Monday, 23 November 2020

ಡಿಸೆಂಬರ್ 14, 2020 ಸೋಮವಾರ

 ಡಿಸೆಂಬರ್ 14, 2020 ಸೋಮವಾರ                        [ನೇರಳೆ]
ಶಿಲುಬೆಯ ಸಂತ ಜಾನ್, ಯಾಜಕ ಮತ್ತು ಧರ್ಮಸಭೆ ಪಂಡಿತ (ಸ್ಮರಣೆ)
ಮೊದಲ ವಾಚನ: ಸಂಖ್ಯಾ 24.2-7, 15-17
ಕೀರ್ತನೆ 25: 4-9 ಶ್ಲೋಕ.4 
ನಿನ್ನ ಮಾರ್ಗವನು ಪ್ರಭೂ, ನನಗೆ ತೋರಿಸು
ಶುಭಸಂದೇಶ: ಮತ್ತಾಯ 21.23-27
==================
ಮೊದಲನೇ ವಾಚನ

ಸಂಖ್ಯಾ 24.2-7, 15-17
2 : ಕುಲಗಳ ಅನುಸಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಯೇಲರು ಅವನಿಗೆ ಕಾಣಿಸಿದರು.
3 : ಆಗ ಅವನು ದೇವಾತ್ಮ ಪ್ರೇರಿತನಾಗಿ ಪದ್ಯರೂಪದಲ್ಲಿ ಇಂತೆಂದು ಭವಿಷ್ಯ ನುಡಿದನು: “ಇದು ಬೆಯೋರನ ಮಗ ಬಿಳಾಮನ ಭವಿಷ್ಯವಾಣಿ: ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ.
4 : ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದಾ ವ್ಯಕ್ತಿಯ ವಾಣಿ.
5 : ಯಕೋಬ್ಯರೇ, ನಿಮ್ಮ ಡೇರೆಗಳೆಷ್ಟು ರಮ್ಯ ! ಇಸ್ರಯೇಲರೇ, ನಿಮ್ಮ ನಿವಾಸಗಳೆಷ್ಟು ಸುಂದರ !
6 : ಅವಿವೆ ಉದ್ದುದ್ದ ಚಾಚಿಕೊಂಡಿರುವ ಕಣಿವೆಗಳಂತೆ ನದಿಯ ಬಳಿಯಿರುವ ತೋಟಗಳಂತೆ ಸರ್ವೇಶ್ವರ ನೆಟ್ಟ ಅಗರುಮರಗಳಂತೆ. ನೀರ ಬದಿಯ ದೇವದಾರು ವೃಕ್ಷಗಳಂತೆ.
7 : ನೀರು ಹರಿಯುತ್ತಲೇ ಇದೆ ಅವರ ಕಪಿಲೆಗಳಿಂದ ಅವರ ಬಿತ್ತನೆಗೆ ನೀರಿನ ಕೊರತೆಯೆಂಬುದಿಲ್ಲ. ಅಗಾಗ್ರಾಜನಿಗಿಂತ ಶ್ರೇಷ್ಠ ಅವರ ಅರಸ ಅಭಿವೃದ್ಧಿಯಾಗುತ್ತಿದೆ ಅವರ ರಾಜ್ಯ.
15 : ಪದ್ಯರೂಪವಾಗಿ ಹೀಗೆಂದನು: “ಬೆಯೋರನ ಮಗ ಬಿಳಾಮನು ನುಡಿದ ಭವಷ್ಯವಾಣಿ:
16 : ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ ಪರಾತ್ಪರನ ಜ್ಞಾನವನ್ನು ಪಡೆದವನ ವಾಣಿ ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದವನ ಭವಿಷ್ಯವಾಣಿ:
17 : ಒಬ್ಬಾತನನ್ನು ನೋಡುತ್ತಿದ್ದೇನೆ; ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮೀಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ ಯಕೋಬವಂಶದಲ್ಲಿ ರಾಜದಂಡ ಹಿಡಿದವನು ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿಹಾಕಿದ್ದಾನೆ ಮೊವಾಬ್ಯರ ತಲೆಯನ್ನು; ಕೆಡವಿಬಿಟ್ಟಿದ್ದಾನೆ ಯುದ್ಧವೀರರೆಲ್ಲರನ್ನು.
===================
ಕೀರ್ತನೆ 
ಕೀರ್ತನೆ 25: 4-9 ಶ್ಲೋಕ.4 
ನಿನ್ನ ಮಾರ್ಗವನು ಪ್ರಭೂ, ನನಗೆ ತೋರಿಸು
4 : ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು /
 ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು //
5 : ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ / 
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ //
6 : ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು / 
ಆದಿಯಿಂದ ನೀ ತೋರಿದಚಲ ಪ್ರೀತಿಯನು //
7 : ಯೌವನದೆನ್ನ ಪಾಪ ಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ / 
ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ //
8 : ತ್ಯಸ್ವರೂಪನು, ದಯಾವಂತನು ಪ್ರಭು / 
ದಾರಿತಪ್ಪಿದವರಿಗೆ ಬೋಧಕನು ವಿಭು //
9 : ದೀನರನು ನಡೆಸುವನು ತನ್ನ ವಿಧಿಗನುಸಾರ /
 ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ //
===================
ಶುಭಸಂದೇಶ
ಮತ್ತಾಯ 21.23-27
23 : ತರುವಾಯ ಯೇಸುಸ್ವಾಮಿ ಮಹಾ ದೇವಾಲಯದ ಒಳಕ್ಕೆ ಹೋಗಿ ಅಲ್ಲಿ ಬೋಧನೆ ಮಾಡತೊಡಗಿದರು. ಮುಖ್ಯ ಯಾಜಕರೂ ಪ್ರಜಾಪ್ರಮುಖರೂ ಅವರ ಬಳಿಗೆ ಬಂದು, “ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರಾರು?” ಎಂದು ಪ್ರಶ್ನಿಸಿದರು.
24 : ಅದಕ್ಕೆ ಯೇಸು, “ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ಉತ್ತರಕೊಟ್ಟರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ.
25 : ‘ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ, ಮನುಷ್ಯರಿಂದಲೋ?’ ” ಎಂದು ಕೇಳಿದರು.
26 : ಅದಕ್ಕೆ ಅವರು ತಮ್ಮತಮ್ಮೊಳಗೇ ಹೀಗೆಂದು ತರ್ಕ ಮಾಡಲಾರಂಭಿಸಿದರು: “ದೇವರಿಂದ ಬಂತು ಎಂದು ಉತ್ತರಿಸಿದರೆ, ‘ಹಾಗಾದರೆ ನೀವೇಕೆ ಆತನನ್ನು ನಂಬಲಿಲ್ಲ?’ ಎಂದು ಕೇಳುವನು. ‘ಮನುಷ್ಯರಿಂದ ಬಂತು’ ಎಂದು ಹೇಳಿದೆವಾದರೆ ಜನಸಮೂಹಕ್ಕೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೊವಾನ್ನನು ಒಬ್ಬ ಪ್ರವಾದಿಯೆಂದು ಸರ್ವರೂ ಸನ್ಮಾನಿಸುತ್ತಾರೆ” ಎಂದುಕೊಂಡರು.
27 : ಬಳಿಕ ಬಂದು, “ನಮಗೆ ಗೊತ್ತಿಲ್ಲ,” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು, “ಹಾಗಾದರೆ, ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು. 
=================
ಚಿಂತನೆ
ಯೇಸುವಿನ ಬಹಿರಂಗ ಜೀವನ, ದೇವಾಲಯದ ಶುದ್ದತೆ, ಕುರುಡು ಕುಂಟರನ್ನು ಸ್ವಸ್ಥಪಡಿಸುವಿಕೆಯನ್ನು ಯೆಹೂದ್ಯ ಅಧಿಕಾರಿಗಳು ಪ್ರಶ್ನಿಸುತ್ತಾರೆ. ಧಾರ್ಮಿಕ ಆಚರಣೆಗಳಲ್ಲಿ. ಸಾಮಾನ್ಯ ಜನರಿಗೆ ಯಾವುದೇ ಪಾಲಿರಲಿಲ್ಲ. ಅವರ ಪ್ರಕಾರ ಯೇಸು ಯಾಜಕನೂ ಅಲ್ಲಅಭಿಷಿಕ್ತನೂ ಅಲ್ಲ. ಎಂದ ಮೇಲೆ ಯೇಸುವಿಗೆ ಯಾವುದೇ ಅಧಿಕಾರವೆಲ್ಲಿಂದ ಬಂದೀತು? ಎಂದೇ  ಯೆಹೊದ್ಯ ಪಂಡಿತರ ವಾದವಾಗಿತ್ತು. ಆದರೆ ಯೇಸು ಪಿತನಿಂದ ಬಂದವರು, ಪವಿತ್ರಾತ್ಮರಿಂದ ಅಭಿಷಿಕ್ತರಾದವರು,ಯಥಾರ್ಥರಾಗಿ ಪ್ರಧಾನ ಯಾಜಕರೇ ಎಂಬುದನ್ನು ಅರಿಯಲು ಅವರು ವಿಫಲರಾದರು. ಯೇಸು ಅಧಿಕಾರಪಡೆದದ್ದು ತಮ್ಮ ತಂದೆಯಿಂದ ಯೇಸುವನ್ನು ಸಂಕಷ್ಟಕ್ಕೆ ಸಿಲುಕಿಸಲು ಪ್ರಯತ್ನಿಸಿದ ಮುಖ್ಯ ಯಾಜಕರು ತಾವೇ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಯೇಸುವಿನಲ್ಲಿದ್ದ ಸಮಯ ಪ್ರಜ್ಞೆ, ವಿವೇಚನೆ ನಮ್ಮಲ್ಲೂ ಮೂಡಿದರೆ ಇತರರ ಕುಯುಕ್ತಿಯಿಂದ ನಾವು ಪಾರಾಗಬಹುದು.
----------------------
“ಯಾರಾದರೂ ನನ್ನನ್ನು ಹಿಂಬಾಲಿಸಲು ಇಚ್ಚಿಸಿದರೆ, ನನ್ನ ಶಿಲುಬೆ ಹೊತ್ತು ಬರಲಿ” (ಮಾರ್ಕ 8:34) ಎಂಬ ಕ್ರಿಸ್ತನ ಮಾತುಗಳನ್ನು ಅಕ್ಷರಶಃ ಪಾಲಿಸಿದರು ಶಿಲುಬೆಯ ಸಂತ ಜಾನ್. ಲೌಕಿಕ ಸುಖಭೋಗಗಳಷ್ಟೇ, ಧಾರ್ಮಿಕ ಸುಖಭೋಗಗಳೂ ಅಪಾಯಕಾರಿ ಎಂದೇ ಅವರ ದೃಢ ನಂಬಿಕೆ. . “ನಿನಗೆ ಇನ್ನೇನು ಬೇಕು ಆತ್ಮವೇ? ಶ್ರೀಮಂತಿಗೆ, ಸಂತಸ, ತೃಪ್ತಿ, ಸಾಮ್ರಾಜ್ಯ ಎಲ್ಲವೂ ನಿನ್ನೊಳಗೆಯೇ ನಿನ್ನ ಹೂರಗೆ ಇನ್ನೇನನ್ನು ನೀನು ಅರಸಬೇಕು? ಏನಾದರೂ ಬಯಸುವಿಯಾದರೆ ಯೇಸುವನ್ನು ಬಯಸು. ಆತನನ್ನು ನಿನ್ನಿಂದ ಹೊರಗೆಲ್ಲಿಯೂ  ಹುಡುಕಬೇಡ, ನಿನ್ನೂಳಗೆ ಹುಡುಕು”. ಇದು ಶಿಲುಬೆಯ ಸಂತ ಜಾನರ ಅನುಭಾವಿಕ ಅನುಭವ.
ದೈವ ಶಾಸ್ತ್ರದ ಪಂಡಿತ ಸಂತ ಜಾನರು ಅನೇಕ ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಮುಖ್ಯವಾದವುಗಳು ‘ ಅಸೆಂಟ್ ಆಫ್ ಮೌಂತ್ ಕಾರ್ಮೆಲ್, “ಡಾರ್ಕ್ ನೈಟ್ ಆಫ್ ದ ಸೋಲ್”, ದ ಲಿವಿಂಗ್ ಫ್ಲೇಮ್ ಆಫ್ ಲವ್”. 1726 ರಲ್ಲಿ ಹದಿಮೂರನೇ ಬೆನೆದಿಕ್ಟ ಅವರನ್ನು ಸಂತರೆಂದೂ, ಧರ್ಮ ಸಭೆಯ ಪಂಡಿತರೆಂದು ಘೋಷಿಸಿದರು
==============

No comments:

Post a Comment