ನವೆಂಬರ್ 22, 2020 ಭಾನುವಾರ [ಬಿಳಿ]
ಅಖಿಲ ವಿಶ್ವದ ಅರಸ, ನಮ್ಮ ಪ್ರಭು ಯೇಸು ಕ್ರಿಸ್ತರ ಮಹೋತ್ಸವ
ಮೊದಲ ವಾಚನ: ಯೆಜೆಕಿಯೇಲ 34.11-12, 15-17
ಕೀರ್ತನೆ 23:1-3, 5-6, ಶ್ಲೋಕ.1
ಪ್ರಭು ಕುರಿಗಾಹಿಯಾಗಿರಲು ನನಗೆ,
ಕುಂದುಕೊರತೆಗಳೆಲ್ಲಿಯವು ಎನಗೆ?
ಎರಡನೇ ವಾಚನ: 1 ಕೊರಿಂಥಿಯರಿಗೆ 15.20-26, 28
ಶುಭಸಂದೇಶ: ಮತ್ತಾಯ 25.31-46
-----------------------------
ಸಂತ ಸಿಸಿಲೀಯ, ಕನ್ಯೆ ಮತ್ತು ರಕ್ತಸಾಕ್ಷಿ
==================
ಮೊದಲನೇ ವಾಚನ
ಯೆಜೆಕಿಯೇಲ 34.11-12, 15-17
11 : “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು.
12 : ಮಂದೆಯ ಕುರುಬನು ಸುತ್ತಮುತ್ತಲು ಚದರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು;
15 : ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ.
16 : “ತಪ್ಪಿಸಿಕೊಂಡಿದ್ದನ್ನು ಹುಡುಕುವೆನು, ದಾರಿತಪ್ಪಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದುದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನಾದರೋ ಧ್ವಂಸಮಾಡುವೆನು; ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.”
17 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – “ನನ್ನ ಹಿಂಡೇ, ಇಗೋ, ನಾನು ನಿಮ್ಮಲ್ಲಿನ ಕುರಿಮೇಕೆಗಳಿಗೂ ಟಗರುಹೋತಗಳಿಗೂ ಮಧ್ಯವರ್ತಿಯಾಗಿ ನ್ಯಾಯ ತೀರಿಸುವೆನು.
===================
ಕೀರ್ತನೆ
ಕೀರ್ತನೆ 23:1-3, 5-6, ಶ್ಲೋಕ.1
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ,
ಕುಂದುಕೊರತೆಗಳೆಲ್ಲಿಯವು ಎನಗೆ?
1 : ಪ್ರಭು ಕುರಿಗಾಹಿಯಾಗಿರಲು ನನಗೆ /
ಕುಂದುಕೊರತೆಗಳೆಲ್ಲಿಯವು ಎನಗೆ? //
2 : ಹಸಿರುಗಾವಲುಗಳಲೆನ್ನ ತಂಗಿಸುವನು /
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು //
3 : ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ /
ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ //
5 : ಸಜ್ಜುಗೊಳಿಸುವೆ ನೀ ಶತ್ರುಗಳ
ಕಣ್ಮುಂದೆಯೆ ನನಗೌತಣವನು /
ಹಚ್ಚುವೆ ತಲೆಗೆ ತೈಲವನು,
ತುಂಬಿತುಳುಕಿಸುವೆ ಪಾನಪಾತ್ರೆಯನು //
6 : ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ /
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ //
==================
ಎರಡನೇ ವಾಚನ
1 ಕೊರಿಂಥಿಯರಿಗೆ 15.20-26, 28
20 : ಕ್ರಿಸ್ತಯೇಸು ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ.
21 : ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು.
22 : ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ.
23 : ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯುತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಅನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ.
24 : ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು.
25 : ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ.
26 : ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ.
28 : ಎಲ್ಲವೂ ಕ್ರಿಸ್ತಯೇಸುವಿಗೆ ಅಧೀನವಾದಾಗ ಪುತ್ರನಾದ ಅವರೇ, ಎಲ್ಲವನ್ನು ತನಗೆ ಅಧೀನಪಡಿಸಿದ ದೇವರಿಗೆ ಅಧೀನರಾಗುತ್ತಾರೆ. ಆಗ ದೇವರು ಸರ್ವರಿಗೆ ಸರ್ವಸ್ವವೂ ಆಗುತ್ತಾರೆ.
ಶುಭಸಂದೇಶ
ಮತ್ತಾಯ 25.31-46
31 : “ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು.
32 : ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು.
33 : ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು.
34 : ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, ‘ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ. ಲೋಕಾದಿಯಿಂದ ನಿಮಗಾಗಿ ಸಿದ್ಧಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ.
35 : ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ.
36 : ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆ ಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ,’ ಎಂದು ಹೇಳುವನು.
37 : ಅದಕ್ಕೆ ಆ ಸಜ್ಜನರು, ‘ಸ್ವಾವಿೂ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು?
38 : ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯ ಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು?
39 : ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?’ ಎಂದು ಕೇಳುವರು.
40 : ಆಗ ಅರಸನು ಪ್ರತ್ಯುತ್ತರವಾಗಿ, ‘ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,’ ಎನ್ನುವನು.
41 : “ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, ‘ಶಾಪಗ್ರಸ್ತರೇ, ನನ್ನಿಂದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ.
42 : ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರ ಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ನೀಡಲಿಲ್ಲ.
43 : ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಲಿಲ್ಲ,’ ಎಂದು ಹೇಳುವನು.
44 : ಅದಕ್ಕೆ ಅವರು ಕೂಡ, ‘ಸ್ವಾವಿೂ, ತಾವು ಯಾವಾಗ ಹಸಿದಿದ್ದಿರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ ಮತ್ತು ಬಂಧಿಯಾಗಿದ್ದಿರಿ ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆ ಹೋದೆವು? ಎಂದು ಪ್ರಶ್ನಿಸುವರು.
45 : ಅದಕ್ಕೆ ಪ್ರತ್ಯುತ್ತರವಾಗಿ ಅರಸನು, ‘ಇವರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹಾಗೆ ಮಾಡದೆಹೋದಾಗ ಅದನ್ನು ನನಗೇ ಮಾಡಲಿಲ್ಲ,’ ಎನ್ನುವನು.
46 : “ಹೀಗೆ ಈ ದುರ್ಜನರು ನಿತ್ಯಶಿಕ್ಷೆಗೂ, ಆ ಸಜ್ಜನರು ನಿತ್ಯಜೀವಕ್ಕೂ ಹೋಗುವರು,” ಎಂದು ಹೇಳಿದರು ಸ್ವಾಮಿ.
===================
ಚಿಂತನೆ
ಅಖಿಲ ವಿಶ್ವದ ಅರಸ,
ನಮ್ಮ ಪ್ರಭು ಯೇಸು ಕ್ರಿಸ್ತರ ಮಹೋತ್ಸವ
========================
ಪೀಠಿಕೆ
======
ಚಕ್ರವರ್ತಿಗಳ ಚಕ್ರವರ್ತಿ, ಅರಸರ ಅರಸ, ರಾಜರ ರಾಜ ಪ್ರಭು ಯೇಸುಕ್ರಿಸ್ತ. ಈ ವಿಶ್ವದ ಯಾವ ರಾಜ್ಯವೂ ಶಾಶ್ವತವಲ್ಲವೆಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಭೂಪರಗಳ ಒಡೆಯನಾದ ಪ್ರಭು ಯೇಸುಕ್ರಿಸ್ತ ಮಾತ್ರ ನಿರಂತರವಾಗಿ ರಾಜ್ಯಭಾರ ಮಾಡುತ್ತಾರೆ ಏಕೆಂದರೆ ಅವರ ರಾಜ್ಯಕ್ಕೆ ಅಂತ್ಯವೇ ಇರದು. ಅದನ್ನು ಅಂತ್ಯಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ಶಾಂತಿಯ ರಾಜ್ಯ, ಸಹಬಾಳ್ವೆಯ ರಾಜ್ಯ, ಅಲ್ಲಿ ಯಾವ ಭಿನ್ನ-ಭಾವವೂ ತಲೆದೋರದು. ಅಲ್ಲಿ ಸರ್ವರೂ ಸಮಾನರು. ಇಂತಹ ರಾಜರ ಮಹೋತ್ಸವವನ್ನು ಸಂಭ್ರಮಿಸುವುದು ನಮ್ಮಲ್ಲರ ಸೌಭಾಗ್ಯವೇ ಸರಿ.
ಮೊದಲ ವಾಚನ:
ಎಜೆಕಿಯೇಲ 34.11-12, 15-17
====================
ಇಂದಿನ ಮೊದಲನೆಯ ವಾಚನದಲ್ಲಿ ಪ್ರವಾದಿ ಎಜೆಕಿಯೇಲ ಒಬ್ಬ ಉತ್ತಮ ರಾಜನನ್ನು ಉತ್ತಮ ಕುರಿಗಾಹಿಗೆ ಹೋಲಿಸುತ್ತಾನೆ. ಆ ಕುರಿಗಾಹಿಗೆ ತನ್ನ ಕುರಿಗಳ ಹಿತವೇ ಪ್ರಧಾನ ಹಾಗೂ ಅವನ ಅವುಗಳನ್ನು ರಕ್ಷಿಸಲು ಆತನು ತನ್ನನ್ನೇ ಸಂಪೂರ್ಣವಾಗಿ ಸಮರ್ಪಿಸುತ್ತಾನೆ . ಆತನು ಆಳುಗಳನ್ನು ನಂಬುವ ಬದಲು ತಾನೇ ಅವುಗಳ ಆರೈಕೆಗೆ ನಿಲ್ಲಲು ಪಣತೊಡುತ್ತಾನೆ.
ಎರಡನೇ ವಾಚನ:
1 ಕೊರಿಂಥಿಯರಿಗೆ 15.20-26, 28
======================
ಎರಡನೆಯ ವಾಚನದಲ್ಲಿ ಪ್ರಭು ಯೇಸು 'ಸರ್ವರಿಗೆ ಸರ್ವಸ್ವವೂ' ಆಗುತ್ತಾರೆ ಎಂದು ಸಂತ ಪೌಲನು ಕೊರಿಂಥಿಯದ ಭಕ್ತಾದಿಗಳಿಗೆ ಆಭಯವನ್ನು ನೀಡುತ್ತಾನೆ. ಮಾತ್ರವಲ್ಲದೆ ಇನ್ನೂ ಸಾವು ಯಾರನ್ನೂ ಹಿಡಿದಿಟ್ಟುಕೊಳ್ಳುಲು ಸಾಧ್ಯವಿಲ್ಲ ಏಕೆಂದರೆ ಪ್ರಭು ಎಲ್ಲರಿಗಾಗಿಯೂ ಸತ್ತು ಪುನರುತ್ಥಾನರಾಗಿದ್ದಾರೆ ಅವರ ರಾಜ್ಯಕ್ಕೆ ಅಂತ್ಯವಿಲ್ಲ ಎಂದೇ ಆತನ ಹೇಳಿಕೆ.
ಶುಭಸಂದೇಶ:
ಮತ್ತಾಯ 25.31-46
==============
ಇಂದಿನ ಶುಭಸಂದೇಶ ಪ್ರಭು ಕ್ರಿಸ್ತನ ರಾಜ್ಯಕ್ಕೆ ಭಾಜನರಾಗುವವರು ಯಾರು ಎಂಬುದನ್ನು ವಿವರಿಸುತ್ತದೆ. ಈ ಸಾಮ್ರಾಜ್ಯವನ್ನು ವಾಸ್ತವಿಕವಾಗಿ ಪಡೆಯಲು
1. ಫಲಾಪೇಕ್ಷೆಯಿಲ್ಲದೆ ಪರೋಪಕಾರಿಯಾಗಿರಬೇಕು. ಅಂದರೆ ಹಸಿದವರಿಗೆ ಅಹಾರ, ಬಾಯಾರಿದವರಿಗೆ ಪಾನೀಯ, ಅಪರಿಚಿತರಿಗೆ ಆಶ್ರಯ, ಉಡಲು ಬಟ್ಟೆ, ರೋಗಿಗಳ ಆರೈಕೆ, ಬಂಧಿತರ ಭೇಟಿ ಹೀಗೆ ಪರೋಪಕಾರಿ ಸೇವೆ ನಿರಂತರವಾಗಿ ಹಾಗೂ ನಿರಾಯಾಸವಾಗಿ ಅಡೆ ತಡೆ ಇಲ್ಲದೆ ಸಾಗುತ್ತಿರಬೇಕು.
2. ನಮ್ಮ ಬದುಕು ಶುದ್ಧೀಕರಣವಾಗುತ್ತಿರಬೇಕು. ಆಂದರೆ ಮನಶುದ್ಧಿ, ತನುಶುದ್ಧಿಯಾಗಿ ಆತ್ಮ ಶುದ್ಧಿಯಾಗುತ್ತಿರಬೇಕು. ಬಾಹ್ಯದಲ್ಲಿ ಪರೋಪಕಾರಿಯಾಗಿ ಆಂತರ್ಯದಲ್ಲಿ ಲೌಕಿಕ ವ್ಯಾಮೋಹಗಳಿಂದ ತುಂಬಿದ್ದರೆ ಪರೋಪಕಾರ ನಿಷ್ಫಲ.
3. ಇಲ್ಲಿರುವ ಎಲ್ಲಾ ರಾಜ್ಯಗಳು ಕಾಲಮಿತಿಯೊಳಗೆ ಮರೆಯಾಗುತ್ತವೆ ಆದರೆ ಪ್ರಭುವಿನ ರಾಜ್ಯ ಶಾಶ್ವತ ಎಂಬ ಆಳವಾದ ಅರಿವೂ ನಂಬಿಕೆಯೂ ನಮ್ಮಲ್ಲಿ ನವನವೀನವಾಗಿರಬೇಕು. ಆಗ ಮಾತ್ರ ಪ್ರಭು ಕ್ರಿಸ್ತನ ರಾಜ್ಯಕ್ಕೆ ಭಾಜನರಾಗಲು ಸಾಧ್ಯ.
ಏಕೆಂದರೆ ಪ್ರಭು ಕ್ರಿಸ್ತನ ರಾಜ್ಯ ಪ್ರೀತಿಯ ರಾಜ್ಯ, ಪ್ರಭು ಕ್ರಿಸ್ತನ ರಾಜ್ಯ ನೀತಿಯ ರಾಜ್ಯ, ಪ್ರಭು ಕ್ರಿಸ್ತನ ರಾಜ್ಯ ಶಾಂತಿಯ ರಾಜ್ಯ, ಪ್ರಭು ಕ್ರಿಸ್ತನ ರಾಜ್ಯ ಸಮೃದ್ಧಿಯ ರಾಜ್ಯ, ಪ್ರಭು ಕ್ರಿಸ್ತನ ರಾಜ್ಯ ನಮ್ಮೆಲ್ಲರ ರಾಜ್ಯ. ಆಲ್ಲಿ ನ್ಯಾಯನೀತಿ ರಾಜ್ಯವಾಳುತ್ತವೆ ಹಾಗೂ ಸ್ನೇಹಪ್ರೀತಿ ಪ್ರವರ್ಧಿಸುತ್ತವೆ. ಇಂತಹ ರಾಜ್ಯದ ಸ್ಥಾಪನೆಗೆ ಪ್ರಭು ನಮ್ಮೆಲ್ಲರ ಸಹಕಾರವನ್ನು ಬಯಸುತ್ತಾರೆ.ಬನ್ನಿ ಕಟ್ಟೋಣ ನಮ್ಮ ಪ್ರಭು ಕ್ರಿಸ್ತನ ರಾಜ್ಯವನು.
==============
ಚಿಂತನೆ – ಫಾ ವಿಜಯ್ ಕುಮಾರ್,
ಬಳ್ಳಾರಿ ಧರ್ಮಕ್ಷೇತ್ರ

No comments:
Post a Comment