ನವೆಂಬರ್ 6, 2020 ಶುಕ್ರವಾರ [ಹಸಿರು]
ಮೊದಲ ವಾಚನ: ಫಿಲಿಪ್ಪಿಯರಿಗೆ 3.17-4.1
ಕೀರ್ತನೆ 122:1-5 ಶ್ಲೋಕ.1
ಪ್ರಭುವಿನ ಆಲಯಕ್ಕೆ ಹೋಗೋಣ
ಬಾ ಎಂದು ಜನರೆನ್ನ ಕರೆದಾಗ ಆಯಿತೆನಗೆ ಆನಂದ
ಶುಭಸಂದೇಶ: ಲೂಕ 16.1-8
==================
ಮೊದಲ ವಾಚನ: ಫಿಲಿಪ್ಪಿಯರಿಗೆ 3.17-4.1
ಕೀರ್ತನೆ 122:1-5 ಶ್ಲೋಕ.1
ಪ್ರಭುವಿನ ಆಲಯಕ್ಕೆ ಹೋಗೋಣ
ಬಾ ಎಂದು ಜನರೆನ್ನ ಕರೆದಾಗ ಆಯಿತೆನಗೆ ಆನಂದ
ಶುಭಸಂದೇಶ: ಲೂಕ 16.1-8
==================
ಮೊದಲನೇ ವಾಚನ
ಫಿಲಿಪ್ಪಿಯರಿಗೆ 3.17-4.1
17 : ಸಹೋದರರೇ, ನೀವು ನನ್ನನ್ನು ಅನುಸರಿಸಿರಿ. ನಮ್ಮಂತೆ ಆದರ್ಶಜೀವನ ನಡೆಸುವವರನ್ನು ಅನುಸರಿಸಿ ಬಾಳಿರಿ.
18 : ಕ್ರಿಸ್ತಯೇಸುವಿನ ಶಿಲುಬೆಗೆ ವಿರೋಧವಾಗಿ ನಡೆಯುವವರು ಅನೇಕರಿದ್ದಾರೆ. ಇದನ್ನು ನಾನು ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಅತೀವ ದುಃಖದಿಂದ ಹೇಳುತ್ತಿದ್ದೇನೆ.
19 : ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕಾರ್ಯಗಳಲ್ಲಿಯೇ ಅವರಿಗೆ ಹೆಮ್ಮೆ, ನಶ್ವರವಾದ ವಿಷಯಗಳಲ್ಲಿಯೇ ಅವರಿಗೆ ವ್ಯಾಮೋಹ. ಹೀಗಾಗಿ, ವಿನಾಶವೇ ಅವರ ಅಂತ್ಯ.
20 : ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು, ಉದ್ಧಾರಕರಾದ ಪ್ರಭು ಯೇಸುಕ್ರಿಸ್ತರು ಪುನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ.
21 : ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ನಶ್ವರವಾದ ನಮ್ಮ ದೀನ ದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು.
1 : ಹೀಗಿರಲಾಗಿ ಒಲವಿನ ಸಹೋದರರೇ, ನನ್ನ ಅತಿ ಪ್ರಿಯರೇ, ಆಪ್ತರೇ, ನನ್ನ ಮುದವೂ ಮುಕುಟವೂ ಆದವರೇ, ಪ್ರಭುವಿನಲ್ಲಿ ದೃಢ ವಿಶ್ವಾಸಿಗಳಾಗಿ ಬಾಳಿರಿ.
===================
ಕೀರ್ತನೆ
ಕೀರ್ತನೆ 122:1-5 ಶ್ಲೋಕ.1
ಪ್ರಭುವಿನ ಆಲಯಕ್ಕೆ ಹೋಗೋಣ
ಬಾ ಎಂದು ಜನರೆನ್ನ ಕರೆದಾಗ
ಆಯಿತೆನಗೆ ಆನಂದ
1 : ಪ್ರಭುವಿನಾಲಯಕೆ
ಹೋಗೋಣ ಬಾ ಎಂದಾಗ /
ಆಯಿತೆನಗೆ ಆನಂದ,
ಜನರೆನ್ನ ಕರೆದಾಗ //
2 : ನಮ್ಮ ಕಾಲುಗಳು
ಓ ಜೆರುಸಲೇಮೇ /
ತಲುಪಿವೆ ನಿನ್ನ
ಪುರದ್ವಾರಗಳನೇ //
3 : ನೋಡು, ಜೆರುಸಲೇಮ್
ಪಟ್ಟಣವಿದು /
ಗಟ್ಟಿಯಾಗಿಯೆ
ಕಟ್ಟಲ್ಪಟ್ಟಿಹುದು //
4 : ಕುಲಗಳು ಯಾತ್ರೆಯಾಗಿ
ಬರುವುವು ಇಲ್ಲಿಗೆ /
ಮಾಡುವರಿಲ್ಲಿಯೆ
ಪ್ರಭುವಿನ ನಾಮ ಕೀರ್ತನೆ /
ಪಾಲಿಪರಿಂತು ಇಸ್ರೇಲರಿಗೆ
ವಿಧಿಸಿದಾಜ್ಞೆ //
5 : ಸ್ಥಾಪಿತವಾಗಿವೆಯಿಲ್ಲಿ
ನ್ಯಾಯಪೀಠಗಳು /
ದಾವೀದನ ಮನೆತನದವರ
ಸಿಂಹಾಸನ ಗಳು //
================
ಲೂಕ 16.1-8
1 : ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ ಇಂತೆಂದರು: “ಒಬ್ಬ ಧನಿಕನಿದ್ದ. ಅವನ ವ್ಯವಹಾರವನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು.
2 : ಧನಿಕನು ಅವನನ್ನು ಕರೆದು, ‘ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲ ಕೇಳುತ್ತಾ ಇದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿ ಆಗಿರಲು ಆಗದು,’ ಎಂದ.
3 : ಆಗ ಮೇಸ್ತ್ರಿ, ‘ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದು ಬಿಡುತ್ತಾನಲ್ಲಾ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ,’ ಎಂದು ಚಿಂತಾಕ್ರಾಂತನಾದ.
4 : ಮರುಕ್ಷಣ, ‘ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು,’ ಎಂದುಕೊಂಡ.
5 : ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡು, ‘ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲ ಎಷ್ಟು?’ ಎಂದು ಮೊದಲನೆಯವನನ್ನು ಕೇಳಿದ.
6 : ಅವನು, ‘ನೂರು ಬುದ್ದಲಿ ಎಣ್ಣೆ,’ ಎಂದ. ಅದಕ್ಕೆ ಮೇಸ್ತ್ರಿ, ‘ಇಗೋ, ನಿನ್ನ ಪತ್ರ, ಕುಳಿತುಕೊಂಡು “ಐವತ್ತು” ಎಂದು ಬೇಗನೆ ಬರೆ,’ ಎಂದ.
7 : ಬಳಿಕ ಇನ್ನೊಬ್ಬನನ್ನು ಕರೆದು, ‘ನೀನೆಷ್ಟು ಸಾಲ ತೀರಿಸಬೇಕು?’ ಎಂದು ಕೇಳಿದ. ಅವನು ‘ನೂರು ಖಂಡುಗ ಗೋದಿ’ ಎಂದಾಗ ‘ಇಗೋ ನಿನ್ನ ಪತ್ರ, “ಎಂಬತ್ತು” ಎಂದು ಬರೆ’, ಎಂದ.
8 : “ಈ ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ. ಏಕೆಂದರೆ, ತಮ್ಮ ತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು.
===================
ಚಿಂತನೆ
ದೇಶದ ಎಲ್ಲೆಡೆ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ. ಬರೀ ಲೂಟಿ ಮಾಡುವುದಷ್ಟೇ ಭ್ರಷ್ಟಚಾರವಲ್ಲ, ಮಾನವ ತನ್ನ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಮಾಡುವುದು ಮತ್ತು ಅದರಂತೆ ನಡೆದುಕೊಳ್ಳುವುದು ಸಹ ಒಂದು ರೀತಿ ಭ್ರಷ್ಟಾಚಾರ. ಇಂದಿನ ಸಾಮತಿಯಲ್ಲಿ ಮೇಸ್ತ್ರಿಯ ಮುಂದಾಲೋಚನೆ, ಕುಯುಕ್ತಿಯನ್ನು ಆತನ ಒಡೆಯ ಪ್ರಶಂಸಿರಬಹುದು. ಆದರೆ ಇದು ಬರೇ ಲೌಕಿಕ ಜೀವನವಲ್ಲ ಆದರೆ ಕುಯುಕ್ತಿ, ದುರಾಲೋಚನೆ ಆಧ್ಯಾತ್ಮಿಕ ಜೀವನಕ್ಕೆ ಕುಂದು ಇಲ್ಲ. ಪ್ರಾಮಾಣಿಕತೆ, ನೈತಿಕತೆಯೇ ಅನಿವಾರ್ಯ. ಅಂತಿಮವಾಗಿ ಗೆಲ್ಲುವುದು. ಸಮಾಜದಲ್ಲಿ ಎಲ್ಲೆಲ್ಲೂ ಲಂಚಕೋರತನ, ಭ್ರಷ್ಟಾಚಾರ ತಾಂಡವವಾಡುತ್ತದೆ. ನೈತಿಕ ಮೌಲ್ಯಗಳು ಮಾಯವಾಗುತ್ತಿವೆ. ಹೆಚ್ಚು ಕಲಿತವರೇ ಸುಲಭವಾಗಿ ಭ್ರಷ್ಟರಾಗುತ್ತಾರೆ. ಆದರೆ, ಪಾರಮಾರ್ಥಿಕ ದೃಷ್ಟಿಯಿಂದ ಜೀವನದಲ್ಲಿ ನೈತಿಕ ಮೌಲ್ಯಗಳು ಅಗತ್ಯವಾಗಿದ್ದು ಅವುಗಳನ್ನು ಮೈಗೂಡಿಸಿಕೊಂಡು ಮಾದರಿ ವ್ಯಕ್ತಿಗಳಾಗಬೇಕೆಂದು ಯೇಸು ಆದೇಶಿಸುತ್ತಾರೆ

No comments:
Post a Comment