ಡಿಸೆಂಬರ್ 15, 2020 ಮಂಗಳವಾರ [ನೇರಳೆ]
ಮೊದಲ ವಾಚನ: ಜೆಫನ್ಯ 3.1-2, 9-13
ಕೀರ್ತನೆ 34:1-2, 5-6, 16-17, 18, 22. ಶ್ಲೋಕ.6
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು
ಶುಭಸಂದೇಶ: ಮತ್ತಾಯ 21.28-32
==================
ಮೊದಲನೇ ವಾಚನ
ಜೆಫನ್ಯ 3.1-2, 9-13
1 : ದಬ್ಬಾಳಿಕೆ ನಡೆಸುವ, ದಂಗೆಯೇಳುವ ದುಷ್ಟ ನಗರಕ್ಕೆ ದಿಕ್ಕಾರ!
2 : ಅದು ಯಾರ ಬುದ್ಧಿಮಾತಿಗೂ ಕಿವಿಗೊಡಲಿಲ್ಲ. ಶಿಕ್ಷಣಕ್ಕೆ ಒಳಪಡಲಿಲ್ಲ. ಸರ್ವೇಶ್ವರಸ್ವಾಮಿಯಲ್ಲಿ ಭರವಸೆ ಇಡಲಿಲ್ಲ. ತನ್ನ ದೇವರ ಸನ್ನಿಧಿಗೆ ಬರಲಿಲ್ಲ.
9 : “ಆಗ ಎಲ್ಲರೂ ಒಮ್ಮನಸ್ಸಿನಿಂದ ನನ್ನನ್ನು ಪೂಜಿಸಿ ನನ್ನ ಹೆಸರೆತ್ತಿ ಪ್ರಾರ್ಥಿಸುವಂತೆ ಜನಾಂಗಗಳ ಬಾಯನ್ನು ಪರಿವರ್ತಿಸಿ ಶುದ್ಧೀಕರಿಸುವೆನು.
10 : ಚದರಿಹೋಗಿರುವ ನನ್ನ ಜನರು, ನನ್ನ ಭಕ್ತಾದಿಗಳು, ಸುಡಾನಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದೊಪ್ಪಿಸುವರು.
11 : ನೀನು ನನಗೆ ಎದುರಾಗಿ ದಂಗೆಯೆದ್ದು ಮಾಡಿದ ನಾನಾ ದುಷ್ಕøತ್ಯಗಳಿಗಾಗಿ ಆ ದಿನದಂದು ನೀನು ನಾಚಿಕೆಪಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅತಿ ಗರ್ವದಿಂದ ಮೆರೆಯುವವರನ್ನು ನಿನ್ನ ಮಧ್ಯೆಯಿಂದ ತೊಲಗಿಸಿಬಿಡುವೆನು. ಅಂದಿನಿಂದ ನನ್ನ ಪವಿತ್ರ ಪರ್ವತದ ಮೇಲೆ ನೀನು ಗರ್ವಪಡದೆ ಬಾಳುವೆ.
12 : ದೀನರೂ ನಮ್ರರೂ ಆದ ಜನರನ್ನು ನಿನ್ನಲ್ಲಿ ಉಳಿಸುವೆನು. ಅವರು ಪ್ರಭುವಿನ ನಾಮದಲ್ಲಿ ಭಯಭಕ್ತಿಯಿಂದಿರುವರು.
13 : ಇಸ್ರಯೇಲಿನಲ್ಲಿ ಅಳಿದುಳಿದವರು ಅನ್ಯಾಯ ಮಾಡರು, ಸುಳ್ಳಾಡರು. ಅವರ ಬಾಯಲ್ಲಿ ಮೋಸವಿರದು. ಕುರಿಮಂದೆಯಂತೆ ಮೇದು ಸುರಕ್ಷಿತವಾಗಿರುವರು. ಅವರನ್ನು ಯಾರೂ ಹೆದರಿಸರು.”
===================
ಕೀರ್ತನೆ

1 : ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು /
ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು //
2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ /
ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
5 : ಆತನತ್ತ ತಿರುಗಿದ ಮುಖ ಅರಳುವುದು /
ಲಜ್ಜೆಯಿಂದೆಂದಿಗು ಕುಂದಿಹೋಗದು //
6 : ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು /
ಸರ್ವಾಪತ್ತಿನಿಂದವನು ಮುಕ್ತಗೊಂಡನು //
16 : ದುರ್ಜನರಿಗಾದರೋ ಪ್ರಭು ವಿಮುಖನು /
ಅವರ ಹೆಸರನು ಧರೆಯಿಂದ ಅಳಿಸುವನು //
17 : ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ /
ನೆರವೀವನವರ ಕಷ್ಟನಿವಾರಣೆಗೆ //
18 : ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ /
ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ //
22 : ತನ್ನ ದಾಸರನು ಉದ್ಧಾರಮಾಡದಿರನು ಪ್ರಭು /
ತನ್ನ ಶರಣರೊಳೊಬ್ಬರನು ದಂಡಿಸನಾ ವಿಭು //
====================
ಮತ್ತಾಯ 21.28-32
28 : “ಈ ಬಗ್ಗೆ ನಿಮಗೇನು ಅನಿಸುತ್ತದೆ? ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಒಮ್ಮೆ ಆತ ಮೊದಲನೆಯ ಮಗನ ಹತ್ತಿರ ಬಂದು, ‘ಮಗನೇ, ಈ ಹೊತ್ತು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದ.
29 : ಅದಕ್ಕೆ ಅವನು, ‘ನಾನು ಹೋಗುವುದಿಲ್ಲ’ ಎಂದು ಉತ್ತರವಿತ್ತ. ಆದರೂ ಅನಂತರ ಪಶ್ಚಾತ್ತಾಪಪಟ್ಟು ಅವನು ತೋಟಕ್ಕೆ ಹೋದ.
30 : ತಂದೆ ಎರಡನೆಯ ಮಗನ ಹತ್ತಿರ ಹೋಗಿ ಅಂತೆಯೇ ತೋಟಕ್ಕೆ ಹೋಗಲು ಹೇಳಿದ. ಅವನು, ‘ಇಗೋ, ಹೋಗುತ್ತೇನಪ್ಪಾ’ ಎಂದು ಹೇಳಿದ. ಆದರೆ ಹೋಗಲೇ ಇಲ್ಲ.
31 : ಇವರಿಬ್ಬರಲ್ಲಿ ತಂದೆಯ ಇಷ್ಟದಂತೆ ನಡೆದವನು ಯಾರು?” ಎಂದು ಯೇಸು ಕೇಳಿದರು. “ಮೊದಲನೆಯ ಮಗನೇ,” ಎಂದು ಉತ್ತರಿಸಿದರು ಅವರು. ಆಗ ಯೇಸುಸ್ವಾಮಿ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲೇ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವರು ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.
32 : ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು ಬಂದನು. ನೀವು ಆತನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಆತನನ್ನು ನಂಬಿದರು. ಇದನ್ನು ಕಂಡ ಮೇಲೂ ನೀವು ಪಶ್ಚಾತ್ತಾಪ ಪಡಲಿಲ್ಲ, ಯೊವಾನ್ನನನ್ನು ನಂಬಲೂ ಇಲ್ಲ.
===========
ಚಿಂತನೆ
ಇಂದಿನ ರಾಜಕೀಯ ನಾಯಕರುಗಳು ಅಥವಾ ಇನ್ನಿತರ ಅಧಿಕಾರದಲ್ಲಿದ್ದವರು ಸಂದರ್ಭ ಸನ್ನಿವೇಶಗಳನ್ನು ಬಳಸಿ, ತಮ್ಮ ಸುಪರ್ದಿಯಿಂದ ಮಾಡಲೇಬೇಕಾದ ಕರ್ತವ್ಯಗಳನ್ನು ತಾವು ಮಾಡುವ ದೊಡ್ಡ ಸೇವೆಗಳೆಂಬಂತೆ ಜಾಹೀರಾತು ಮಾಡುವ ನಿದರ್ಶನಗಳನ್ನು ನಾವು ಕಂಡರಿಯದೆ ಇಲ್ಲ.
ಇಂದಿನ ಶುಭಸಂದೇಶದಲ್ಲಿ ತಾನು ತಂದೆಯ ಮಾತಿನ ಪಾಲಕನೆಂಬಂತೆ ಕೊಟ್ಟ ಕಾರ್ಯವನ್ನು ತಟ್ಟನೆ ಮಾಡಲೊಪ್ಪಿಕೊಂಡ ಮಗ ಮಾತಿಗೆ ತಪ್ಪುತ್ತಾನೆ. ಒಪ್ಪಿಯೂ ನಡೆಯದೆ ವಚನಭ್ರಷ್ಟನಾಗುತ್ತಾನೆ. ಆದರೆ ತಂದೆಯ ಆಜ್ಞೆಯನ್ನು ಮೊದಲಿಗೆ ನಿರಾಕರಿಸಿದ ಮತ್ತೊಬ್ಬ ಮಗ ಪಶ್ಚಾತ್ತಾಪಪಟ್ಟು ಕೇಳಿದ ಕಾರ್ಯವನ್ನು ಮಾಡುತ್ತಾನೆ.
ಈ ಇಬ್ಬರು ಮಕ್ಕಳ ಸಾಮತಿಯ ಮೂಲಕ ಯೇಸು ನಮ್ಮ ಕರೆಯ ಬಗ್ಗೆ ಎಚ್ಚರಿಸುತ್ತಾರೆ; ನಾವು ಆತನ ಕರೆಗೆ ಓಗೊಟ್ಟವರು; ಹಿಂಬಾಲಿಸಿ ಪಾಲಿಸುವೆವೆಂದು ಅವರ ದಾರಿಯಲ್ಲಿ ಬಂದವರು. ಆಮೇಲೆ ಮುನ್ನಡೆಯದೆ ಸುಮ್ಮನಾಗಿಬಿಟ್ಟರೆ, ಕರೆಗೆ ಸಮ್ಮತಿಸದೆ ಅಡ್ಡದಾರಿ ಹಿಡಿದು ಬಹುದೂರ ಸಾಗಿದ್ದವರು ಪಶ್ಚಾತ್ತಾಪಪಟ್ಟು ಹಿಂತಿರುಗಿ ಸ್ವರ್ಗಸಾಮ್ರಾಜ್ಯ ಪ್ರವೇಶಿಸಲು ಮೊದಲಿಗರಾಗಿರುತ್ತಾರೆ. ವಿಪರ್ಯಾಸವಾಗಿ ಮಿಕ್ಕವರು, ಒಳ್ಳೆಯವರೆನಿಸಿಕೊಂಡಿದ್ದರೂ, ಇನ್ನೂ ಹಿಂದಿರುಗುತ್ತಾರೆ.
ಕೇವಲ ತೋರಿಕೆಗಾಗಿ ಕೊಟ್ಟ ನಮ್ಮ ಮಾತು ನಮ್ಮ ಕೈಹಿಡಿಯದು. ಕೊನೆಗೂ ಕೈ ಹಿಡಿಯುವ ಸತ್ಯ, ಬದ್ಧತೆ, ಬದಲಾವಣೆ ನಮ್ಮ ಮಾತಿನಲ್ಲಿರಬೇಕು. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಜಗದೀಶನೂ...!

No comments:
Post a Comment