ಏಪ್ರಿಲ್ 10,
2020 ಶುಕ್ರವಾರ [ಕೆಂಪು]
ಶುಭ ಶುಕ್ರವಾರ
ಮೊದಲ ವಾಚನ: ಯೆಶಾಯ 52:13 - 53.12
ಕೀರ್ತನೆ 31:2, 6, 12-13, 15-16, 17, 24 ಲೂಕ
23:46
ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ
ಎರಡನೇ ವಾಚನ: ಹಿಬ್ರಿ 4.14-16; 5.7-9
ಯೇಸುವಿನ ಪೂಜ್ಯಯಾತನೆಯ ವೃತ್ತಾಂತ: ಯೊವಾನ್ನ 18.1 - 19.42
ಮೊದಲ ವಾಚನ: ಯೆಶಾಯ 52:13 - 53.12
13 : ನನ್ನ ದಾಸನಿದೋ, ಕೃತಾರ್ಥ ಆಗುವವನಾತ ಮಹಿಮಾನ್ವಿತ ಏರುವನು ಉನ್ನತ ಪದವಿಗಾತ.
14 : ಆತನ ಮುಖ ನರಮಾನವರ ಮುಖಕ್ಕಿಂತ ಆತನ ರೂಪ ನರಪುತ್ರರ ರೂಪಕ್ಕಿಂತ ವಿಕಾರಗೊಂಡಿದೆ ನಿಜ; ಆದರೆ ಹಲವರು ನೋಡಿ ಆದರು ಚಕಿತ.
15 : ಅಂತೆಯೆ ಹಲರಾಷ್ಟ್ರಗಳು ಚಕಿತವಾಗುವುವು ಅಚ್ಚರಿಗೊಂಡು ಬಾಯಿಮುಚ್ಚಿಕೊಳ್ಳುವರು ಅರಸರು ಆತನನು ಕಂಡು. ಏಕೆನೆ, ನೋಡುವರವರು ಅಪೂರ್ವ ಸಂಗತಿಯೊಂದನು ಗ್ರಹಿಸಿಕೊಳ್ಳುವರವರು ಎಂದೂ ಕೇಳದ ವಿಷಯವನು. ನಂಬುವವರಾರು
ನಾವು ಕೇಳಿದ ಸಂಗತಿಯೇನು? ಗುರುತಿಸುವರಾರು ಸರ್ವೇಶ್ವರನ ಶಕ್ತಿಯನು? ಸರ್ವೇಶ್ವರನ ಮುಂದೆ ಬೆಳೆದಾತನ
ಸಸಿಯಂತೆ, ಒಣನೆಲದೊಳಗೆ ಇಳಿಯುವ ಬೇರಿನಂತೆ. ಆತನಲಿ ಅಂದಚಂದಗಳಾವುವೂ ಇರಲಿಲ್ಲ, ನೋಡಲು ಲಕ್ಷಣವಾದುವು
ಏನೂ ಕಾಣಲಿಲ್ಲ. ಧಿಕ್ಕರಿಸಲ್ಪಟ್ಟವನು, ಮನುಜರಿಂದ ತಿರಸ್ಕೃತನು , ದುಃಖಕ್ರಾಂತನು, ಕಷ್ಟಸಂಕಟ ಅನುಭವಿಸಿದವನು.
ನೋಡಿದವರು ಮುಖ ತಿರುಗಿಸುವಷ್ಟು ನಿಂದಕನು! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನು. ನಿಜವಾಗಿ
ಸಹಿಸಿಕೊಂಡನಾತ ನಮ್ಮ ಬಾಧೆಗಳನ್ನು ಹೊರೆಯಂತೆ ಹೊತ್ತನಾತ ನಮ್ಮ ಕಷ್ಟಸಂಕಟಗಳನ್ನು ನಾವು ಭಾವಿಸಿದ್ದಾದರು
ಏನು? ಆತ ದೇವರಿಂದ ಬಾಧಿತನೆಂದು, ದಂಡನೆಗೆ ಗುರಿಯಾದವನು, ತಿರಸ್ಕೃತನಾದವನೆಂದು! ಗಾಯಗೊಂಡನಾತ ನಮ್ಮ
ಪಾಪಗಳ ನಿಮಿತ್ತ, ಜಜ್ಜರಿತನಾದ ನಮ್ಮ ದ್ರೋಹಗಳ ದೆಸೆಯಿಂದ ಶಿಕ್ಷೆಗೊಳಗಾದ ನಮ್ಮ ರಕ್ಷೆಗಾಗಿ, ಪೆಟ್ಟುತಿಂದ
ನಮ್ಮ ಸ್ವಸ್ಥತೆಗಾಗಿ, ತೊಳಲುತ್ತಿದ್ದೆವು ನಾವೆಲ್ಲರು ದಾರಿತಪ್ಪಿದ ಕುರಿಗಳಂತೆ ಹಿಡಿಯುತ್ತಿದ್ದನು
ಪ್ರತಿಯೊಬ್ಬನು ತನ್ನ ತನ್ನ ದಾರಿಯನ್ನೆ, ನಮ್ಮೆಲ್ಲರ ದೋಷವನು ಸರ್ವೇಶ್ವರ ಹಾಕಿದ್ದ ಆತನ ಮೇಲೆ, ಬಾಧೆಗಳಿಗೊಳಗಾದ,
ಹಿಂಸೆ ಸಹಿಸಿದ ಆತ ಬಾಯ್ದೆರೆಯದೆ. ಹೌದು, ಬಾಯ್ದೆರೆಯದಿದ್ದ ಬಲಿಗೊಯ್ದ ಕುರಿಮರಿಯಂತೆ ತುಪ್ಪಟ ಕತ್ತರಿಸುವವನ
ಮುಂದಿರುವ ಮೂಕ ಕುರಿಮರಿಯಂತೆ. ಎಳೆದೊಯ್ದರು ಬಂಧನದಿಂದ, ನ್ಯಾಯಸ್ಥಾನದಿಂದ ಹೌದು, ದೂರಮಾಡಿದರು ಆತನನು
ಜೀವಲೋಕದಿಂದ, ವಧೆಯಾದನಾತ ನಮ್ಮ ಜನರಪಾಪದ ದೆಸೆಯಿಂದ. ಆದರೂ ಸಮಕಾಲೀನವರಾರು ಮರುಗಲಿಲ್ಲ ಕನಿಕರದಿಂದ.
ಮಾಡಲಿಲ್ಲ ಆತ ಯಾವ ಪಾಪಕೃತ್ಯ, ಅವನ ಬಾಯಲಿರಲಿಲ್ಲ ವಂಚನೆಯ ವಾಕ್ಯ ಹೂಣಿದರಾತನನು ಸತ್ತಮೇಲೆ, ದುರುಳರ
ಹಾಗೂ ದುಷ್ಕರ್ಮಿಗಳ ನಡುವೆ. ಸರ್ವೇಶ್ವರ ಚಿತ್ತದಂತೆ ಜಜ್ಜರಿತನಾದ ಹಿಂಸೆಬಾಧೆಗಳಿಂದ ಪಾಪ ಪ್ರಾಯಶ್ಚಿತ್ತಕ್ಕಾಗಿ
ತನ್ನ ಪ್ರಾಣವನೆ ಸಮರ್ಪಿಸಿದ. ಈ ಪರಿ ಕಾಣುವನು ತನ್ನ ಸಿರಿಸಂತಾನವನು, ಪಡೆಯುವವನು ಚಿರಜೀವವನು ತಾನೇ
ನೆರವೇರಿಸುವನು ಸರ್ವೇಶ್ಚರನ ಸಂಕಲ್ಪವನು, ತೃಪ್ತನಾಗುವನಾತ ಕಂಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ
ಆ ನನ್ನ ದಾಸ ತರುವನು ಸನ್ಮಾರ್ಗಕ್ಕೆ ಬಹು ಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು
ಎಂತಲೆ ನೀಡುವೆ ಇವನಿಗೆ ಪಾಲನ್ನು ದೊಡ್ಡವರ ಸಂಗಡ, ಹಂಚಿಕೊಳ್ಳುವವನು ಸೂರೆಯನ್ನು ಬಲಿಷ್ಠರ ಸಂಗಡ
ಏಕೆನೆ ಪ್ರಾಣವನ್ನೆ ಧಾರೆಯೆರೆದು ಮರಣಹೊಂದಿದ ದ್ರೋಹಿಗಳೊಂದಿಗೆ ತನ್ನನೆ ಒಂದಾಗಿ ಎಣಿಸಿಕೊಂಡ. ಅನೇಕರ
ಪಾಪವನ್ನು ಹೊತ್ತು ಅವರಿಗಾಗಿ ಪ್ರಾರ್ಥಿಸಿದ.
ಕೀರ್ತನೆ 31:2, 6, 12-13, 15-16, 17, 25 ಲೂಕ
23:46
ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ
2 : ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು ಬೇಗನೆ | ನನ್ನಾಶ್ರಯಗಿರಿ, ದುರ್ಗಸ್ಥಾನವಾಗಿರು ನೀನೆ ||
6 : ಇಲ್ಲಸಲ್ಲದ ದೇವರನು ಅವಲಂಬಿಪರನು ನೀ ಒಲ್ಲೆ / ನಾನಾದರೋ ಪ್ರಭು, ಭರವಸೆಯಿಟ್ಟಿರುವುದು ನಿನ್ನಲ್ಲೆ //
12 : ನುಚ್ಚುನೂರಾದೆ, ಮಡಕೆಚಿಪ್ಪಿನಂತಾದೆ / ಸತ್ತವರಂತಾದೆ: ನೆನಪಿಗೆ ಬಾರದಾದೆ //
13 : ನನಗೆ ವಿರುದ್ಧ ಜನರಾಡುವ ಗುಸುಗುಸು ಮಾತು ಕೇಳಿ ಬರುತಿದೆ / ಭಯಭೀತಿ ಎನ್ನನಾವರಿಸಿದೆ, ಒಳಸಂಚು, ಪ್ರಾಣಹರಣ ನಡೆಯುತಿವೆ
14 : ನಾನಾದರೋ ಪ್ರಭೂ, ನಿನ್ನಲೆ ಭರವಸೆಯಿಟ್ಟಿರುವೆ / ನೀನೆ ನನ್ನ ದೇವರೆಂದು ಪ್ರಭು ಸಾರುವೆ //
15 : ನಿನ್ನ ಕೈಯಲ್ಲಿದೆ ನನ್ನ ಇಡೀ ಜೀವಮಾನ / ಬೆನ್ನಟ್ಟಿಬರುವ ವೈರಿಯಿಂದ ರಕ್ಷಿಸೆನ್ನ //
16 : ಬೆಳಗಿಸಲಿ ದಾಸನನು ನಿನ್ನ ಮುಖತೇಜವು / ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು //
17 : ನಿನಗೆ ಮೊರೆಯಿಡುವೆ, ನನಗಾಗದಿರಲಿ ಹೇ ಪ್ರಭು, ಮಾನಭಂಗ / ದುರುಳರಿಗಾಗಲೀ ಆಶಾಭಂಗ, ಮೂಕರಾಗವರು ಸೇರಲಿ ನರಕ //
24 : ಪ್ರಭುವಿಗಾಗಿ ಕಾದಿಹ ಜನರೆ, ನಿಮಗಿರಲಿ ಅಭಯ / ಧೈರ್ಯದಿಂದಿರಲಿ ನಿರುತ ನಿಮ್ಮೆಲ್ಲರ ಹೃದಯ //
ಎರಡನೇ ವಾಚನ: ಹಿಬ್ರಿ 4:14-16; 5:7-9
14 : ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ.
15 : ಈ ಪ್ರಧಾನ ಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ-ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ.
16 : ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.
7 : ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು.
8 : ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು.
9 : ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು.
ಯೇಸುವಿನ ಪೂಜ್ಯಯಾತನೆಯ ವೃತ್ತಾಂತ: ಯೊವಾನ್ನ 18:1 – 19:42
1 : ಯೇಸುಸ್ವಾಮಿ ಹೀಗೆ ಹೇಳಿದ ಬಳಿಕ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು.
2 : ಅವರು ತಮ್ಮ ಶಿಷ್ಯರೊಡನೆ ಆಗಾಗ ಅಲ್ಲಿಗೆ ಬರುವುದು ವಾಡಿಕೆ. ಅವರನ್ನು ಹಿಡಿದುಕೊಡಲಿದ್ದ ಯೂದನಿಗೆ ಆ ಸ್ಥಳ ಚೆನ್ನಾಗಿ ಗೊತ್ತಿತ್ತು
3 : ಆದುದರಿಂದ ಯೂದನು ಸೈನಿಕರ ಒಂದು ತಂಡವನ್ನೂ ಮುಖ್ಯ ಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಲಾಳುಗಳನ್ನೂ ಕರೆದುಕೊಂಡು ದೀವಟಿಗೆ, ಪಂಜು ಮತ್ತು ಆಯುಧಗಳ ಸಮೇತ ಅಲ್ಲಿಗೆ ಬಂದನು.
4 : ಯೇಸುಸ್ವಾಮಿಗೆ ತಮಗೆ ಸಂಭವಿಸಲಿರುವುದೆಲ್ಲವೂ ತಿಳಿದಿತ್ತು ಎಂದೇ ಮುಂದೆ ಬಂದು, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದರು.
5 : ಅವರು, “ನಜರೇತಿನ ಯೇಸುವನ್ನು” ಎಂದರು. ಯೇಸು, “ನಾನೇ ಆತನು” ಎಂದು ಉತ್ತರಕೊಟ್ಟರು. ಅವರನ್ನು ಹಿಡಿದುಕೊಡಲಿದ್ದ ಗುರುದ್ರೋಹಿ ಯೂದನು ಅವರ ಸಂಗಡವೇ ನಿಂತುಕೊಂಡಿದ್ದನು.
6 : “ನಾನೇ ಆತನು,” ಎಂದು ಯೇಸು ನುಡಿಯುತ್ತಲೇ, ಅವರೆಲ್ಲರೂ ಹಿಂದೆ ಸರಿದು ನೆಲದ ಮೇಲೆ ಬಿದ್ದರು.
7 : ಯೇಸು ಮತ್ತೊಮ್ಮೆ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಲು, “ನಜರೇತಿನ ಯೇಸುವನ್ನು” ಎಂದು ಉತ್ತರ ಬಂದಿತು.
8 : ಅದಕ್ಕೆ ಯೇಸು, “ನಾನೇ ಆತನೆಂದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಾ ಇರುವುದು ನನ್ನನ್ನಾದರೆ, ಮಿಕ್ಕ ಇವರನ್ನು ಹೋಗಬಿಡಿ,” ಎಂದು ನುಡಿದರು.
9 : ‘ನೀವು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ಕಳೆದು ಕೊಳ್ಳಲಿಲ್ಲ’ ಎಂದು ತಾವೇ ನುಡಿದ ಮಾತು ನೆರವೇರುವಂತೆ ಯೇಸು ಹೀಗೆಂದರು
10 : ಅಷ್ಟರೊಳಗೆ ಸಿಮೋನ ಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿರಿದು, ಪ್ರಧಾನ ಯಾಜಕನ ಸೇವಕನಾದ ಮಾಲ್ಕನ ಬಲಗಿವಿಯನ್ನು ಕತ್ತರಿಸಿಬಿಟ್ಟನು.
11 : ಆಗ ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ?” ಎಂದು ನುಡಿದರು. ಅನ್ನನ ಮುಂದೆ ಯೇಸು
12 : ಅನಂತರ ಸೈನಿಕರು, ಸಹಸ್ರಾಧಿಪತಿ ಹಾಗು ಯೆಹೂದ್ಯರು ಕಳುಹಿಸಿದ್ದ ಕಾವಲಾಳುಗಳು ಯೇಸುವನ್ನು ಹಿಡಿದು ಕಟ್ಟಿ ಮೊದಲು ಅನ್ನನ ಬಳಿಗೆ ಕೊಂಡೊಯ್ದರು.
13 : ಅನ್ನನು, ಆ ವರ್ಷ ಪ್ರಧಾನ ಯಜಕನಾಗಿದ್ದ ಕಾಯಫನ ಮಾವ.
14 : ಸಮಸ್ತ ಜನತೆಗಾಗಿ ಒಬ್ಬನು ಸತ್ತರೆ ವಿಹಿತವೆಂದು ಸಲಹೆಕೊಟ್ಟವನು ಈ ಕಾಯಫನೇ. ಗುರುವನ್ನು ಅಲ್ಲಗಳೆದ ಪೇತ್ರ
15 : ಸಿಮೋನ್ ಪೇತ್ರನು ಮತ್ತು ಪ್ರಧಾನ ಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನು ಯೇಸುಸ್ವಾಮಿಯನ್ನು ಹಿಂಬಾಲಿಸುತ್ತಾ ಹೋದರು. ಪರಿಚಿತನಾಗಿದ್ದ ಶಿಷ್ಯನು ಯೇಸುವಿನೊಡನೆ ಪ್ರಧಾನ ಯಾಜಕನ ಮನೆಯ ಅಂಗಳವನ್ನು ಹೊಕ್ಕನು.
16 : ಪೇತ್ರನು ಹೊರಗಡೆ ಬಾಗಿಲ ಬಳಿಯಲ್ಲೇ ನಿಂತನು. ಪರಿಚಿತನಾಗಿದ್ದವನು ಅನಂತರ ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಕ್ಕೆ ಕರೆದುಕೊಂಡು ಹೋದನು.
17 : ಆ ದ್ವಾರಪಾಲಕಿಯು ಪೇತ್ರನನ್ನು ನೋಡಿ, “ನೀನೂ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೆ?” ಎಂದು ಕೇಳಿದಳು. ಅದಕ್ಕೆ ಪೇತ್ರನು, “ಇಲ್ಲ, ನಾನಲ್ಲ,” ಎಂದುಬಿಟ್ಟನು.
18 : ಆಗ ಚಳಿಯಿದ್ದುದರಿಂದ ಸೇವಕರೂ ಕಾವಲಾಳುಗಳೂ ಇದ್ದಲಿನ ಬೆಂಕಿ ಮಾಡಿ, ಸುತ್ತಲೂ ನಿಂತು ಚಳಿಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರ ಸಂಗಡ ನಿಂತುಕೊಂಡು ಚಳಿಕಾಯಿಸಿಕೊಳ್ಳತೊಡಗಿದನು.
19 : ಅಷ್ಟರಲ್ಲಿ ಪ್ರಧಾನಯಾಜಕನು ಯೇಸುಸ್ವಾಮಿಯನ್ನು ಅವರ ಶಿಷ್ಯರ ವಿಷಯವಾಗಿ ಹಾಗು ಬೋಧನೆಯ ವಿಷಯವಾಗಿ ವಿಚಾರಿಸಿದನು.
----------------
ಚಿಂತನೆ
----------------
ಚಿಂತನೆ
ಪ್ರಿಯರೆ, ಇಂದು ಪವಿತ್ರ ಶುಭ ಶುಕ್ರವಾರ. ನರಪುತ್ರ ಪ್ರಭು ಯೇಸುಕ್ರಿಸ್ತರು ಶಿಲುಬೆಯ ಮೇಲೆ ತಮ್ಮ ಪ್ರಾಣವನ್ನು ಲೋಕದ ಸಮಸ್ತ ಜನತೆಗಾಗಿ ಮುಡಿಪಾಗಿಟ್ಟ ದಿನ. ಪ್ರಭುವಿನ ಈ ನಿಸ್ವಾರ್ಥ ಜನಹಿತಕೇಂದ್ರಿತ ತ್ಯಾಗದಿಂದ ನಮ್ಮ ನಿತ್ಯಜೀವದ ದ್ವಾರವು ತೆರೆಯಲ್ಪಟ್ಟಿತು. ನಿತ್ಯಜೀವದ ಭರವಸೆಯು ನಮ್ಮ ಹೃದಯಗಳಲ್ಲಿ ದೃಢವಾಯಿತು. ಆದರೆ ಕೊರೋನ ವೈರಾಣುವಿನಂತಹ ಅಸಂಭವನೀಯ ಘಟನೆಗಳು ನಮ್ಮನ್ನು ನಮ್ಮ ವಿಶ್ವಾಸದಿಂದ ಬಲು ದೂರ ಕರೆದೊಯ್ಯುತ್ತಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಚಿತ್ತ ಧೃತಿಗೆಡದೆ ಅಚಲವಾಗಿರಬೇಕಾದರೆ, ನಾವು ನಮ್ಮ ದೃಷ್ಟಿಯನ್ನು ಪ್ರಭುವಿನಲ್ಲಿ ಕೇಂದ್ರಿಕರಿಸಬೇಕು. ಇಂದು ನಾವು ನಮ್ಮ ಅಂತರಂಗ ಮತ್ತು ಬಹಿರಂಗದ ದೃಷ್ಟಿಯಿಂದ ಶಿಲುಬೆಯನ್ನು ಕೆಲವು ಸಮಯ ವೀಕ್ಷಿಸೋಣ. ಪ್ರಭುವಿನ ತ್ಯಾಗದ ಹಿಂದಿರುವ ದೈವೋದ್ದೇಶವನ್ನು ಗ್ರಹಿಸಲು ಇಂದಿನ ಆಚರಣೆಗಳು ಕರೆನೀಡುತ್ತಿವೆ.
ಒಮ್ಮೆ ಬೆಂಗಳೂರಿನ ಪವಿತ್ರ ಹೃದಯದ ದೇವಾಲಯದಲ್ಲಿ ರಿಚರ್ಡ್ ಎಂಬ ಯುವಕ ಪ್ರತಿದಿನ ಬಲಿಪೂಜೆಯಲ್ಲಿ ಭಾಗವಹಿಸಿ ಬಹಳ ಹೊತ್ತು ದೇವಾಲಯದ ಬಾಗಿಲ ಬಳಿ ಕುಳಿತು ಬಲಿಪೀಠದ ಕಡೆ ನೋಡುತ್ತಾ ಕುಳಿತಿರುತ್ತಿದ್ದ. ಧರ್ಮಕೇಂದ್ರದ ಗುರುಗಳು ಇವನನ್ನು ಅನೇಕ ತಿಂಗಳುಗಳ ಕಾಲ ಗಮನಿಸಿದರು ಆದರೆ ಯಾವತ್ತೂ ಅವನ ಬಳಿ ಏನನ್ನೂ ವಿಚಾರಿಸಿರಲಿಲ್ಲ. ಹೀಗೆ ವರ್ಷಗಳು ಕಳೆದವು ಆದರೆ ರಿಚರ್ಡ್ ಮಾತ್ರ ತನ್ನ ದಿನಚರಿಯನ್ನು ದಿನನಿತ್ಯದ ಪೂಜೆ ಪ್ರಾರ್ಥನೆಯನ್ನು ಮಾತ್ರ ನಿಲ್ಲಿಸಲಿಲ್ಲ. ಹೀಗೆ ಒಂದು ದಿನ ಬಲಿಪೂಜೆಯ ನಂತರ ಧರ್ಮಕೇಂದ್ರದ ಗುರುಗಳು ಬಲಿಪೀಠದ ಕಡೆ ವೀಕ್ಷಿಸುತ್ತಿದ್ದ ರಿಚರ್ಡನ ಬಳಿಬಂದು. ಏನು ಸುಮ್ಮನೆ ಕುಳಿತಿದ್ಯ ಎಂದು ಕೇಳಿದಾಗ ರಿಚರ್ಡ್ ಇಲ್ಲ ಸ್ವಾಮಿ ನಾನು ಪ್ರಾರ್ಥನೆ ಮಾಡ್ತಿದಿನಿ ಅಂದ. ಆಗ ಗುರುಗಳಿಗೆ ಆಶ್ಚರ್ಯವಾಗಿ, ಅಲ್ಲ ರಿಚರ್ಡ್ ನಾನು ನಿನ್ನ ಪ್ರತಿದಿನ ನೋಡ್ತಿನಿ. ನೀನು ಬಲಿಪೀಠದ ಕಡೆ ಮುಖ ಮಾಡಿ ಎನನ್ನೋ ನೋಡ್ತಿತ್ರ್ಯ? ಏನನ್ನ ನೋಡ್ತಿತ್ರ್ಯ? ಆಗ ರಿಚರ್ಡ್ ಹೇಳ್ತನೆ ಸ್ವಾಮಿ ನಾನು ಶಿಲುಬೆಯ ಮೇಲಿರುವ ಕ್ರಿಸ್ತರನ್ನು ನೋಡ್ತಿನಿ ಅಲ್ಲಿಂದ ಕ್ರಿಸ್ತರು ನನ್ನನ್ನು ನೋಡ್ತಾರೆ. ಅದೇ ನನ್ನ ದಿನನಿತ್ಯದ ಪ್ರಾರ್ಥನೆ. ಬರೀ ನೋಡ್ತಿತ್ರ್ಯ? ಜಪ ಮಾಡೋದಿಲ್ವ? ಎಂದು ಗುರುಗಳು ಮತ್ತೆ ಕೇಳುತ್ತಾರೆ. ಆಗ ರಿಚರ್ಡ್ ಹೇಳ್ತನೆ ಸ್ವಾಮಿ ನಾನು ಕ್ರಿಸ್ತನನ್ನು ನೋಡುವುದೇ ನನ್ನ ಜಪ. ಮೊದಮೊದಲು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ನನ್ನಲ್ಲಿ ಧೈರ್ಯವಿರಲಿಲ್ಲ, ಭಯವಾಗುತ್ತಿತ್ತು. ಏಕೆಂದರೆ ಅವರನ್ನು ನೋಡಿದಾಗ ನನ್ನ ಪಾಪಗಳು, ಆಂತರಿಕ ಜೀವನ ನನ್ನ ಕಣ್ಮುಂದೆ ಬರುತ್ತಿದ್ದವು. ದಿನಗಳು ಕಳೆದಂತೆ ಅವರ ನೋಟದಿಂದ ನನ್ನಲ್ಲಿರುವ ನೋವು, ಆತಂಕ, ಭಯ, ಅಪನಂಬಿಕೆ, ಅವಿಶ್ವಾಸ ಕಾಲಕ್ರಮೇಣ ಮಾಯವಾಗಿ ಏನೋ ನನ್ನಲ್ಲಿ ಭರವಸೆ, ಚೈತನ್ಯ ತುಂಬಿದೆ. ಜೀವನದಲ್ಲಿ ಸವಾಲುಗಳು ಎದುರಾದಾಗ ಅದನ್ನು ಧೈರ್ಯದಿಂದ ಎದುರಿಸಲು ಶಕ್ತಿ ಬಂದಿದೆ ಎಂಬುದು ನನ್ನ ಅನುಭವ ಎಂದು ರಿಚರ್ಡ್ ತನ್ನ ಅನುಭವವನ್ನು ಗುರುಗಳಲ್ಲಿ ಹೇಳಿಕೊಂಡ.
ಪ್ರಿಯರೆ ಇಂದಿನ ಸಂದಿಗ್ಧ ವಾತಾವರಣದಲ್ಲಿ ನಾವು ಎಷ್ಟು ಜನ ಶಿಲುಬೆಯನ್ನು ನೋಡುತ್ತಿದ್ದೇವೆ? ಎಷ್ಟರಮಟ್ಟಿಗೆ ಶಿಲುಬೆಯನ್ನು ಗ್ರಹಿಸಿದ್ದೇವೆ? ಶಿಲುಬೆಯ ಮೂಲಕ ನಮ್ಮನ್ನು ವಿಮೋಚಿಸುವವರು ಇವರೇ ಎಂದು ನಂಬಿದ್ದೇವೇ? ನಾವು ಟಿವಿಯನ್ನು ಮತ್ತು ಮೊಬೈಲನ್ನು ಸತತ ವಿಕ್ಷೀಸುವುದರಲ್ಲಿ ನಿರತರಾಗಿದ್ದೇವೆ ಹೊರತು ಶಿಲುಬೆಯನ್ನಲ್ಲ. ನನ್ನಲ್ಲಿ ವಿಶ್ವಾಸ ಕಳೆದು ಹೋಗುತ್ತಿದೆ ಎಂದು ಹೇಳುವವರು ಸಾವಿರಾರು ಮಂದಿ ಆದರೆ ನನ್ನ ವಿಶ್ವಾಸ ದೃಢವಾಗುತ್ತಿದೆ ಎನ್ನುವವರು ಎಷ್ಟು ಮಂದಿ? ಇಂದು ವಿಶ್ವಾಸ ಕಳೆದು ಹೋಗುತ್ತಿದೆ ಎನ್ನುವವರು ತಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು ನನ್ನ ವಿಶ್ವಾಸ ಮರಣದವರೆಗೂ ಮಾತ್ರನಾ? ಅಥವಾ ಅದಕ್ಕೂ ಮೀರಿದ ವಿಶ್ವಾಸನ ಎಂದು. ಮರಣವನ್ನು ಜಯಿಸಿ ನಿತ್ಯಜೀವವನ್ನು ನಮಗೆ ನೀಡುವ ಕ್ರಿಸ್ತನನ್ನು ಇಂದು ನಾವು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಆ ನೋಟ ಪೇತ್ರನನ್ನು ಮನಪರಿವರ್ತನೆಗೆ ಒಡ್ದಿದಂತೆ ನಮ್ಮನ್ನು ಸಹ ನಮ್ಮ ಅವಿಶ್ವಾಸದಿಂದ, ಪ್ರಾಪಂಚಿಕ ಶೋಧನೆಗಳಿಂದ ವಿಮುಕ್ತಗೊಳಿಸುತ್ತದೆ. ಇಂದು ಪ್ರಪಂಚ, ಅಗೋಚರ ಸೂಕ್ಷ್ಮ ವೈರಾಣುವಿನಿಂದ ನಲುಗುತ್ತಿರುವ ಸಮಯದಲ್ಲಿ ಎದೆಗುಂದುವ ಅವಶ್ಯಕತೆಯಿಲ್ಲ. ದೇವರೆಲ್ಲಿ ಎಂಬ ಪ್ರಶ್ನೆಯನ್ನು ಕೇಳುವ ಅನಿವಾರ್ಯತೆ ಇಲ್ಲ. ಏಕೆಂದರೆ ಜಗತ್ತು ಈ ರೀತಿಯ ಅನೇಕಾನೇಕ ವೈರಾಣು, ಭೂಕಂಪ, ಅಣುಬಾಂಬ್, ಚಂಡಮಾರುತ, ಯುದ್ಧ-ಸಮರಗಳನ್ನು ದಾಟಿ ಬಂದಿರುವುದಂತೂ ಸತ್ಯ.
ಸಂತ ಪೌಲರು ಕೊರೆಂಥಿಯರಿಗೆ ಬರೆದ ಮೊದಲನೆಯ ಪತ್ರ 15ನೇ ಅಧ್ಯಾಯ 55ನೆಯ ವಚನಗಳಲ್ಲಿ ಪ್ರಶ್ನಿಸುವಂತೆ, ಎಲೈ ಸಾವೇ ನಿನ್ನ ವಿಜಯವೆಲ್ಲಿ? ನಿನ್ನ ವಿಷಕೊಂಡಿ ಎಲ್ಲಿ? ಮರಣವೇ ಜೀವನದ ಅಂತ್ಯ ಎನ್ನುವ ಲೋಕದ ಪಾಶ್ರ್ವನಂಬಿಕೆ ಕ್ರಿಸ್ತನ ಪಾಡು ಮರಣದಲ್ಲಿ ಅಂತ್ಯಗೊಂಡಿತು. ಸಾವಿಗೆ ಹೆದರುವ ಅವಶ್ಯಕತೆ ಇಲ್ಲ ಏಕೆಂದರೆ ನಮ್ಮ ರಕ್ಷಕರು ಈ ಸಾವನ್ನು ಜಯಿಸಿದ್ದಾರೆ ಮಾತ್ರವಲ್ಲ ಈ ಧರೆಯಲ್ಲಿ ಜೀವಿಸುವ ಪ್ರತಿಯೊಂದು ಚರಾಚರಗಳಿಗೂ ಈ ಅನುಗ್ರಹವನ್ನು ಉದಾರವಾಗಿ ಕರುಣಿಸಿದ್ದಾರೆ. ಮೂರು ವರ್ಷಗಳ ಹಿಂದೆ ನಾನು ನನ್ನ ಯಾಜಕದೀಕ್ಷೆಯ ಮೊದಲನೆಯ ವರ್ಷದ ಪವಿತ್ರ ವಾರದಲ್ಲಿ ಹೀಗೆ ಒಬ್ಬರಿಗೆ ಪ್ರಶ್ನಿಸಿದೆ; ಯಾಕೆ ಪ್ರಭುಕ್ರಿಸ್ತರು ಮರಣಹೊಂದಿದ ದಿನವನ್ನು ಶುಭಶುಕ್ರವಾರ ಎಂದು ಕರೆಯುತ್ತೇವೆ ಎಂದು? ಯಾಕೆ ಆ ದಿನವನ್ನು ಶುಭ ಅನ್ತೀವಿ? ಆಗ ನನಗೆ ಸಿಕ್ಕಿದ ಉತ್ತರ. ಸ್ವಾಮಿ ವರ್ಷವಿಡೀ ದೇವಾಲಕ್ಕೆ, ಬಲಿಪೂಜೆಗೆ ಬರದ ಪುಣ್ಯಾತ್ಮರು ಅವತ್ತು ದೇವಾಲಕ್ಕೆ ಬರ್ತಾರಲ್ಲ ಅದೆಕ್ಕೆ ಆ ದಿನವನ್ನು ಶುಭಶುಕ್ರವಾರವೆಂದು ಕರೆಯಬಹುದೇನೋ?. ಆಕೆ ಹೇಳಿದರಲ್ಲಿ ಸತ್ಯ ಇದೆ. ಯಾಕೆಂದರೆ ಆ ದಿನ ಜನರು ಸಾವಿಗಾಗಿ ಹೆದರಿ ದೇವಸ್ಥಾನಕ್ಕೆ ಓಡೋಡಿ ಬರ್ತಾರೆ. ಸಾವನ್ನು ಜಯಿಸಿದ ಕ್ರಿಸ್ತನೆಡೆಗೆ ಬನ್ನಿ. ಸಾವಿಗಾಗಿ ಹೆದರಬೇಡಿ ಬದಲಿಗೆ ನಿತ್ಯಜೀವವನ್ನು ನೀಡುವ ಪ್ರಭುಕ್ರಿಸ್ತನ ಶಿಲುಬೆಯನ್ನು ಆಲಂಗಿಸಲು ಹಾತೊರೆಯುತ ಬನ್ನಿ.
ಕ್ರಿ.ಶ 14ನೆಯ ಶತಮಾನದಲ್ಲಿ ಮೇ 23, 1519 ರಂದು ಇಟಲಿಯ ಸಾನ್ ಮಾರ್ಸೆಲ್ಲೊದಲ್ಲಿರುವ ದೇವಾಲಯಕ್ಕೆ ಹತ್ತಿದ ಬೆಂಕಿಗೆ ಮರದ ಶಿಲುಬೆಯು ಸುಟ್ಟು ಬೂದಿಯಾಗಲಿಲ್ಲ. ಇದು ಅದ್ಭುತ ಎಂದು ಅಲ್ಲಿನ ಭಕ್ತಾದಿಗಳು. ಬೆಂಕಿಯ ದುರಂತವಾದ ಮೂರು ವರ್ಷಗಳ ನಂತರ, ರೋಮ್‍ನಲ್ಲಿ ಭೀಕರ ಪ್ಲೇಗ್ ರೋಗ ಹರಡಿತ್ತು. ಆಗ ಬೆಂಕಿಪಾಲಾಗದ ಶಿಲುಬೆಯನ್ನು ಸತತ 16 ದಿನಗಳವರೆಗೆ ರೋಮ್‍ನ ಬೀದಿ ಬೀದಿಗಳಲ್ಲಿ ಮೆರವಣಿಗೆಗೆ ಕೊಂಡೊಯ್ಯಲಾಗಿತ್ತು. ಭಕ್ತಾದಿಗಳ ನಂಬಿಕೆಯ ಪ್ರಕಾರ ಪವಾಡ ಶಿಲುಬೆಯು ಮರಳಿ ಸಂತ ಪೇತ್ರರ ಸ್ಕ್ವೇರ್ ತಲುಪುವ ದಿನದಂದು ರೋಮನಲ್ಲಿ ಪ್ಲೇಗ್ ರೋಗ ಅಂತ್ಯವನ್ನು ಕಂಡಿತ್ತು ಎಂಬಂದು ದೈವಪರಂಪರೆ. ಯೋಹಾನ್ನ 10:10 ‘ನಾನು ಈ ಧರೆಗೆ ಬಂದದ್ದು ಜೀವನೀಡಲು, ಯಥೇಚ್ಚವಾಗಿ ನೀಡಲು’.
ಹೀಗಿರುವಾಗ ಮಾನವ ನಿರ್ಮಿತ ಅಥವಾ ನೈಸರ್ಗೀಕ ಆಪತ್ತು ವಿಪತ್ತುಗಳಿಂದ ಜಗತ್ತು ನಲುಗಿದರೆ ನಾವೇಕೆ ದೇವರನ್ನು ಪ್ರಶ್ನಿಸಬೇಕು? ದೇವರಲ್ಲಿ ವಿಶ್ವಾಸವನ್ನೇಕೆ ಕಳೆದುಕೊಳ್ಳಬೇಕು? ಪ್ರಿಯರೆ, ಶಿಲುಬೆ ವಿಜಯದ, ವಿಮೋಚನೆಯ, ಬರವಸೆ ಮತ್ತು ಜೀವದ ಸಂಕೇತ. “ಪ್ರಕೃತಿಯ ಪ್ರತಿಯೊಂದು ಅಂಶವು ಶಿಲುಬೆಯನ್ನು ನೆನಪಿಸುತ್ತದೆ ಹಾಗೂ ನಾವು ಸಹ ಶಿಲುಬೆಯ ರೂಪದಲ್ಲಿದ್ದೇವೆ” ಎಂದು ಸಂತ ಜಾನ್ ಮರಿಯ ವಿಯಾನಿಯವರು ಶಿಲುಬೆಯಲ್ಲಿ ತಮ್ಮ ವಿಶ್ವಾಸವನ್ನು ನಿವೇದಿಸಿದ್ದಾರೆ.
ಪ್ರಿಯರೆ ಈ ಸಂಕಷ್ಟದ ಕ್ಷಣಗಳಲ್ಲಿ ನಾವು ನಮ್ಮ ನಿವಾಸಗಳಲ್ಲಿದ್ದು ಕ್ರಿಸ್ತನ ಪಾಡು ಮರಣವನ್ನು ಸ್ಮರಿಸೋಣ. ಆ ಸೂಕ್ಷ್ಮ ವೈರಾಣುವಿಗೆ ಹೆದರುವ ಬದಲು ಸಮಾಜ ನೀಡುವ ಸೂಚನೆಗಳನ್ನು ಸರಿಯಾಗಿ ಪಾಲಿಸಿ, ಸರ್ವ ಸೃಷ್ಟಿಗೆ ಕಾರಣಕರ್ತರಾದ ಸೃಷ್ಟಿಕರ್ತನಲ್ಲಿ ಬರವಸೆಯನ್ನಿರಿಸೋಣ. ಏಕೆಂದರೆ ನಮ್ಮ ಆರೋಗ್ಯವನ್ನು ಎಚ್ಚರಿಕೆಯಿಂದ ಕಾಯ್ದುಕೊಳ್ಳುವ ಸ್ವಾತಂತ್ರ್ಯವನ್ನು ದೇವರು ನಮಗೆ ದಯಪಾಲಿಸಿದ್ದಾರೆ. ಹೀಗಿರುವಾಗ ಈ ಲೋಕವನ್ನು ಜಯಿಸಿದ ಪ್ರಭು ಯೇಸುಕ್ರಿಸ್ತರ ತ್ಯಾಗದ ಸ್ಮರಣೆ ನಮ್ಮಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು, ಮಾನಸಿಕ ಸ್ಥಿರತೆಯನ್ನು, ಅಂತರಗದಲ್ಲಿ ದೃಢತೆಯನ್ನು ನೀಡಿ ನಮ್ಮನ್ನು ಬೆಳಕಿನ ಮಕ್ಕಳನ್ನಾಗಿ ಮಾಡಲಿ ಎಂದು ಪ್ರಾಥಿಸೋಣ.
ಮತ್ತಾಯ 10:28 “ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು. ಆದರೆ ದೇಹಾತ್ಮಗಳೆರಡಾನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ”.
-----------------------------------------
ಹಲವು ಬಾರಿ ನಿಮಗೆ ಎದುರಾಗುವ ಪ್ರಶ್ನೆ, ಕ್ರಿಸ್ತನಿಗೆ ಇಂಥಹ ಘೊರ ಯಾತನೆ, ಶಿಲುಬೆಯ ಮರಣ ಏಕೆ? ಶಿಲುಬೆ ಪ್ರೀತಿಯ ಸಂಕೇತ. ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು (ಯೊವಾನ್ನ ೩:೧೬) ಈ ವಾಕ್ಯವನ್ನು ಬೈಬಲ್ ವಿದ್ವಾಂಸರು 'ಶುಭ ಸಂದೇಶದ'ಶುಭ ಸಂದೇಶವೆಂದು ಕರೆಯುತ್ತಾರೆ. ಈ ವಾಕ್ಯ ಸುಮಾರು ೪೦೦೦ ಭಾಷೆಗಳಿಗೆ ಭಾಷಾಂತರಗೊಂಡಿ??. ಕ್ರಿಸ್ತ ತಮ್ಮ ಜನನದ ಮೂಲಕ ಮನುಕುಲಕ್ಕೆ ರಕ್ಷಣೆಯನ್ನು ತಂದರು.ಶಿಲುಬೆಯಲ್ಲಿ ಮಡಿಯುವುದರ ಮೂಲಕ ತಮ್ಮ ಅಪರಿಮಿತ ಪ್ರೀತಿಯನ್ನ ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಶಿಲುಬೆ ಪ್ರೀತಿಯ ಸಂಕೇತ. ದೇಹದಲ್ಲಿ ಕೊನೆಯ ಉಸಿರು ಇರುವ ತನಕಪ್ರೀತಿಸಿದರು, ಪ್ರಾಣ ಅರ್ಪಿಸುವ ಕೊನೆಯ ಕ್ಷಣದಲ್ಲೂ ನಮ್ಮನ್ನ ಕ್ಷಮಿಸಿದರು ಮತ್ತು ನಮಗಾಗಿ ಪ್ರಾರ್ಥಿಸಿದರು. ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯರೆಯುವ ಪ್ರೀತಿಗಿಂತಮಿಗಿಲಾದ ಪ್ರೀತಿ ಬೇರೊಂದಿಲ್ಲ (ಯೊವಾನ್ನ ೧೫:೧೩)
ಕ್ರೈಸ್ತರಿಗೆ ಶಿಲುಬೆ ಇಂದು ಶಾಪವಲ್ಲ, ಅನುಗ್ರಹ: ಸಾವಲ್ಲ-ಜೀವ; ಸೋಲಲ್ಲ-ವಿಜಯ; ಕತ್ತಲಲ್ಲ-ಬೆಳಕು, ನಿರಾಶೆಯಲ್ಲ-ಭರವಸೆ, ಅವಮಾನದ ಸಂಕೇತವಲ್ಲ,ಆರಾಧನೆಯ ಸಂಕೇತ, ವಿಜಯದ ಸಂಕೇತ.
--------------------

No comments:
Post a Comment