Friday, 4 December 2020

ನವೆಂಬರ್ 10, 2020 ಮಂಗಳವಾರ

 ನವೆಂಬರ್ 10, 2020 ಮಂಗಳವಾರ                        [ಬಿಳಿ]
ಸಂತ ಮಹಾ ಲೆಯೊ, ವಿಶ್ಚಗುರು ಮತ್ತು ಧರ್ಮಸಭೆಯ ಪಂಡಿತ (ಸ್ಮರಣೆ)
ಮೊದಲ ವಾಚನ: ತೀತ 2.1-8, 11-14
ಕೀರ್ತನೆ 37:3-4, 18, 23, 27, 29. ಶ್ಲೋಕ.39
ಸಜ್ಜನರ ಜೀವೋದ್ದಾರ ಪ್ರಭುವಿನಿಂದ
ಶುಭಸಂದೇಶ: ಲೂಕ 17.7-10
==================
ಮೊದಲನೇ ವಾಚನ
ತೀತ 2.1-8, 11-14
1 : ನೀನಾದರೋ ಸದ್ಬೋಧನೆಗೆ ತಕ್ಕಂತೆ ಉಪದೇಶಮಾಡು.
2 : ಮದ್ಯಾಸಕ್ತಿ ಇಲ್ಲದೆಯೂ ಗೌರವಾಸಕ್ತರಾಗಿಯೂ ಆತ್ಮಸಂಯಮಿಗಳಾಗಿಯೂ ಇರಬೇಕೆಂದು ವೃದ್ಧರಿಗೆ ಬೋಧಿಸು. ವಿಶ್ವಾಸ, ಪ್ರೀತಿ ಮತ್ತು ತಾಳ್ಮೆ ಅವರ ಮುಖ್ಯ ಗುಣಗಳಾಗಿರಬೇಕು.
3 : ಅಂತೆಯೇ, ವೃದ್ಧ ಸ್ತ್ರೀಯರು ಸಭ್ಯರಾಗಿ ವರ್ತಿಸಬೇಕು. ಅವರು ಚಾಡಿ ಹೇಳಬಾರದು; ಮದ್ಯಾಸಕ್ತರಾಗಿರಬಾರದು; ಸದ್ಬೋಧಕಿಯರಾಗಿರಬೇಕೆಂದು ವಿಧಿಸು.
4 : ಅವರು ನವಗೃಹಿಣಿಯರಿಗೆ, ತಮ್ಮ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವಂತೆ ಬುದ್ಧಿ ಹೇಳಬೇಕು.
5 : ಗೃಹಿಣಿಯರು, ವಿವೇಕ ಬುದ್ಧಿಯುಳ್ಳವರು, ಪತಿವ್ರತೆಯರು, ಗೃಹಕೃತ್ಯಗಳನ್ನು ಗಮನಿಸುವವರು, ಸುಶೀಲೆಯರು, ಗಂಡಂದಿರಿಗೆ ವಿಧೇಯರು ಆಗಿ ಬಾಳುವುದನ್ನು ವೃದ್ಧ ಸ್ತ್ರೀಯರಿಂದ ಕಲಿತುಕೊಳ್ಳಲಿ. ಹೀಗೆ, ದೇವರ ವಾಕ್ಯಕ್ಕೆ ಯಾವ ಅಪವಾದವೂ ಬಾರದಂತೆ ಅವರು ನಡೆದುಕೊಳ್ಳಲಿ.
6 : ಹಾಗೆಯೇ, ಯುವಕರು ಎಲ್ಲ ವಿಷಯಗಳಲ್ಲೂ ಜಿತೇಂದ್ರಿಯರಾಗಿರಬೇಕೆಂದು ನೀನು ಎಚ್ಚರಿಸು.
7 : ಸತ್ಕಾರ್ಯಗಳನ್ನು ಮಾಡುವುದರಲ್ಲಿ ನೀನೇ ಮಾದರಿಯಾಗಿರಬೇಕು ಎಂಬುದನ್ನು ಮರೆಯಬೇಡ.
8 : ನಿನ್ನ ಬೋಧನೆ ಯಥಾರ್ಥವೂ ಗಂಭೀರವೂ ಕಳಂಕರಹಿತವೂ ಆಗಿರಲಿ. ಆಗ ನಮ್ಮ ವಿರೋಧಿಗಳು ನಮ್ಮಲ್ಲಿ ತಪ್ಪು ಕಂಡು ಹಿಡಿಯಲಾಗದೆ ತಾವೇ ಅಪಮಾನಿತರಾಗುತ್ತಾರೆ.
11 : ಎಲ್ಲಾ ಮಾನವರ ಜೀವೋದ್ಧಾರಕ್ಕಾಗಿಯೇ ದೇವರ ಅನುಗ್ರಹವು ಪ್ರಕಟವಾಗಿದೆ.
12 : ನಾವು ಭಕ್ತಿಹೀನ ನಡತೆಯನ್ನೂ ಪ್ರಾಪಂಚಿಕ ವ್ಯಾಮೋಹಗಳನ್ನೂ ವಿಸರ್ಜಿಸಿ, ಈ ಲೋಕದಲ್ಲಿ ವಿವೇಕಿಗಳಾಗಿಯೂ ಪ್ರಾಮಾಣಿಕರಾಗಿಯೂ ಭಕ್ತರಾಗಿಯೂ ಜೀವಿಸಬೇಕೆಂದು ಅದು ನಮಗೆ ಬೋಧಿಸುತ್ತದೆ.
13 : ಅಲ್ಲದೆ, ಮಹೋನ್ನತ ದೇವರು ಮತ್ತು ನಮ್ಮ ಉದ್ಧಾರಕ ಯೇಸುಕ್ರಿಸ್ತರು ಮಹಿಮಾರೂಪದಲ್ಲಿ ನಮಗೆ ಪ್ರತ್ಯಕ್ಷವಾಗುವ ಸೌಭಾಗ್ಯವನ್ನು ನಾವು ಎದುರುನೋಡಬೇಕೆಂದು ಅದು ಕಲಿಸುತ್ತದೆ.
14 : ಯೇಸುಕ್ರಿಸ್ತರು ನಮ್ಮನ್ನು ಸಕಲ ಅಪರಾಧಗಳಿಂದ ವಿಮೋಚಿಸಿ, ಪರಿಶುದ್ಧರನ್ನಾಗಿಸಿ, ಸತ್ಕಾರ್ಯಗಳಲ್ಲಿ ಆಸಕ್ತರಾದ ಒಂದು ಜನಾಂಗವನ್ನಾಗಿ ಮಾಡಿದರು. ನಮ್ಮನ್ನು ತಮ್ಮ ಸ್ವಂತದವರನ್ನಾಗಿಸಿಕೊಳ್ಳಲೆಂದು ತಮ್ಮನ್ನೇ ನಮಗಾಗಿ ಸಮರ್ಪಿಸಿಕೊಟ್ಟರು.
===================
ಕೀರ್ತನೆ 
ಕೀರ್ತನೆ 37:3-4, 18, 23, 27, 29. ಶ್ಲೋಕ.39
ಸಜ್ಜನರ ಜೀವೋದ್ದಾರ ಪ್ರಭುವಿನಿಂದ
3 : ಒಳಿತನು ಮಾಡು 
ಪ್ರಭುವಿನಲಿ ಭರವಸೆ ಇಟ್ಟು / 
ಸುರಕ್ಷಿತವಾಗಿ ಬಾಳು 
ಸಿರಿನಾಡಿನಲ್ಲಿದ್ದು //
4 : ಪ್ರಭುವಿನಿಂದಲೆ ಬಯಸು 
ನಿನ್ನಾನಂದವನು /
 ನೆರವೇರಿಸುವನಾತ 
ನಿನ್ನ ಮನದಾಸೆಯನು //
18 : ಸಜ್ಜನರಿಗೆ ಸಿಗುವ 
ಸೊತ್ತು ಶಾಶ್ವತ / 
ಪ್ರಭುವಿಗೆ ಗೊತ್ತು ಅವರ 
ಬಾಳಿನಂತ್ಯ //
23 : ಪ್ರಭುವಿಗೆ ಪ್ರಿಯವು 
ಮಾನವನ ಪ್ರವರ್ತನ / 
ಅವನ ನಡತೆಗೆ ಆತನೆ 
ಮಾರ್ಗದರ್ಶನ //
27 : ಕೆಟ್ಟದನು ಬಿಡು, 
ಒಳ್ಳೆಯದನು ಮಾಡು / 
ಸಿರಿನಾಡಿನಲಿ ಚಿರಕಾಲ ಬಾಳು //
29 : ಸಜ್ಜನರು 
ಸಿರಿನಾಡಿಗೆ ಬಾಧ್ಯಸ್ಥರು / 
ಅಲ್ಲವರು ಶಾಶ್ವತವಾಗಿ 
ಬಾಳುವರು //
===================
ಶುಭಸಂದೇಶ
==========
ಲೂಕ 17.7-10
7 : “ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, ‘ಬಾ, ನನ್ನೊಂದಿಗೆ ಊಟಮಾಡು,’ ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ.
8 : ಅದಕ್ಕೆ ಬದಲಾಗಿ ‘ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರ ಮಾಡು. ಅನಂತರ ನೀನು ಊಟ ಮಾಡುವೆಯಂತೆ,’ ಎಂದು ಹೇಳುತ್ತಾರಲ್ಲವೇ?
9 : ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ.
10 : ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.
===================
ಚಿಂತನೆ
ಕೆಲಸ ಮಾಡದೇ ಸತ್ತವರಿದ್ದಾರೆ, ಆದರೆ ಕೆಲಸ ಮಾಡಿ ಸತ್ತವರು ಯಾರೂ ಇಲ್ಲ. ಕೆಲಸವು ಮನುಷ್ಯನನ್ನು ಉನ್ನತಿಗೆ ಏರಿಸುತ್ತದೆ ಹೊರತು ಅವನತಿಗೆ ಇಳಿಸುವುದಿಲ್ಲ. ಜಗತ್ತಿನಲ್ಲಿ ಬದುಕ ಬೇಕೆನ್ನುವ,  ಸಾಧನೆ ಮಾಡಬೇಕೆನ್ನುವ ಮನುಷ್ಯನು ತನ್ನ ಜೀವನದಲ್ಲಿ ಏನನ್ನಾದರೂ ಮಾಡುತ್ತಲೇ ಇರಬೇಕು. ತನ್ನನ್ನು ಒಂದು ಉಪಯುಕ್ತ ಕೆಲಸದಲ್ಲಿ ತೊಡಗಿಸಿಕೊಳ್ಳಲಾರದ ಮನುಷ್ಯನು ತನಗಾಗಲಿ, ಇನ್ನೊಬ್ಬರಿಗಾಗಲಿ ಉಪಯೋಗವಾಗುವ ಮನುಷ್ಯನೇ ಅಲ್ಲ. ತಾನು ಕೈಗೆತ್ತಿಕೊಂಡ ಕೆಲಸವನ್ನು ಮನುಷ್ಯನು, ಅದರಲ್ಲಿ ತನ್ನ ಮನಸ್ಸನ್ನು ಸಂಪೂರ್ಣವಗಿ ತೊಡಗಿಸಿಕೊಂಡು ಶ್ರದ್ಧೆ, ವಿಶ್ವಾಸಗಳಿಂದ ಮಾಡಬೇಕು. ಮಾಡುವ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕವಾಗಿ ಮಾಡಿದರೆ ಮಾತ್ರ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವುದಾಗಿ ಯೇಸು ತಿಳಿಸುತ್ತಾರೆ.
==================="


2 comments:

  1. Slots of Vegas 2021 - How to play, win, and more!
    Vegas slots are the 순천 출장샵 most popular 거제 출장마사지 of all casino slots. It is a good idea 라이브스코어 to play slots for real money, you must know 경상북도 출장마사지 what the casino has to offer 동해 출장샵

    ReplyDelete