Wednesday, 1 July 2020

ಜುಲೈ 6, 2020 ಸೋಮವಾರ

ಜುಲೈ 6, 2020 ಸೋಮವಾರ                        [ಹಸಿರು]
ಸಂತ ಮರಿಯಾ ಗೊರೆತ್ತಿ [ಸಂನ್ಯಾಸಿನಿ / ರಕ್ತಸಾಕ್ಷಿ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಹೊಶೇಯ 2.14-16, 19-20
ಕೀರ್ತನೆ 145:2-3, 4-5, 6-7, 8-9. ಶ್ಲೋಕ.8
ಪ್ರಭು ದಯಾನಿಧಿ, ಕೃಪಾಸಾಗರನು
ಶುಭಸಂದೇಶ: ಮತ್ತಾಯ 9.18-26
-----------------------
ಹೊಶೇಯ 2.14-16, 19-20
16 :ಸರ್ವೇಶ್ವರ ಇಂತೆನ್ನುತ್ತಾರೆ: ಆದಿನಗಳಲ್ಲಿನೀನುನನ್ನನ್ನು ‘ಬಾಳ್ದೇವತೆ’ ಎಂದುಕರೆಯದೆ ‘ನನ್ನಪತಿ’ ಎಂದುಕರೆಯುವೆ.
17 :ಬಾಳ್ದೇವತೆಗಳಹೆಸರುಗಳನ್ನುನಿನ್ನಬಾಯಿಂದತೊಲಗಿಸುವೆನು; ಇನ್ನೆಂದಿಗೂಅವುಗಳನ್ನುನೀನುಉಚ್ಚರಿಸದಂತೆಮಾಡುವೆನು.
19 :ನನ್ನವಳನ್ನಾಗಿಮಾಡಿಕೊಳ್ಳುವೆನುನಿನ್ನನ್ನುಅನವರತನಿನ್ನವರಿಸುವೆನುಕರುಣೆಯಿಂದ, ನೀತಿನ್ಯಾಯದಿಂದ, ನಿಶ್ಚಲಪ್ರೀತಿಯಿಂದ.
20 :ನಂಬಿಕೆಯಿಂದಸ್ವೀಕರಿಸುವೆನುನಿನ್ನನುಆಗನೀಅರಿತುಕೊಳ್ಳುವೆಸರ್ವೇಶ್ವರನಾದನನ್ನನು.
21 :ಸರ್ವೇಶ್ವರಇಂತೆನ್ನುತ್ತಾರೆ: ಆದಿನದಂದುಪ್ರೀತಿಸುವೆನುನಿನ್ನನು; ಆಲಿಸುವೆನುಆಗಸದಮೊರೆಯನು.
------------------------
ಕೀರ್ತನೆ 145:2-3, 4-5, 6-7, 8-9. ಶ್ಲೋಕ.8
ಪ್ರಭು ದಯಾನಿಧಿ, ಕೃಪಾಸಾಗರನು
2 : ಹೊಗಳುವೆನು ನಾ ದಿನದಿನವೂ ನಿನ್ನನು / ಭಜಿಸುವೆನೆಂದೆಂದಿಗೂ ನಿನ್ನ ಹೆಸರನು
3 : ಪ್ರಭು ಮಹಾತ್ಮನು, ಸ್ತುತ್ಯರ್ಹನು / ಆತನ ಮಹಿಮೆ ಅಗಮ್ಯವಾದದು
4 : ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು / ತಿಳಿಸುವುದು ಪ್ರಭು, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು
5 : ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು / ನಿನ್ನ ಮಹೋನ್ನತ ಮಹಿಮಾಪ್ರಭಾವವನು
6 : ಜನರು ಸಾರುವರು ನಿನ್ನ ಅದ್ಭುತ ಶಕ್ತಿಯನು / ನಾ ಪ್ರಸಿದ್ಧಪಡಿಸುವೆನು ನಿನ್ನ ಮಹಿಮೆಯನು
7 : ಪ್ರಕಟಿಸುವರವರು ನಿನ್ನ ಮಹೋಪಕಾರವನು / ಹಾಡಿ ಹೊಗಳುವರು ನಿನ್ನ ನ್ಯಾಯನೀತಿಯನು
8 : ಪ್ರಭು ದಯಾನಿಧಿ, ಕೃಪಾಸಾಗರನು / ಸಹನಶೀಲನು, ಪ್ರೀತಿಪೂರ್ಣನು
9 : ಪ್ರಭುವಿನ ಕರುಣೆ ಎಲ್ಲರ ಮೇಲೆ / ಆತನ ಕೃಪೆಯು ಸೃಷ್ಟಿಯ ಮೇಲೆ
----------------------------
ಮತ್ತಾಯ 9.18-26
18 : ಯೇಸುಸ್ವಾಮಿ ಹೀಗೆ ಬೋಧಿಸುತ್ತಿರುವಾಗಲೇ ಯೆಹೂದ್ಯ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನು ಯೇಸುವಿನ ಮುಂದೆ ಮೊಣಕಾಲೂರಿ, "ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ತಾವು ದಯಮಾಡಿಸಿ ತಮ್ಮ ಹಸ್ತವನ್ನು ಆಕೆಯ ಮೇಲಿಡಬೇಕು. ಅವಳು ಮರಳಿ ಬದುಕುವಳು," ಎಂದು ಬೇಡಿಕೊಂಡನು.
19 : ಯೇಸು ಎದ್ದು ಅವನ ಹಿಂದೆ ಹೊರಟರು. ಶಿಷ್ಯರೂ ಹಿಂಬಾಲಿಸಿ ಹೋದರು.
20 : ಹೋಗುತ್ತಿದ್ದಾಗ, ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ಬಹಳವಾಗಿ ನರಳುತ್ತಿದ್ದ ಒಬ್ಬ ಮಹಿಳೆ ಹಿಂಬದಿಯಿಂದ ಬಂದು ಯೇಸುಸ್ವಾಮಿಯ ಉಡುಪಿನ ಅಂಚನ್ನು ಮುಟ್ಟಿದಳು.
21 : "ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು" ಎಂದುಕೊಂಡಿದ್ದಳು ಆಕೆ.
22 : ಯೇಸು ಹಿಂದಿರುಗಿ ಆಕೆಯನ್ನು ನೋಡಿ, "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ," ಎಂದರು. ಆ ಕ್ಷಣದಲ್ಲೇ ಆಕೆ ವ್ಯಾಧಿಯಿಂದ ಮುಕ್ತಳಾದಳು.
23 : ಯೇಸು ಆ ಅಧಿಕಾರಿಯ ಮನೆಯನ್ನು ತಲುಪಿದರು. ಅಲ್ಲಿ ವಾದ್ಯಗಾರರನ್ನೂ ಗದ್ದಲ ಮಾಡುತ್ತಿದ್ದ ಜನಜಂಗುಳಿಯನ್ನೂ ಕಂಡು,
24 : "ಎಲ್ಲರೂ ಇಲ್ಲಿಂದ ಹೊರಡಿರಿ, ಬಾಲಕಿ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ" ಎಂದರು. ಜನರು ನಕ್ಕು ಅವರನ್ನು ಪರಿಹಾಸ್ಯ ಮಾಡಿದರು.
25 : ಆದರೂ ಜನರ ಗುಂಪನ್ನು ಹೊರಗೆ ಕಳುಹಿಸಿ, ಯೇಸು ಕೊಠಡಿಯೊಳಕ್ಕೆ ಹೋಗಿ, ಬಾಲಕಿಯ ಕೈಹಿಡಿದು ಎಬ್ಬಿಸಿದರು. ಆಕೆ ಎದ್ದಳು.
26 : ಈ ಸಮಾಚಾರ ಆ ನಾಡಿನಲ್ಲೆಲ್ಲಾ ಹಬ್ಬಿ ಹರಡಿತು. 
----------------------
ಕ್ರಿಸ್ತನಲ್ಲಿ ಪ್ರಿಯ ಸಹೋದರ ಸಹೋದರಿಯರೇ ಇಂದಿನ ವಾಚನದಲ್ಲಿ ಯೇಸು ಎರಡು ಅದ್ಭುತ ಕಾರ್ಯಗಳನ್ನು ಮಾಡುತ್ತಾರೆ. ವಿಶ್ವಾಸಭರಿತ ಬದುಕು ಅದ್ಭುತಗಳ ಆಗರ ಎಂದು ತೋರಿಸುತ್ತಿದ್ದಾರೆ. ಯೆಹೂದ್ಯ ಅಧಿಕಾರಿಯೊಬ್ಬನು ತನ್ನ ಮಗಳು ತೀರಿಹೋಗಿದ್ದರಿಂದ ಯೇಸುವಿನಲ್ಲಿ ಮೊಣಕಾಲೂರಿ ಜೀವಭಿಕ್ಷೆಯ ಪ್ರಾರ್ಥನೆಯನ್ನು ಮಾಡುತ್ತಾನೆ. ಯೇಸುವಿನ ಪವಿತ್ರ ಹಸ್ತಗಳಿಂದ ಮುಟ್ಟಿದರೆ ಸಾಕು ತನ್ನ ಮಗಳು ಬದುಕುವಳು ಎಂಬ ಗಾಢವಾದ ವಿಶ್ವಾಸವನ್ನು ತೋರ್ಪಡಿಸುತ್ತಾನೆ. ಎರಡನೇಯ ಅದ್ಭುತದಲ್ಲಿ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆ ಕ್ರಿಸ್ತನ ಉಡುಪಿನ ಸ್ಪರ್ಶದಿಂದ ಪೂರ್ಣ ಗುಣಹೊಂದುತ್ತಾಳೆ. ಇವೆರಡರಲ್ಲು ಜನ ನಕ್ಕು ಅಪಹಾಸ್ಯ ಮಾಡಿದರೂ ಯೇಸು ವಿಶ್ವಾಸದ ಸಫಲತೆಯನ್ನು ತೋರಿಸಿ, “ನಾನೇ ಜೀವ, ಮಾರ್ಗ, ಸತ್ಯ’ ಎಂದು ತೋರಿಸಿಕೊಡುತ್ತಾರೆ. ನಮ್ಮಲ್ಲು ಈ ಅಳುಕು ವಿಶ್ವಾಸವನ್ನು ತೆಗೆದು ಕ್ರಿಸ್ತನಲ್ಲಿ ಪೂರ್ಣ ಬರವಸೆ ಇಟ್ಟು, ನಮ್ಮ ಆಧ್ಯಾತ್ಮಿಕ ಮತ್ತು ದೈಹೀಕ ಸ್ವಾಸ್ತ್ಯವನ್ನು ಹೆಚ್ಚಿಸಿ ಇತರರ ಅಪಹಾಸ್ಯವನ್ನು ಶಮನಗೋಳಿಸಿ ವಿಶ್ವಾಸದ ಪತಾಕೆಯ ಜೊತೆ ಅದ್ಭುತವನ್ನು ಕಾಣೋಣ.
------------
ಮರಿಯ ಗೊರೆಟ್ಟಿ ಅತೀ ಚಿಕ್ಕ ವಯಸ್ಸಿನ ಸಂತಳೆಂದು ಘೋಷಿತಳಾಗಿದ್ದಾರೆ. ಹುಟ್ಟಿದ್ದು1890ರಲ್ಲಿ. ಕೊಲೆಗೀಡಾಗಿದ್ದು 1902ರಲ್ಲಿ. ಕೇವಲ  11 ವರ್ಷ ಪ್ರಾಯದಲ್ಲೇ ಆಕೆ ತನ್ನ ವಿಶ್ವಾಸಕ್ಕೆ, ಪಾವಿತ್ರತೆಗೆ ದಕ್ಕೆಯಾಗದಂತೆ  ಕಾಮಾತುರನಾಗಿದ್ದ ಅಲಸ್ಸಾಂದ್ರೋನ ಇಚ್ಛೆಗೆ ವಿರೋಧಮಾಡಿ, ಆತನಿಂದ 14 ಬಾರಿ ಚೂರಿಯ ಇರಿತಕ್ಕೊಳಗಾಗಿ ಮರಣ ಹೊಂದಿದಳು. 1950ರಲ್ಲಿ  ಆಕೆಯನ್ನು ಸಂತ ಕನ್ಯೆಯೆಂದು ಘೋಷಣೆ ಮಾಡಲಾಯಿತು. ಅಲಸ್ಸಾಂದ್ರೂ ತನ್ನ ಪಾಪಕ್ಕೆ ಪ್ರಾಯಶ್ಚಿತವಾಗಿ 27 ವರ್ಷ ಸೆರೆಮನೆವಾಸ ಮಾಡಿದ, ಮರಿಯಳ ತಾಯಿಯ ಬಳಿ ಕ್ಷಮಾಪಣೆ ಬೇಡಿದ, ಅನಂತರ ಧಾರ್ಮಿಕ ಸಹೋದರನಾದ.
--------------------
@ದನಿ ಮಾಧ್ಯಮ ಮನೆ

No comments:

Post a Comment