Monday, 2 March 2020

ತಪಸ್ಸು ಕಾಲದ ಮೊದಲನೆಯ ಶುಕ್ರವಾರ

ಮಾರ್ಚ್ 6, 2020 ಶುಕ್ರವಾರ                       [ನೇರಳೆ]
ಮೊದಲ ವಾಚನ: ಯೆಜೆಕಿಯೇಲ 18.21-28
ಕೀರ್ತನೆ 130:1-8, ಶ್ಲೋಕ.3
ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭೂ,
ನಿನ್ನ ಮುಂದೆ ಯಾರು ತಾನೇ ನಿಲ್ಲಬಲ್ಲರು ಪ್ರಭೂ?
ಶುಭಸಂದೇಶ: ಮತ್ತಾಯ 5.20-26
----------------------------
ಮೊದಲವಾಚನ: ಯೆಜೆ 18: 21-28
ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟುನನ್ನ ಸಕಲ ವಿಧಿಗಳನ್ನು ಕೈಗೊಂಡುನ್ಯಾಯ ನೀತಿಗಳನ್ನು ನಡೆಸಿದರೆ ಸಾಯನುಖಂಡಿತ ಜೀವಿಸುವನು. 22 ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರದುಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಜೀವಿಸುವನು. 23 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ದುಷ್ಟನ ಸಾವಿನಲ್ಲಿ ನನಗೆ ಲವಲೇಶವಾದರೂ ಸಂತೋಷವಿಲ್ಲಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. 24 ಆದರೆ ಶಿಷ್ಯನು ತನ್ನ ಶಿಷ್ಟತನವನ್ನು ಬಿಟ್ಟುಅಧರ್ಮಮಾಡಿದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆಅವನು ಜೀವಿಸುವನೇಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದುಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು. 25 “ಆದರೆ ನೀವು, ‘ಸರ್ವೇಶ್ವರನ ಕ್ರಮ ಸರಿಯಲ್ಲ’ ಎಂದು ಹೇಳುತ್ತಿದ್ದೀರಿಇಸ್ರಯೇಲ್ ವಂಶದವರೇನನ್ನ ಕ್ರಮವು ಸರಿಯಲ್ಲವೆನಿಮ್ಮ ಕ್ರಮವೇ ಸರಿಯಲ್ಲವಷ್ಟೆ. 26 ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು. 27 ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟುನ್ಯಾಯನೀತಿಗಳನ್ನು ನಡೆಸಿದರೆತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. 28 ಅವನು ಯೋಚಿಸಿತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯನುಖಂಡಿತ ಜೀವಿಸುವನು.
----------------------
ಕೀರ್ತನೆ 130: 1-2, 3-4, 5-7, 7-8
ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭೂ
ನಿನ್ನ ಮುಂದೆ ಯಾರು ತಾನೇ ನಿಲ್ಲಬಲ್ಲರು ವಿಭೂ?

1: ಅಂತರಾಳದಿಂದ ಪ್ರಭುಮೊರೆಯಿಡುತ್ತಿರುವೆ ನಿನಗೆ
2: ಆಲಿಸುಕಿವಿಗೊಡು ಪ್ರಭೂನನ್ನಾರ್ತ ವಿಜ್ಞಾಪನೆಗೆ
3: ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭು ನಿನ್ನ ಮುಂದೆ ಯಾರುತಾನೆ ನಿಲ್ಲಬಲ್ಲರು ವಿಭು?
4: ಪಾಪವನು ಕ್ಷಮಿಸುವವನು ನೀನು ಎಂತಲೆ ಭಯಭಕ್ತಿಗೆ ಪಾತ್ರನು
5: ಪ್ರಭುವಿಗಾಗಿ ಎನ್ನ ಮನ ಕಾದಿದೆ ಆತನ ವಾಕ್ಯದಲಿ ನಂಬಿಕೆ ನನಗಿದೆ
6: ಸೂರ್ಯೋದಯಕ್ಕಾಗಿ ಕಾವಲುಗಾರ ಕಾದಿರುವುದಕ್ಕಿಂತ ಆತುರದಿಂದ ಬೆಳಗಾಗುವುದನು ಎದುರು ನೋಡುವುದಕ್ಕಿಂತ ಅತಿಯಾಗಿ ಪ್ರಭುವನು ನಿರೀಕ್ಷಿಸುತಿದೆ ಎನ್ನ ಮನ ನಿರುತ
7: ಇಸ್ರಯೇಲೇನಂಬಿಕೊಂಡಿರು ಪ್ರಭುವನೆ ಆತನಲ್ಲಿದೆ ಕರುಣೆಪೂರ್ಣ ವಿಮೋಚನೆ
8: ಇಸ್ರಯೇಲನು ಉದ್ಧರಿಸುವನಾತ ಅದು ಗೈದ ಸಕಲ ದೋಷಗಳಿಂದ
-------------------
ಶುಭಸಂದೇಶ: ಮತ್ತಾಯ 5: 20-26
20 ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ. "
21 " 'ನರಹತ್ಯೆ ಮಾಡಬೇಡನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನುಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 22 ಆದರೆ ನಾನೀಗ ನಿಮಗೆ ಹೇಳುತ್ತೇನೆಕೇಳಿತನ್ನ ಸೋದರನ ಮೇಲೆ (ನಿಷ್ಕಾರಣವಾಗಿಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನುತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು; ‘ಮೂರ್ಖಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. 23 ಆದಕಾರಣಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, 24 ನಿನ್ನ ಕಾಣಿಕೆಯನ್ನು ಆ ಬಲಿಪೀಠದ ಮುಂದೆಯೇ ಇಟ್ಟುಬಿಡುಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನಮಾಡಿಕೊಆನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು. "
25 "ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗಮಧ್ಯದಲ್ಲೇ ಅವನೊಡನೆ ಬೇಗ ಸಂಧಾನಮಾಡಿಕೊಇಲ್ಲದಿದ್ದರೆಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದುನ್ಯಾಯಾಧಿಪತಿ ನಿನ್ನನ್ನು ಪೋಲೀಸರ ವಶಕ್ಕೆ ಬಿಡಬಹುದುಆನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! 26 ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದುಇದನ್ನು ನೆನಪಿನಲ್ಲಿಡು. "
----------------------
ಚಿಂತನೆ: ದೇವರು ನಿರಂತರವೂ ದುಷ್ಟನ ಮನ ಪರಿವರ್ತನೆಯನ್ನು ಬಯಸುತ್ತಾರೆ. ದೇವರ ನಿರ್ಣಯದಲ್ಲಿ ಯಾವುದೇ ದೋಷವಿರುವುದಿಲ್ಲ. ಅವರು ಉತ್ತಮ ನ್ಯಾಯಾಧಿಪತಿ. ದುಷ್ಟನನ್ನು ವಿನಾಕಾರಣ ಶಿಕ್ಷಿಸುವ ಬದಲು ತಪ್ಪಿಗೆ ಪ್ರಾಯಶ್ಚಿತ್ತಪಟ್ಟು ತಮ್ಮೆಡೆಗೆ ತಿರುಗಿಕೊಳ್ಳುವಂತೆ ಕಾಲಾವಕಾಶವನ್ನು ನೀಡುತ್ತಾರೆ. ಹಾಗೆಯೇ ನಾವು ನಮ್ಮ ಸಹೋದರ/ರಿಯರನ್ನು ನಿಂದಿಸುವುದಾಗಲಿತುಚ್ಚೀಕರಿಸುವುದಾಗಲಿ ಮಾಡಬಾರದು. ಮನಸ್ತಾಪಗಳಾದಾಗ ಸಂಧಾನ ಮಾಡಿಕೊಳ್ಳಬೇಕೇ ಹೊರತು ದ್ವೇಷಿಸಬಾರದು ಎಂದು ಪ್ರಭು ಮನವರಿಕೆ ಮಾಡುತ್ತಾರೆ. 
--------------
ಇಂದಿನ ಮೊದಲನೆಯ ವಾಚನದಲ್ಲಿ ಇಸ್ರಾಯೇಲರು `ಸರ್ವೇಶ್ವರನ ಕ್ರಮ ಸರಿಯಲ್ಲ’ ಎಂದು ದೂಷಿಸುತ್ತಿದ್ದಾರೆ. ಈ ವಾಕ್ಯವನ್ನು ಅರ್ಥೈಸಿಕೊಳ್ಳಬೇಕಾದರೆ ಇದರ ಹಿನ್ನಲೆ ಅರಿಯುವುದು ಅಗತ್ಯ. ಕ್ರಿ.ಪೂ 587ರಲ್ಲಿ ಬ್ಯಾಬಿಲೋನಿಯದವರು ಜೆರುಸಲೇಮಿನ ಮೇಲೆ ದಂಡೆತ್ತಿ ಬರುತ್ತಾರೆ. ಜೆರುಸಲೇಮನ್ನು ಸಂಪೂರ್ಣವಾಗಿ ದ್ವಂಸ ಮಾಡಿ ಇಸ್ರಾಯೇಲರನ್ನು ಸೆರೆಯಾಳುಗಳಾಗಿ ಕೊಂಡ್ಯೊಯುತ್ತಾರೆ. ಬ್ಯಾಬಿಲೋನಿಯದಲ್ಲಿ ಸೆರೆಯಾಳುಗಳಾಗಿದ್ದ ಇಸ್ರಾಯೇಲರು ದೇವರ ವಿರುದ್ದ ಮಾತಾಡುತ್ತಾರೆ. ತಮ್ಮ ಪೂರ್ವಜರು ಮಾಡಿದ ತಪ್ಪಿಗೆ ದೇವರು ತಮಗೆ ಶಿಕ್ಷೆ ನೀಡುತ್ತಿದ್ದಾರೆ ಹಾಗೂ ತಾವು ನಿರ್ದೋಷಿಗಳೆಂದು ವಾದಿಸುತ್ತಾರೆ. ಆಗ ಯೆಜೆಕಿಯೇಲನು ವ್ಯಯಕ್ತಿಕ ಜವಾಬ್ದಾರಿಯ ಬಗ್ಗೆ ಮಾತನಾಡುತ್ತಾ ದೇವರು ದಂಡಿಸುತ್ತಿರುವುದು ನಿಮ್ಮ ತಪ್ಪಿಗೆ ಹೊರತು ನಿಮ್ಮ ಪೂರ್ವಜರ ತಪ್ಪಿಗಲ್ಲ ಎಂದು ಎಚ್ಚರಿಸುತ್ತಾನೆ. ದುಷ್ಟತನವನ್ನು ಬಿಟ್ಟು ನ್ಯಾಯ ನೀತಿಯಿಂದ ಜೀವಿಸಲು ಕರೆನೀಡುತ್ತಾನೆ.
----------------
ಜಗದ್ಗುರು ಜಾನ್‍ಪೌಲ್‍ರವರು ಕ್ಷಮೆಯ ಪ್ರತೀಕ. ಗುಂಡಿನ ದಾಳಿಗೆ ತುತ್ತಾಗಿದ್ದರು ಕಾರಾಗೃಹಕ್ಕೆ ತೆರಳಿ ತನ್ನ ವಿರೋಧಿಯ ಮುಂದೆ ಕುಳಿತು, "ನಾನು ನಿನ್ನನ್ನು ಕ್ಷಮಿಸಿದ್ದೇನೆ" ಎಂದಾಗ ಅವನ ಮನ ಕರಗಿರಬಹುದು. ಗ್ಲ್ಯಾಡಿ ಸ್ಟೇನ್ ತನ್ನ ಎರಡು ಮುದ್ದು ಕಂದಮ್ಮಗಳು ಮತ್ತ ಗಂಡನನ್ನು ವಿರೋಧಿಗಳು ಬೆಂಕಿಯಲ್ಲಿ ಸಜೀವವಾಗಿ ಸುಟ್ಟಾಗ ಆಕೆ, "ನಾನು ಈ ಕೃತ್ಯವನ್ನೆಸಗಿದ ಎಲ್ಲರನ್ನು ಕ್ಷಮಿಸುತ್ತೇನೆ" ಎಂದಾಗ ಇಡೀ ವಿಶ್ವವೇ ದಿಗ್ಬ್ರಾಂತವಾಗಿತ್ತು. ಪ್ರಸ್ತುತ ಸಮಾಜದಲ್ಲಿ ಇಂತಹ ನಡತೆಯುಳ್ಳವರು ವಿರಳ. ನಮಗೆ ವಿರುದ್ದವಾಗಿ ನಡೆದವರಿಗೆ ಮುಯ್ಯಿಗೆ ಮುಯ್ಯಿ ತೋರಿಸುವ ಗುಣ ನಮ್ಮದು. ಆದರೆ ಕ್ರಿಸ್ತ ಎಲ್ಲವೂ ಮಿತಿಮೀರುವ ಮೊದಲು ಎಲ್ಲಾ ವ್ಯಾಜ್ಯವನ್ನು ತೀರಿಸಿಕೊಳ್ಳಿ. ಒಬ್ಬರನ್ನೋಬ್ಬರು ಅರ್ಥಮಾಡಿಕೊಂಡು, ಸೈರಿಸಿಕೊಂಡು ಕ್ಷಮಿಸಿರಿ ಎಂದು ಕರೆ ಕೊಡುವರು. ಎಜೇಕಿಯಲ್ ಪ್ರವಾದಿಯು ಸಹ ಇತರರಿಗೆ ಒಳ್ಳೆಯದನ್ನೇ ಮಾಡುವ ಪರಿ ನಮ್ಮದು ಇದು ದೇವರಿಗೆ ಮೆಚ್ಚುಗೆಯಾದುದು ಎನ್ನುತ್ತಾನೆ. ಬಾಳು ಕೇವಲ ಕೆಲವು ವರ್ಷ ಮಾತ್ರ. ಕ್ಷಮಾಗುಣದ ವ್ಯಕ್ತಿಗಳಾಗಿ ಸಮಾಜದಲ್ಲಿ ಜೀವಿಸೋಣ. 
* ನಿಮಗೆ ಶತ್ರುವಿದ್ದರೆ ಅವರಿಗೆ ‘sorry’ ಅಂತ whats app ಮೆಸೇಜ್ ಕಳುಹಿಸಿ.
---------------------
© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment