Thursday, 26 November 2020

ಅಕ್ಟೋಬರ್ 13, 2020 ಮಂಗಳವಾರ

 ಅಕ್ಟೋಬರ್ 13, 2020 ಮಂಗಳವಾರ                        [ಹಸಿರು]

ಮೊದಲ ವಾಚನ: ಗಲಾತ್ಯರಿಗೆ 5:1-6

ಕೀರ್ತನೆ 119: 41, 43, 44-45, 47-48 ಶ್ಲೋಕ.41

ದೊರಕಲಿ ಪ್ರಭೂ ನನಗೆ, ನಿನ್ನ ಕರುಗೆ

ಶುಭಸಂದೇಶ: ಲೂಕ 11.37-41

==================

ಮೊದಲನೇ ವಾಚನ

ಗಲಾತ್ಯರಿಗೆ 5:1-6

1 : ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆ ಮಾಡಿದರು. ಆದ್ದರಿಂದ ದೃಢವಾಗಿರಿ. ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ.

2 : ಪೌಲನಾದ ನಾನು ಹೇಳುವುದನ್ನು ಕೇಳಿ: ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತ ಯೇಸುವಿನಿಂದ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ.

3 : ಸುನ್ನತಿ ಮಾಡಿಸಿಕೊಳ್ಳುವ ಪ್ರತಿಯೊಬ್ಬನೂ ಇಡೀ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಲು ಬದ್ಧನಾಗಿದ್ದಾನೆ ಎಂದು ಪುನಃ ನಿಮಗೆ ನಾನು ಒತ್ತಿ ಹೇಳುತ್ತೇನೆ.

4 : ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರ ಮೂಲಕವೇ ದೇವರೊಡನೆ ಸತ್ಸಂಬಂಧ ಪಡೆಯಬೇಕೆಂದಿರುವ ನೀವು ಕ್ರಿಸ್ತಯೇಸುವಿನಿಂದ ಬೇರ್ಪಟ್ಟಿದ್ದೀರಿ. ದೈವಾನುಗ್ರಹದಿಂದ ದೂರವಾಗಿದ್ದೀರಿ.

5 : ನಾವಾದರೋ ಪವಿತ್ರಾತ್ಮರ ಮುಖಾಂತರ ವಿಶ್ವಾಸದಿಂದ ದೇವರೊಂದಿಗೆ ಸತ್ಸಂಬಂಧವನ್ನು ಹೊಂದುತ್ತೇವೆಂಬ ನಿರೀಕ್ಷೆ ಉಳ್ಳವರಾಗಿದ್ದೇವೆ; ಈ ನಿರೀಕ್ಷೆ ಸಫಲವಾಗುವುದನ್ನು ಎದುರುನೋಡುತ್ತಿದ್ದೇವೆ.

6 : ಕ್ರಿಸ್ತ ಯೇಸುವಿನಲ್ಲಿ ಬಾಳುವವರಿಗೆ ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಮುಖ್ಯವಲ್ಲ. ಪ್ರೀತಿಯಿಂದ ಕಾರ್ಯ ಎಸಗುವ ವಿಶ್ವಾಸವೇ ಪ್ರಮುಖವಾದುದು.

===================

ಕೀರ್ತನೆ 

ಕೀರ್ತನೆ 119: 41, 43, 44-45, 47-48 ಶ್ಲೋಕ.41

ದೊರಕಲಿ ಪ್ರಭೂ ನನಗೆ, 

ನಿನ್ನ ಕರುಗೆ


41 : ದೊರಕಲಿ ಪ್ರಭು ನನಗೆ 

ನಿನ್ನ ಕರುಣೆ / 

ನೀನು ವಾಗ್ದಾನಮಾಡಿದಾ 

ರಕ್ಷಣೆ //


43 : ತೆಗೆಯಬೇಡ ನನ್ನ 

ಬಾಯಿಂದ ಸತ್ಯವನು / 

ನಂಬಿಕೊಂಡಿರುವೆ ನಿನ್ನ 

ನ್ಯಾಯವಿಧಿಯನು //


44 : ಸತತ ನಿನ್ನ 

ಧರ್ಮಶಾಸ್ತ್ರವನು ಕೈಗೊಳ್ಳುವೆ / 

ಯುಗಯುಗಾಂತರಕು 

ಅದನು ಪರಿಪಾಲಿ ಸುವೆ //


45 : ನಿನ್ನ ನಿಯಮದಂತೆ 

ಬಾಳಲು ಯತ್ನಿಸಿದೆ / 

ಎಂತಲೇ, ಆತಂಕವಿಲ್ಲದೆ 

ನಡೆದೆ //


47 : ನಿನ್ನ ಆಜ್ಞೆಗಳಲ್ಲಿದೆ 

ನನಗಾನಂದ / 

ಅವುಗಳ ಮೇಲೆಯೆ 

ನನಗಭಿಮೋದ //


48 : ನಾ ಕೈಯೊಡ್ಡಿ ಕೇಳುವುದು 

ನಿನ್ನ ಆಜ್ಞೆಗಳನೆ / 

ನನಗೆ ಪ್ರಿಯ, ಧ್ಯಾನಾರ್ಹ, 

ನಿನ್ನ ನಿಬಂಧನೆ //

===================

ಶುಭಸಂದೇಶ

ಲೂಕ 11.37-41

37 : ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು.

38 : ಊಟಕ್ಕೆ ಮುಂಚೆ ಅವರು ಕೈ ತೊಳೆಯದೆ ಹೋದುದನ್ನು ಕಂಡು ಫರಿಸಾಯನು ಚಕಿತನಾದನು.

39 : ಆಗ ಯೇಸು, “ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿ ಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ.

40 : ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಮಾಡಲಿಲ್ಲವೇ?

41 : ನಿಮ್ಮ ತಟ್ಟೆ ಲೋಟಗಳಲ್ಲಿ ಇರುವುದನ್ನು ಮೊಟ್ಟ ಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ಧಿಯಾಗಿರುವುದು.

ಚಿಂತನೆ

ಎಲ್ಲಾ ಧರ್ಮಗಳೂ ವಿಶೇಷವಾಗಿ ಮನುಷ್ಯನ ನಡವಳಿಕೆಗೆ ಮಹತ್ವವನ್ನು ನೀಡುತ್ತವೆ. ಪ್ರೀತಿ, ನೀತಿ, ನ್ಯಾಯದಿಂದ ನಡೆದುಕೊಳ್ಳದವನು ಧರ್ಮಿಷ್ಠನೇ ಅಲ್ಲ. ಫÀರಿಸಾಯರು, ಧರ್ಮಶಾಸ್ತ್ರಿಗಳು ಧರ್ಮಿಷ್ಠರಂತೆ ಮುಖವಾಡ ಧರಿಸಿದ್ದರು. ಕಾನೂನು ಮತ್ತು ಆಚಾರಗಳೇ ಅವರಿಗೆ ಪ್ರಮುಖವಾಗಿದ್ದವು. ಕಾನೂನು, ಆಚಾರಗಳ ಒಳ ಅರ್ಥವನ್ನು ಅವರು ಅರಿಯಲು ವಿಫಲರಾದರು. ಕಟ್ಟಳೆಗಳು ನಾವು ತೊಡುವ ಬಟ್ಟೆಯಂತೆ ಇರಬೇಕು ಅವು ಜನರಿಗೆ ಹೊಂದಬೇಕು. ಧರ್ಮವು ಕೆಲವು ಧಾರ್ಮಿಕ ವಿಧಿಗಳಲ್ಲಿ ಆಚಾರ-ವಿಚಾರ, ಸಂಪ್ರದಾಯಗಳ ಆಚರಣೆಯಲ್ಲಿ ಅರ್ಥವಾಗಿರುವುದಲ್ಲ. ಧರ್ಮವಿರುವುದು ಸದ್ಗುಣಗಳಲ್ಲಿ ಪ್ರಕಟವಾಗುವ , ಮನುಷ್ಯತ್ವದಲ್ಲಿ. ಹಾಗಾಗಿ ಯೇಸುನಾಮವು ಯೆಹೂದ್ಯರ ಬಾಹ್ಯ ಶುದ್ದತೆಗಿಂತ ಆಂತರಿಕ ಶುದ್ಧತೆ ಮುಖ್ಯವಾದದ್ದು ಎಂದು ಪ್ರತಿಪಾದಿಸುತ್ತಾರೆ.

===================

No comments:

Post a Comment