Thursday, 26 November 2020

ಅಕ್ಟೋಬರ್ 23, 2020 ಶುಕ್ರವಾರ

 ಅಕ್ಟೋಬರ್ 23, 2020 ಶುಕ್ರವಾರ                        [ಹಸಿರು]

ಕೆಪಿಸ್ಟ್ರಾನೋದ ಸಂತ ಜಾನ್, ಯಾಜಕ (ಐಚ್ಛಿಕ ಸ್ಮರಣೆ)

ಮೊದಲ ವಾಚನ: ಎಫೆಸದವರಿಗೆ 4.1-6

ಕೀರ್ತನೆ 24:1-6 ಶ್ಲೋಕ.6

ಇಂಥವರೇ ದೇವರ ದರ್ಶನಾಭ್ಯರ್ಥಿಗಳು

ಶುಭಸಂದೇಶ: ಲೂಕ 12.54-59

==================

ಮೊದಲನೇ ವಾಚನ

===============

ಎಫೆಸದವರಿಗೆ 4.1-6

1 : ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿ ಇರುವ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ.

2 : ಯಾವಾಗಲೂ ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ.

3 : ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು.

4 : ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆಹೊಂದಿದವರು.

5 : ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ; ದೀಕ್ಷಾಸ್ನಾನವೂ ಒಂದೇ. 6ದೇವರು ಒಬ್ಬರೇ, ಸರ್ವರ ತಂದೆಯು ಅವರೇ; ಸರ್ವಶ್ರೇಷ್ಠರೂ ಅವರೇ; ಸರ್ವರ ಮೂಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂ ಅವರೇ.

===================

ಕೀರ್ತನೆ 

ಕೀರ್ತನೆ 24:1-6 ಶ್ಲೋಕ.6

ಇಂಥವರೇ ದೇವರ ದರ್ಶನಾಭ್ಯರ್ಥಿಗಳು


1 : ಪೊಡವಿಯೂ ಅದರಲ್ಲಿರುವುದೆಲ್ಲವೂ 

ಪ್ರಭುವಿನದೇ / 

ಜಗವೂ ಅದರ 

ಜೀವಜಂತುಗಳೆಲ್ಲವೂ ಆತನದೇ //


2 : ಕಡಲನು ತಳಪಾಯವನಾಗಿಸಿದವನು 

ಆತನೆ / 

ಜಲರಾಶಿ ನಡುವೆ ಅದನು

 ಸ್ಥಿರಗೊಳಿಸಿದವನಾತನೆ //


3 : ಪ್ರಭುವಿನ ಶಿಖರವನು 

ಏರಬಲ್ಲವನಾರು? / 

ಆ ನಿವಾಸದಲಿ ನಿಲ್ಲಲು 

ಯೋಗ್ಯನಾರು? //


4 : ಅಂಥವನಿರಬೇಕು ಶುದ್ಧ ಹಸ್ತನು, 

ಸುಮನಸ್ಕನು / 

ಅನಾಚಾರಕೆ, 

ಅಪಮಾಣಿಕತೆಗೆ ಒಲಿಯನವನು //


5 : ಲಭಿಸುವುದಾತನಿಗೆ 

ಶುಭ ಪ್ರಭುವಿನಿಂದ / 

ನೀತಿಯ ಸತ್ಫಲ 

ರಕ್ಷಕ ದೇವನಿಂದ //


6 : ಇಂಥವರೆ ದೇವರ 

ದರ್ಶನಾಭ್ಯರ್ಥಿಗಳು / 

ಇಂಥವರೆ ಯಕೋಬ 

ದೇವನ ಭಕ್ತಾದಿಗಳು //

===================

ಲೂಕ 12.54-59

54 : ಇದೂ ಅಲ್ಲದೆ ಯೇಸುಸ್ವಾಮಿ ಜನ ಸಮೂಹವನ್ನು ನೋಡಿ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೇ, ‘ಭಾರಿ ಮಳೆ ಬರುತ್ತದೆ’ ಎನ್ನುತ್ತೀರಿ; ಹಾಗೆಯೇ ಆಗುತ್ತದೆ.

55 : ದಕ್ಷಿಣ ದಿಕ್ಕಿನ ಗಾಳಿ ಬೀಸಿದಾಗ ಉರಿಬಿಸಿಲು ಎನ್ನುತ್ತೀರಿ; ಅಂತೆಯೇ ಇರುತ್ತದೆ.

56 : ಆಷಾಡಭೂತಿಗಳೇ, ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿ ಅರಿತುಕೊಳ್ಳಬಲ್ಲಿರಿ; ಆದರೆ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ? ವ್ಯಾಜ್ಯಗಾರನೊಡನೆ ನೇರಸಂಧಾನ (ಮತ್ತಾ. 5.25-26)

57 : “ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು?

58 : ನೀನು ನ್ಯಾಯಾಧಿಪತಿಯ ಬಳಿಗೆ ಹೋಗಬೇಕಾಗಿ ಬಂದಲ್ಲಿ, ದಾರಿಯಲ್ಲೇ ನಿನ್ನ ವಿರೋಧಿಯೊಡನೆ ವ್ಯಾಜ್ಯ ತೀರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಮುಂದೆ ಎಳೆದೊಯ್ಯಬಹುದು; ನ್ಯಾಯಾಧಿಪತಿ ನಿನ್ನನ್ನು ಸೆರೆಯ ಅಧಿಕಾರಿಯ ಕೈಗೊಪ್ಪಿಸಬಹುದು. ಸೆರೆ ಅಧಿಕಾರಿ ನಿನ್ನನ್ನು ಸೆರೆಮನೆಯಲ್ಲಿ ಹಾಕಬಹುದು.

59 : ಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದೆಂಬುದು ನಿಶ್ಚಯ,” ಎಂದರು. ಪಾಪಕ್ಕೆ ವಿಮುಖರಾಗಿರಿ

===================

ಚಿಂತನೆ

ಈ ಆಧುನಿಕ ಜಗತಿನಲ್ಲಿ ಮಾನವ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದಿದ್ದಾನೆ. ತನ್ನ ಬುದ್ದಿ ಶಕ್ತಿಯಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಘಟನೆಗಳನ್ನು ತಾನು ಕೂತಲ್ಲಿಯೇ ಮೊಬೈಲ್, ಟಿ.ವಿ, ಅಂರ್ತಜಾಲದ ಮೂಲಕ ತಿಳಿದುಕೊಳ್ಳಬಲ್ಲ. ಪ್ರಾಪಂಚಿಕ ವಿಷಯಗಳಲ್ಲಿರುವಷ್ಟು ಜ್ಞಾನ ಆಧ್ಯಾತ್ಮಿಕತೆಯಲಿಲ್ಲ. ಯೇಸುವಿನ ಕಾಲದಲ್ಲೂ ಜನರು ಲೌಕಿಕ ವಿಷಯಗಳಲ್ಲಿ ತುಂಬಾ ಪ್ರಾವೀಣ್ಯವನ್ನು ಪಡೆಯುತ್ತಿದ್ದರು.  ಮೋಡದ ಚಲನೆಯಿಂದ, ಗಾಳಿಯ ವೇಗದಿಂದ ಮಳೆಯಾಗುತ್ತದೋ ಇಲ್ಲವೋ ಎಂದು ಭವಿಷ್ಯ ನುಡಿಯುತ್ತಿದ್ದರು. ಆದರೆ ಯೇಸುವನ್ನು ರಕ್ಷಕನೆಂದು ಗುರುತಿಸಲು ವಿಫಲರಾದರು. ಹಳೆಯ ಒಡಂಬಡಿಕೆಯು `ರಕ್ಷಕ’ನ ಬಗ್ಗೆ  ಸಾಕಷ್ಟು ಮಾಹಿತಿಯನ್ನು ನೀಡಿದ್ದರೂ  ಆತನು ಬಂದಾಗ ಅವರು ಗುರುತಿಸಲಿಲ್ಲ. 400 ವರ್ಷಗಳಿಂದ ರಕ್ಷಕನ ನಿರೀಕ್ಷೆಯಲ್ಲಿದ್ದರೂ ರಕ್ಷಕನು ತಮ್ಮ ಮಧ್ಯೆ ನಡೆದಾಡುವಾಗ ಆತನನ್ನು ಸ್ವಾಗತಿಸಲಿಲ್ಲ, ಗುರುತಿಸಲು ವಿಫಲರಾದರು. ಎಲ್ಲರೂ ದೇವರ ಸೃಷ್ಟಿಯಲ್ಲೂ, ಸಹೋದರ ಸಹೋದರಿಯರಲ್ಲಿಯೂ ದೇವರನ್ನು ಗುರುತಿಸಬೇಕಿದೆ.

===================

No comments:

Post a Comment