್ತವ್ಯ. ಈ ಪಿಡುಗಿನಿಂದ ಎದೆಗುಂದಿದವರಿಗೆ, ನಿರಾಶಿತ್ರರಿಗೆ ಬದುಕಿನಲ್ಲಿ ಬರವಸೆಯನ್ನು ಬೆಳಕನ್ನು ನೀಡುವ ಶಕ್ತಿ ನಮ್ಮ ಪ್ರಭುಕ್ರಿಸ್ತರಿಂದ ನಮಗೆ ಬರುತ್ತದೆ. ಆ ಭರವಸೆಯನ್ನು ರವಾನಿಸುವ ಕೈಂಕರ್ಯದೆಡೆಗೆ ಸನ್ನದ್ದರಾಗೋಣ.
------------------------------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment