[ಹಸಿರು]
ಸಂತ ಬಾರ್ನಬ [ಪ್ರೇಷಿತ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 11.21-26; 13.1-3
ಕೀರ್ತನೆ 98:1-6, ಶ್ಲೋಕ.2
ರಾಷ್ಟ್ರಗಳಿಗೆ ತೋರಿಸುವೆನು ಜೀವೋದ್ಧಾರಕ ಶಕ್ತಿಯನು
ಶುಭಸಂದೇಶ: ಮತ್ತಾಯ 10.7-13

ಪ್ರೇಷಿತರ ಕಾರ್ಯಕಲಾಪಗಳು 11.21-26; 13.1-3
21 : ಪ್ರಭುವಿನ ಶಕ್ತಿ ಅವರೊಡನೆ ಇತ್ತು. ಜನರು ಬಹುಸಂಖ್ಯೆಯಲ್ಲಿ ಪ್ರಭುವಿನಲ್ಲಿ ವಿಶ್ವಾಸವಿಟ್ಟು ಅವರ ಭಕ್ತರಾದರು.
22 : ಈ ಸಮಾಚಾರ ಜೆರುಸಲೇಮಿನ ಧರ್ಮಸಭೆಗೆ ತಲುಪಿತು. ಬಾರ್ನಬನನ್ನು ಅಂತಿಯೋಕ್ಯಕ್ಕೆ ಅವರು ಕಳುಹಿಸಿದರು.
23 : ಬಾರ್ನಬನು ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ಕಂಡು ಸಂತೋಷಪಟ್ಟನು. ಪ್ರಭುವಿಗೆ ದೃಢಮನಸ್ಸಿನಿಂದ ಪ್ರಾಮಾಣಿಕರಾಗಿರುವಂತೆ ಪ್ರೋತ್ಸಾಹಿಸಿದನು.
24 : ಬಾರ್ನಬನು ಸತ್ಪುರುಷನು, ಪವಿತ್ರಾತ್ಮಭರಿತನು ಹಾಗೂ ಅಗಾಧ ವಿಶ್ವಾಸವುಳ್ಳವನು. ಅನೇಕ ಜನರು ಪ್ರಭುವಿನ ಅನುಯಾಯಿಗಳಾದರು.
25 : ಅನಂತರ ಬಾರ್ನಬನು ಸೌಲನನ್ನು ಹುಡುಕಿಕೊಂಡು ತಾರ್ಸಕ್ಕೆ ಹೋದನು.
26 : ಅವನನ್ನು ಅಲ್ಲಿ ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅವರಿಬ್ಬರೂ ಬಂದು ವರ್ಷವಿಡೀ ಧರ್ಮಸಭೆಯೊಂದಿಗೆ ಇದ್ದು ಬಹುಜನರಿಗೆ ಉಪದೇಶ ಮಾಡಿದರು. ಭಕ್ತಾದಿಗಳನ್ನು ಮೊದಲಬಾರಿಗೆ ‘ಕ್ರೈಸ್ತರು’ ಎಂದು ಕರೆದದ್ದು-ಅಂತಿಯೋಕ್ಯದಲ್ಲೇ.
1 : ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂದು ಕರೆಯಲಾದ ಸಿಮೆಯೋನ್, ಸಿರೇನಿನ ಲೂಸಿಯಸ್, ಸಾಮಂತ ಹೆರೋದನ ಬಾಲ್ಯಸ್ನೇಹಿತ ಮೆನಹೇನ ಮತ್ತು ಸೌಲ
2 : ಒಂದು ದಿನ ಅವರು ದೇವಾರಾಧನೆಯಲ್ಲೂ ಉಪವಾಸ ವ್ರತದಲ್ಲೂ ನಿರತರಾಗಿದ್ದಾಗ ಪವಿತ್ರಾತ್ಮ, “ಬಾರ್ನಬ ಮತ್ತು ಸೌಲರನ್ನು ನಾನು ಯಾವ ಕಾರ್ಯಕ್ಕಾಗಿ ಕರೆದಿದ್ದೇನೋ ಆ ಕಾರ್ಯಕ್ಕಾಗಿ ವಿೂಸಲಾಗಿಡಿ,” ಎಂದರು.
3 : ಅಂತೆಯೇ ಅವರು ಉಪವಾಸವಿದ್ದು, ಪ್ರಾರ್ಥನೆ ಮಾಡಿ, ಇವರಿಬ್ಬರ ಮೇಲೆ ಹಸ್ತನಿಕ್ಷೇಪಮಾಡಿ ಕಳುಹಿಸಿಕೊಟ್ಟರು.
ಕೀರ್ತನೆ 98:1-6, ಶ್ಲೋಕ.2
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು
1 : ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು / ಎಸಗಿಹನಾತನು ಪವಾಡಕಾರ್ಯಗಳನು / ಗಳಿಸಿತಾತನ ಕೈ ಪೂತಭುಜ ಗೆಲುವನು //
2 : ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು / ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು //
3 : ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ / ನಮ್ಮ ದೇವ ಸಾಧಿಸಿದ ಜಯಗಳಿಕೆ // ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು / ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು //
4 : ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ / ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ //
5 : ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ / ಭಜಿಸಿರಿ ಆತನನು ವಾದ್ಯಮೇಳದೊಂದಿಗೆ //
6 : ಊದಿರಿ ಕೊಂಬನು, ತುತೂರಿಯನು / ಉದ್ಘೋಷಿಸಿರಿ ಪ್ರಭು ರಾಜನನು //
7 : ಗರ್ಜಿಸಲಿ ಸಮುದ್ರವು ಅದರಲ್ಲಿರುವುದೆಲ್ಲವು / ಕೀರ್ತಿಸಲಿ ಜಗವು, ಅದರೊಳು ವಾಸಿಸುವ ಜನರೆಲ್ಲರು //
8 : ಚಪ್ಪಾಳೆ ಹೊಡೆಯಲಿ ನದಿಗಳು / ತಟ್ಟಾಡಲಿ ಬೆಟ್ಟಗುಡ್ಡಗಳು //
9 : ಏಕೆನೆ ಬರುವನಾತ ಇಹಲೋಕಕೆ ನ್ಯಾಯತೀರಿಸಲು / ಜಗಕು, ಜನತೆಗು, ನ್ಯಾಯನೀತಿಗನುಸಾರ ತೀರ್ಪುಕೊಡಲು //
ಶುಭಸಂದೇಶ: ಮತ್ತಾಯ 10.7-13
7 : ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ.
8 : ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ. ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ.
9 : ಜೇಬಿನಲ್ಲಿ ಚಿನ್ನ, ಬೆಳ್ಳಿ, ತಾಮ್ರವನ್ನಾಗಲಿ,
10 : ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು.
11 : "ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ.
12 : ನೀವು ಒಂದು ಮನೆಗೆ ಹೋದಾಗ, "ಈ ಮನೆಗೆ ಶುಭವಾಗಲಿ!" ಎಂದು ಹರಸಿರಿ.
13 : ಆ ಮನೆಯವರು ನಿಮ್ಮನ್ನು ಸ್ವಾಗತಿಸಿದರೆ, ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ನಿಮ್ಮನ್ನು ಸ್ವಾಗತಿಸದೆ ಹೋದರೆ, ನಿಮ್ಮ ಆಶೀರ್ವಾದ ನಿಮಗೇ ಹಿಂದಿರುಗಲಿ.
----------------
ಜೋಸೆಫ್ ನಾಮಾಂಕಿತರಾಗಿದ್ದವರು ಬಾರ್ನಬ. ಪ್ರೇ.ಕಾ. 4:36ರಲ್ಲಿ ``ಇವನ ಹುಟ್ಟೂರು ಸೈಪ್ರಸ್, ಇವನಿಗೆ ಬಾರ್ನಬ (ಪ್ರೋತ್ಸಾಹಪುತ್ರ) ಎಂದು ಪ್ರೇಷಿತರು ಹೆಸರಿಟ್ಟಿದ್ದರು’’ ಎಂದು ಓದುತ್ತೇವೆ. ಪೌಲರೊಂದಿಗೆ ಕೂಡಿ ಬಾರ್ನಬರು ಅನೇಕ ಯಾತ್ರೆಗಳನ್ನು, ಪ್ರಯಾಣವನ್ನು ಮಾಡಿ ಅನ್ಯಜನರಿಗೆ ಶುಭಸಂದೇಶ ಬೋಧಿಸುತ್ತಾರೆ. ಅನ್ಯಜನರಿಗೂ ವಿಶ್ವಾಸಿಗಳಾಗುವ ಹಕ್ಕು ಇದೆ ಎಂದು ಅವರಿಗಾಗಿ ದುಡಿದು, ಜೆರುಸಲೇಮಿನ ಸಮ್ಮೇಳನ (ಪ್ರೇ. ಕಾ. 15) ದಲ್ಲಿ ಭಾಗಿಯಾಗಿ ಅವರಿಗೂ ನಿತ್ಯಜೀವನದ ಮಾರ್ಗ ತೋರಿದವರಲ್ಲಿ ಬಾರ್ನಬರೂ ಪ್ರಮುಖರು.
-----------------

ಚಿಂತನೆ
“ನಾವು ಪರರ ಬಗ್ಗೆ ಚಿಂತಿಸುವಾಗ ದೇವರು ನಮ್ಮ ಬಗ್ಗೆ ಚಿಂತಿಸುತ್ತಾರೆ”
ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ “The poor has no need to take care of his pocket” ಎಂದು. ಇಂದಿನ ಶುಭಸಂದೇಶದಲ್ಲಿಕ್ರಿಸ್ತತನ್ನ ಶಿಷ್ಯರಾಗಬಲ್ಲವರಿಂದ ಬಯಸಿದ್ದು ಇದೇ-ಯೋಚನೆಗೊಳಪಡಿಸದ ಬಡತನ, ಚಿಂತೆಗಳಿಗೀಡುಮಾಡದ ನಾಳೆಗಳು.
ಜೀವನದಲ್ಲಿ ಯಶಸ್ಸು ಕಾಣಲು, ಸುಗಮ ಜೀವನ ನಡೆಸಲು ನಾಳೆಗಳ ಹಾದಿ ಹೇಗೆ ಎಂತು ಎಂದು ಮುಂದಾಲೋಚಿಸುವುದು ತಪ್ಪಲ್ಲ. ಅದು ನಾಳೆಗಳನ್ನು ತೃಪ್ತವಾಗಿಡಬಲ್ಲದು. ಇದು ಸಂಸಾರ ಭಾರ ಹೊತ್ತವರು, ಸಾಧನೆ ಹಾದಿಗೆ ಯಶಸ್ಸನ್ನು ಬಯಸುವವರು ಆಲೋಚಿಸುವ -ಸ್ವಹಿತದ ಹಾದಿ. ಆದರೆ ಕ್ರಿಸ್ತ ತನ್ನ ಹಾದಿಯ ಜಾಡು ಹಿಡಿದು ಬಂದವರಿಗೆ ಬಯಸುವುದು ಬೇರೆಯೇ-ತನ್ನ ಅವಶ್ಯಕತೆಗಳನ್ನ ಮರೆತು ಇತರರ ಒಳಿತು ಬಯಸುವ - ಪರಹಿತದ ಹಾದಿ. ಈ ಎರಡನೆಯ ಆಯ್ಕೆಯಲ್ಲಿ ಸಾಧನೆಯೂ ಅವನೇ, ಅದರ ಹಾದಿಯೂ ಅವನೇ, ಗುರಿಯ ಮೂಲವೂ ಅವನೇ –ಆ ಕ್ರಿಸ್ತ. ಆತ್ಮತೃಪ್ತಿ ಎಂಬ ಬಿಗುಮಾನ ಮಾತ್ರ ಸ್ವಂತದ್ದು. ಇದಕ್ಕೆ ಬೇಕಾದ ಸಾಧನ ವಿಶ್ವಾಸ. ನಾಳೆಗಳೇನೋ, ಎಂತೋ ಎಂದು ತಿಳಿಯದೆ, ಸ್ವಜನರಿಲ್ಲದ ನಾಡಿನಲ್ಲಿ, ಕಠಿಣ ಪರಿಸ್ಥಿತಿಗಳಲ್ಲಿ ಸೇವಾಕಾರ್ಯದಲ್ಲಿ ನಿರತರಾಗಿರುವವರು ಇಲ್ಲಿ ನೆನಪಾಗುತ್ತಾರೆ. ಅವರ ಆತ್ಮತೃಪ್ತಿಯ ಸಂತೋಷದ ಕಿಡಿ ನಮ್ಮ ನಾಳೆಗಳ ಒಂದಿಷ್ಟು ಒಳಿತಿನ ಕಾರ್ಯಗಳಿಗೆ ಭರವಸೆಯ ಬೆಳಕು ತುಂಬಲಿ. ಕ್ರಿಸ್ತನೇ ನಮ್ಮ ನಾಳೆಗಳ ಭರವಸೆ ಎಂದು ನೆನಪಾಗಲಿ.
----------------
No comments:
Post a Comment